ಕರ್ನಾಟಕ ಟಿಇಟಿ ಪರೀಕ್ಷೆ 2025; ಕೀ ಉತ್ತರ ಪ್ರಕಟ

Published on:

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2025ರ ಪರೀಕ್ಷೆಯ ಕೀ ಉತ್ತರಗಳನ್ನು ಶಾಲಾ ಶಿಕ್ಷಣ ಇಲಾಖೆ ಭಾನುವಾರ ಬಿಡುಗಡೆ ಮಾಡಿದೆ.

ಎರಡು ಪತ್ರಿಕೆಯನ್ನೊಳಗೊಂಡ ಪರೀಕ್ಷೆಯನ್ನು ಡಿ.07ರಂದು ನಡೆಸಲಾಗಿತ್ತು. ಸದರಿ ಪರೀಕ್ಷೆಯ ಕೀ ಉತ್ತರಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ https://schooleducation.karnataka.gov.in/ನಲ್ಲಿ ಪ್ರಕಟಿಸಲಾಗಿದ್ದು, ಕೀ ಉತ್ತರಗಳಿಗೆ ಡಿ.09 ರಿಂದ 12ರೊಳಗೆ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ನೀಡಲಾಗಿದೆ ಎಂದು ಕೇಂದ್ರೀಕೃತ ದಾಖಲಾತಿ ಘಟಕದ ನಿರ್ದೇಶಕರು ಹೊರಡಿಸಿದ ಪ್ರಕಟಣೆ ತಿಳಿಸಿದೆ.

ಕೀ ಉತ್ತರ ಡೌನ್ಲೋಡ್‌ ಮಾಡುವುದು ಹೇಗೆ?

ಹಂತ-1 ಅಧಿಕೃತ ಜಾಲತಾಣ https://schooleducation.karnataka.gov.in/ ಅಥವಾ https://sts.karnataka.gov.in/TET/ಕ್ಕೆ ಭೇಟಿ ನೀಡಿ

ಹಂತ-2 ಮುಖ ಪುಟದಲ್ಲಿ ನೀಡಲಾದ “KARTET-2025 Key Answers” ಲಿಂಕ್‌ನ ಗುಂಡಿ ಮೇಲೆ ಒತ್ತುವ ಮೂಲಕ ಕೀ ಉತ್ತರವಿರುವ ಪಿಡಿಎಫ್‌ ಡೌನ್ಲೋಡ್‌ ಮಾಡಿಕೊಳ್ಳಬಹುದು.

Important Direct Links:

KARTET-2025 Key Answers PDFDownload
Official Websiteschooleducation.karnataka.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

5 thoughts on “ಕರ್ನಾಟಕ ಟಿಇಟಿ ಪರೀಕ್ಷೆ 2025; ಕೀ ಉತ್ತರ ಪ್ರಕಟ”

Leave a Comment