RRB ತಂತ್ರಜ್ಞ ಗ್ರೇಡ್ I ಸಿಗ್ನಲ್ ಮತ್ತು ಗ್ರೇಡ್ III ಅರ್ಜಿ ಸ್ಟೇಟಸ್‌ ಬಿಡುಗಡೆ

Published on:

ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್‌ ನಂ.02/2025ರಡಿ ಅಧಿಸೂಚಿಸಿದ್ದ ಟೆಕ್ನಿಷಿಯನ್‌ ಗ್ರೇಡ್‌ I ಸಿಗ್ನಲ್‌ ಮತ್ತು ವಿವಿಧ ವರ್ಗಗಳ ಟೆಕ್ನಿಷಿಯನ್‌ ಗ್ರೇಡ್‌ III ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಅರ್ಜಿ ಸ್ಥಿತಿಯನ್ನು ಡಿ.8 ರಿಂದ ಪರಿಶೀಲಿಕೊಳ್ಳಬಹುದು.

ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳ ಪರಿಶೀಲನೆ ಪೂರ್ಣಗೊಂಡಿದ್ದು, ಸ್ವೀಕೃತ ಹಾಗೂ ತಿರಸ್ಕೃತ ಅರ್ಜಿಗಳ ಮಾಹಿತಿಯನ್ನು http://www.rrbapply.gov.in/ನಲ್ಲಿ ಬಿಡುಗಡೆ ಮಾಡಲಾಗಿದೆ ಜೊತೆಗೆ ಅಭ್ಯರ್ಥಿಗಳು ನೋಂದಣಿ ಮಾಡಿರುವ ಮೊಬೈಲ್‌ ನಂಬರ್‌ಗೆ ಎಸ್‌ಎಮ್‌ಎಸ್‌ ಮೂಲಕವೂ ಮಾಹಿತಿ ಕಳುಹಿಸಲಾಗಿದೆ ಎಂದು ಮಂಡಳಿ ಹೊರಡಿಸಿದ ಪ್ರಕಟಣೆ ತಿಳಿಸಿದೆ.

How to Check RRB Technician Grade I Signal and Technician Grade III Application Status 2025

• ಆರ್‌ಆರ್‌ಬಿ ಅಧಿಕೃತ ವೆಬ್‌ಸೈಟ್‌ ಲಾಗಿನ್‌ ಲಿಂಕ್‌ https://www.rrbapply.gov.in/#/auth/homeಗೆ ಭೇಟಿ ನೀಡಿ.

• ಬಳಿಕ ಮೊಬೈಲ್ ಸಂಖ್ಯೆ/ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

• ಮುಂದೆ “Application History” ಲಿಂಕ್ ಮೇಲೆ ಕ್ಲಿಕ್ ಮಾಡಿ.

• ನಂತರ ಅಲ್ಲಿ”CEN NO. 02/2025 for Recruitment of Technician Grade-I Signal and Various Categories of Technician Grade- III“ರ ಮುಂದೆ “Application Status” ಶಿರ್ಷೀಕೆಯಡಿ “Provisionally Accepted” ಅಥವಾ “Conditionally Accepted” ಅಥವಾ “Conditionally Rejected” ನೀಡಲಾಗಿರುತ್ತದೆ.

• ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸ್ವೀಕರಿಸಲಾಗಿದೆಯೇ ಅಥವಾ ತಿರಸ್ಕರಿಸಲಾಗಿದೆಯೇ ಎಂದು ಈ ಮೇಲಿನ ರೀತಿ ಪರಿಶೀಲನೆ ಮಾಡಿಕೊಳ್ಳಬಹುದು.

Important Direct Links:

Notice PDFDownload
RRB Technician Grade I Signal and Technician Grade III Application Status 2025 Check LinkCheck Now
Official WebsiteRRBs
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

5 thoughts on “RRB ತಂತ್ರಜ್ಞ ಗ್ರೇಡ್ I ಸಿಗ್ನಲ್ ಮತ್ತು ಗ್ರೇಡ್ III ಅರ್ಜಿ ಸ್ಟೇಟಸ್‌ ಬಿಡುಗಡೆ”

Leave a Comment