ವಿಮಾನ ನಿಲ್ದಾಣ ಪ್ರಾಧಿಕಾರ(AAI); ಶಿಶುಕ್ಷು ತರಬೇತಿಗೆ ಅರ್ಜಿ ಆಹ್ವಾನ

ಉತ್ತರ ವಲಯ(NR)ದ ಅಭ್ಯರ್ಥಿಗಳಿಗೆ ಆದ್ಯತೆ | ಅರ್ಜಿ ಸಲ್ಲಿಕೆಗೆ ಮಾ.22ರ ಗಡುವು

Published on:

ಫಾಲೋ ಮಾಡಿ
AAI Apprentice Northern Region Notification 2026
AAI Apprenticeship 2026

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ತನ್ನ ಪ್ರಾದೇಶಿಕ ಪ್ರಧಾನ ಕಚೇರಿ(ಉತ್ತರ ವಲಯ) ವ್ಯಾಪ್ತಿಯ ವಿವಿಧ ವಿಮಾನ ನಿಲ್ದಾಣಗಳಿಗೆ ಅಪ್ರೆಂಟಿಸ್ ಕಾಯ್ದೆಯಡಿ ಪದವೀಧರ, ಡಿಪ್ಲೊಮಾ, ಐಟಿಐ ಅಪ್ರೆಂಟಿಸ್‌ಶಿಪ್‌ ತರಬೇತಿಗೆ ಅರ್ಜಿ ಆಹ್ವಾನಿಸಿದೆ.

ಪದವೀಧರರಿಗೆ 22 ಸ್ಥಾನ, ಡಿಪ್ಲೊಮಾ ಅಭ್ಯರ್ಥಿಗಳಿಗೆ 64 ಸ್ಥಾನ, ಐಟಿಐ ಅಭ್ಯರ್ಥಿಗಳಿಗೆ 47 ಸ್ಥಾನ ಸೇರಿದಂತೆ ಒಟ್ಟು 133 ಸ್ಥಾನಗಳಿಗೆ ಆಯ್ಕೆ ನಡೆಯಲಿದ್ದು, ಆಯ್ದ ಅಭ್ಯರ್ಥಿಗಳಿಗೆ 01 ವರ್ಷದ ಅವಧಿಯವರೆಗೆ ತರಬೇತಿ ಒದಗಿಸಲಿದೆ. ವ್ಯಾಪ್ತಿಗೆ ಒಳಪಡುವ ಆಸಕ್ತರು ಪದವೀಧರ/ಡಿಪ್ಲೊಮಾ ಅಪ್ರೆಂಟಿಸ್‌ಗಾಗಿ https://nats.education.gov.in/, ಐಟಿಐ ಅಪ್ರೆಂಟಿಸ್‌ಗಾಗಿ https://www.apprenticeshipindia.gov.in/ನ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಗೆ ಮಾ.22 ಕೊನೆಯ ದಿನವಾಗಿದೆ.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment