ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಈಶಾನ್ಯ ಪ್ರದೇಶದಲ್ಲಿನ ನಾನ್ ಎಕ್ಸಿಕ್ಯೂಟಿವ್ ವೃಂದದ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಗೊಳಿಸಿದೆ. ಅರ್ಜಿ ಸಲ್ಲಿಕೆ ಡಿ.12 ರಿಂದ ಪ್ರಾರಂಭವಾಗಿದೆ.
ಹಿರಿಯ ಸಹಾಯಕ, ಜೂನಿಯರ್ ಸಹಾಯಕ (HR) ಮತ್ತು ಜೂನಿಯರ್ ಸಹಾಯಕ ಸೇರಿದಂತೆ ಒಟ್ಟು 14 ನಾನ್ ಎಕ್ಸಿಕ್ಯೂಟಿವ್ ವೃಂದದ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2026ರ ಜನವರಿ 11 ರೊಳಗೆ AAI ಅಧಿಕೃತ ಜಾಲತಾಣ https://www.aai.aero/en/careers/recruitment ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜನವರಿ 11, 2026
ಹುದ್ದೆಗಳ ವಿವರ:
ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್) – 05ಹುದ್ದೆಗಳು ಜೂನಿಯರ್ ಸಹಾಯಕ (HR) – 02ಹುದ್ದೆಗಳು ಜೂನಿಯರ್ ಸಹಾಯಕ (ಫೈಯರ್ ಸರ್ವಿಸಸ್) – 07 ಹುದ್ದೆಗಳು
ಒಟ್ಟು – 14 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
✓ ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಎಲೆಕ್ಟ್ರಾನಿಕ್ಸ್/ದೂರಸಂಪರ್ಕ/ರೇಡಿಯೋ ವಿಭಾಗದ ಎಂಜಿನಿಯರಿಂಗ್ನಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.
✓ ಜೂನಿಯರ್ ಸಹಾಯಕ (HR) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ ಪೂರ್ಣಗೊಳಿಸಿರಬೇಕು.
✓ ಜೂನಿಯರ್ ಸಹಾಯಕ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿಯಲ್ಲಿ ಉತ್ತೀರ್ಣ ಜೊತೆಗೆ ಮೆಕ್ಯಾನಿಕಲ್/ಆಟೋಮೊಬೈಲ್/ಅಗ್ನಿಶಾಮಕದಳ ವಿಷಯದಲ್ಲಿ 3 ವರ್ಷಗಳ ಡಿಪ್ಲೊಮಾ ಪೂರ್ಣಗೊಳಿಸಿರಬೇಕು ಅಥವಾ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು.
ವಯೋಮಿತಿ:
06-12-2025 ರಂತೆ;
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು
ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 10 -15 ವರ್ಷಗಳು, ವಿಧವೆಯರು, ವಿಚ್ಛೇದಿತ ಮಹಿಳೆಯರು ಮತ್ತು ವಿಚ್ಛೇದಿತರಾಗಿ ಮರುಮದುವೆಯಾಗದ ಮಹಿಳೆಯರಿಗೆ – 05-10 ವರ್ಷಗಳು.
ಆಯ್ಕೆ ಪ್ರಕ್ರಿಯೆ:
ಹಂತ 1: ಲಿಖಿತ ಪರೀಕ್ಷೆ (ಕಂಪ್ಯೂಟರ್ ಆಧಾರಿತ ಪರೀಕ್ಷೆ) ಹಂತ 2: ದೈಹಿಕ ಸಹಿಷ್ಣುತೆ ಪರೀಕ್ಷೆ (ಪಿಇಟಿ) ದಾಖಲಾತಿ ಪರಿಶೀಲನೆ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 31,000ರೂ.ಗಳಿಂದ 1,10,000ರೂ.ವರೆಗೆ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.
ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್) – ವೇತನ ಶ್ರೇಣಿ ರೂ.36,000-3%- 1,10,000 ಜೂನಿಯರ್ ಸಹಾಯಕ (ಫೈಯರ್ ಸರ್ವಿಸಸ್), ಜೂನಿಯರ್ ಸಹಾಯಕ (HR) – ವೇತನ ಶ್ರೇಣಿ ರೂ.31,000-3% – 92,000
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – 1000ರೂ. ಪ.ಜಾತಿ, ಪ.ಪಂಗಡ, ಮಹಿಳೆಯರು, ಪಿಡಬ್ಲ್ಯೂಡಿ, ಮಾಜಿ ಸೈನಿಕ ಹಾಗೂ AAIನಲ್ಲಿ 01 ವರ್ಷ ಅಪ್ರೆಂಟಿಸ್ ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ ಹೇಗೆ.?
• AAI ನೇಮಕಾತಿಯ ಅಧಿಕೃತ ಜಾಲತಾಣ https://www.aai.aero/en/careers/recruitment ಕ್ಕೆ ಭೇಟಿ ನೀಡಿ.
• “ಈಶಾನ್ಯ ಪ್ರದೇಶದ ಕಾರ್ಯನಿರ್ವಾಹಕೇತರ ವೃಂದದ ನೇಮಕಾತಿ ಅಧಿಸೂಚನೆ (ಜಾಹೀರಾತು. ಸಂಖ್ಯೆ. 01/2025/DR/NER)” – ವಿಭಾಗದಲ್ಲಿ ನೀಡಲಾಗಿರುವ ಆನ್ಲೈನ್ ನೋಂದಣಿಯ ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ ಅರ್ಜಿ ಸಲ್ಲಿಸಲು ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗುವ ವೈಯಕ್ತಿಕ ವಿವರಗಳು, ಸಹಿ, ಭಾವಚಿತ್ರ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.
• ಮತ್ತೊಮ್ಮೆ ಅರ್ಜಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ, ಸರಿಪಡಿಸಿ ಅರ್ಜಿ ಸಲ್ಲಿಸಿ.
• ಅಂತಿಮವಾಗಿ ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
I needs job
Diploma completed
2ND PUC COMPLETE
Puc 11 college