2025-26ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯ ಮಾದರಿ ಶಾಲೆಗೆ 6ನೇ ತರಗತಿಗೆ ಪ್ರವೇಶಕ್ಕೆ ಸಂಬಂಧಿಸಿದ ಮೂರನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ.
6ನೇ ತರಗತಿ ಪ್ರವೇಶಾತಿಗಾಗಿ ಮಾ.23ರಂದು ಪ್ರವೇಶ ಪರೀಕ್ಷೆಯನ್ನು ನಡೆಸಲಾಗಿತ್ತು. ಸದರಿ ಪರೀಕ್ಷೆಯ ಎರಡು ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಬಿಡುಗಡೆ ಮಾಡಿತ್ತು, ಜು.10ರಂದು ಮೂರನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ತನ್ನ ಅಧಿಕೃತ ವೆಬ್ಸೈಟ್ http://164.100.133.7:82/home.aspx ನಲ್ಲಿ ಬಿಡುಗಡೆಗೊಳಿಸಿದೆ. ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಸೀಟು ಹಂಚಿಕೆಯ ಫಲಿತಾಂಶವನ್ನು ಪರಿಶೀಲಿಸಬಹುದು ಎಂದು ವಿದ್ಯಾಲಯ ಜಾಲತಾಣದಲ್ಲಿ ಬಿತ್ತರಿಸಿದೆ.
How to Check Adarsha Vidyalaya 3rd Round Result 2025
ಮೂರನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ನೋಡುವುದು ಹೀಗೆ;
- ಮೊದಲು ಆದರ್ಶ ವಿದ್ಯಾಲಯ ಮಾದರಿ ಶಾಲೆಯ ಅಧಿಕೃತ ವೆಬ್ ಸೈಟ್ http://164.100.133.7:82/home.aspxಗೆ ಭೇಟಿ ನೀಡಿ.
- 2025-26- 6 ನೇ ತರಗತಿಗೆ ಪ್ರವೇಶ -> “ಸೀಟು ಹಂಚಿಕೆಯನ್ನು ಪರಿಶೀಲಿಸಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನೋಂದಣಿ ಸಂಖ್ಯೆ ಹಾಗೂ ಎಸ್ಎಟಿಎಸ್ ಸಂಖ್ಯೆ ನಮೂದಿಸಿ.
- ನಂತರ Submit ಮಾಡಿ
- ಕೊನೆಗೆ ಅಲ್ಲಿ ಫಲಿತಾಂಶ ತೋರಿಸುತ್ತದೆ.
ಆಯ್ಕೆಯಾದ ವಿದ್ಯಾರ್ಥಿಗಳು ಮುಂದೇನು?
ಫಲಿತಾಂಶದ ನಂತರ ಅಗತ್ಯ ದಾಖಲಾತಿಗಳೊಂದಿಗೆ ಆಯ್ಕೆ ಮಾಡಿದ ಆದರ್ಶ ವಿದ್ಯಾಲಯ ಮಾದರಿ ಶಾಲೆಗೆ ಭೇಟಿ ನೀಡಿ ಪ್ರವೇಶಾತಿ ಪಡೆಯಬಹುದು. ಪ್ರವೇಶ ಪಡೆಯಲು ಜು.17 ಕೊನೆ ದಿನವಾಗಿದೆ.
Important Direct Links:
Adarsha Vidyalaya 3rd Round Cutoff 2025 PDF | Download |
Adarsha Vidyalaya 3rd Round Result 2025 Link | Check Now |
More Updates | KarnatakaHelp.in |