ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್(IOCL)ನ ಮಥುರಾ ಸಂಸ್ಕರಣಾ ಘಟಕದ ವಿವಿಧ ವಿಭಾಗಗಳಿಗೆ 1961ರ ಅಪ್ರೆಂಟಿಸ್ ಕಾಯ್ದೆಯಡಿ ಟ್ರೇಡ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್‌ಶಿಪ್‌ಗೆ ಅರ್ಜಿ ಆಹ್ವಾನಿಸಲಾಗಿದೆ.
ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಇನ್ಸ್ಟ್ರುಮೆಂಟೇಶನ್, ಅಕೌಂಟೆಂಟ್ ವಿಭಾಗಗಳಿಗೆ ಟ್ರೇಡ್ ಅಪ್ರೆಂಟಿಸ್ 42 ಸೀಟುಗಳು ಹಾಗೂ ಟೆಕ್ನಿಷಿಯನ್ ಅಪ್ರೆಂಟಿಸ್ 66 ಸೀಟುಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಸಂಬಂಧಿಸಿದ ಟ್ರೇಡ್‌ನಲ್ಲಿ ಐಟಿಐ/ವಿಷಯದಲ್ಲಿ ಪದವಿ ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡು ತರಬೇತಿ ಒದಗಿಸಲಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆ.20ರೊಳಗೆ https://www.apprenticeshipindia.gov.in/ ಅಥವಾ https://nats.education.gov.in/student_register.phpನ ನೋಂದಣಿ ಮಾಡಿಕೊಳ್ಳಬೇಕು. ತದನಂತರ www.iocl.comನಲ್ಲಿ ಲಭ್ಯವಿರುವ ಮೈಕ್ರೋಸಾಫ್ಟ್/ಗೂಗಲ್ ಪಾರಂ ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಫೆಬ್ರವರಿ 07, 2026
- ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 20, 2026
- ದಾಖಲೆ ಪರಿಶೀಲನೆಯ ತಾತ್ಕಾಲಿಕ ದಿನಾಂಕ – ಮಾರ್ಚ್ 05-10, 2026
ಹುದ್ದೆಗಳ ವಿವರ:
ಟ್ರೇಡ್ ಅಪ್ರೆಂಟಿಸ್ (ಫಿಟ್ಟರ್) – 19 ಹುದ್ದೆಗಳು
ಟ್ರೇಡ್ ಅಪ್ರೆಂಟಿಸ್ (ಬಾಯ್ಲರ್) – 22 ಹುದ್ದೆಗಳು
ಟೆಕ್ನಿಷಿಯನ್ ಅಪ್ರೆಂಟಿಸ್ [ಮೆಕ್ಯಾನಿಕಲ್ ವಿಭಾಗ] – 23 ಹುದ್ದೆಗಳು
ಟೆಕ್ನಿಷಿಯನ್ ಅಪ್ರೆಂಟಿಸ್ [ಮೆಕ್ಯಾನಿಕಲ್ ವಿಭಾಗ] – 20 ಹುದ್ದೆಗಳು
ಟೆಕ್ನಿಷಿಯನ್ ಅಪ್ರೆಂಟಿಸ್[ಎಲೆಕ್ಟ್ರಿಕಲ್ ವಿಭಾಗ] – 23 ಹುದ್ದೆಗಳು
ಟ್ರೇಡ್ ಅಪ್ರೆಂಟಿಸ್ [ಅಕೌಂಟೆಂಟ್] – 01 ಹುದ್ದೆ
ಶೈಕ್ಷಣಿಕ ಅರ್ಹತೆ:
✓ ಟ್ರೇಡ್ ಅಪ್ರೆಂಟಿಸ್(ಫಿಟ್ಟರ್) [ಮೆಕ್ಯಾನಿಕಲ್ ವಿಭಾಗ] ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಜೊತೆಗೆ ಫಿಟ್ಟರ್ ಟ್ರೇಡ್‌ನಲ್ಲಿ ಐಟಿಐ ಪೂರ್ಣಗೊಳಿಸಿರಬೇಕು.
✓ ಟ್ರೇಡ್ ಅಪ್ರೆಂಟಿಸ್(ಬಾಯ್ಲರ್) [ಮೆಕ್ಯಾನಿಕಲ್ ವಿಭಾಗ] ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ (ಗಣಿತ ಭೌತಶಾಸ್ತ್ರ, ರಸಾಯನಶಾಸ್ತ್ರ ಅಥವಾ ಕೈಗಾರಿಕಾ ರಸಾಯನಶಾಸ್ತ್ರ) ವಿಭಾಗದಲ್ಲಿ ಬಿ.ಎಸ್ಸಿ ಪದವಿ ಪೂರ್ಣಗೊಳಿಸಿರಬೇಕು.
✓ ಟೆಕ್ನಿಷಿಯನ್ ಅಪ್ರೆಂಟಿಸ್ [ಮೆಕ್ಯಾನಿಕಲ್ ವಿಭಾಗ] ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.
✓ ಟೆಕ್ನಿಷಿಯನ್ ಅಪ್ರೆಂಟಿಸ್ [ಎಲೆಕ್ಟ್ರಿಕಲ್] ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
✓ ಟೆಕ್ನಿಷಿಯನ್ ಅಪ್ರೆಂಟಿಸ್ [ಇನ್ಸ್ಟ್ರುಮೆಂಟೇಶನ್] ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇನ್ಸ್ಟ್ರುಮೆಂಟೇಶನ್/ಇನ್ಸ್ಟ್ರುಮೆಂಟೇಶನ್ & ಎಲೆಕ್ಟ್ರಾನಿಕ್ಸ್/ಇನ್ಸ್ಟ್ರುಮೆಂಟೇಶನ್ & ಕಂಟ್ರೋಲ್/ಅಪ್ಲೈಡ್ ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
✓ ಟ್ರೇಡ್ ಅಪ್ರೆಂಟಿಸ್ [ಅಕೌಂಟೆಂಟ್] ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
31-01-2026 ರಂತೆ;
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 24 ವರ್ಷಗಳು
ವಯೋಮಿತಿ ಸಡಿಲಿಕೆ: ಪ.ಜಾತಿ ಪ.ಪಂಗಡದ ಅಭ್ಯರ್ಥಿಗಳಿಗೆ – 5 ವರ್ಷಗಳು, ಒಬಿಸಿ (NCL) ಅಭ್ಯರ್ಥಿಗಳಿಗೆ – 3 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 10 ವರ್ಷಗಳು.
ಆಯ್ಕೆ ಪ್ರಕ್ರಿಯೆ:
ಅರ್ಹ ಅಭ್ಯರ್ಥಿಗಳ ಮೆರಿಟ್ ಲಿಸ್ಟ್
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಸ್ಟೈಫಂಡ್:
ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯಾ ಟ್ರೇಡ್ ಗಳಿಗೆ ಅನುಗುಣವಾಗಿ ಸರ್ಕಾರವು ಅಪ್ರೆಂಟಿಸ್ ಕಾಯ್ದೆಯ ನಿಯಮಗಳ ಅಡಿಯಲ್ಲಿ ನಿಗದಿಪಡಿಸಲಾದ ಸ್ಟೈಫಂಡ್ ಮೊತ್ತವನ್ನು ಪಾವತಿಸಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
✓ ಹಂತ – I
• ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು NAPS ಅಧಿಕೃತ ವೆಬ್ಸೈಟ್ https://www.apprenticeshipindia.gov.in/ಗೆ ಭೇಟಿ ನೀಡಿ ನೋಂದಾಯಿಸಿ.
• ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು NATS ಅಧಿಕೃತ ವೆಬ್ಸೈಟ್ https://nats.education.gov.in/student_register.php ಗೆ ಭೇಟಿ ನೀಡಿ ನೋಂದಾಯಿಸಿ.
• ಬಳಿಕ ಸರ್ಚ್ ಬಾರ್ ನಲ್ಲಿ “ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ 1961ರ ಅಪ್ರೆಂಟಿಸ್ ಕಾಯ್ದೆಯಡಿಯಲ್ಲಿ ಅಪ್ರೆಂಟಿಸ್‌ಗಳ ನೇಮಕಾತಿ” – ಜಾಹೀರಾತು ಸಂಖ್ಯೆ MR/HR/APP3/2025-26 – ಹುಡುಕಿ ನಂತರ ಅನ್ವಯಿಸು ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಅಭ್ಯರ್ಥಿಗಳು ಸಂಬಂಧಿತ ಅವಕಾಶಕ್ಕಾಗಿ ಆಯಾ ಪೋರ್ಟಲ್ ಮೂಲಕ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ಬಳಿಕ.
✓ ಹಂತ – II
• ಮೈಕ್ರೋಸಾಫ್ಟ್ ಆಫೀಸ್ ಫಾರ್ಮ್ ಅಧಿಕೃತ ವೆಬ್ಸೈಟ್ https://docs.google.com/forms/d/e/1FAIpQLSdVIcl12XBlg5O_Ut9cSbP8XByHqzsVa6XLwt6f6fiQDpMwQA/viewformಗೆ ಭೇಟಿ ನೀಡಿ.
• ಫಾರ್ಮ್ ನಲ್ಲಿ ಕೇಳಲಾಗುವ ಅಗತ್ಯ ಮಾಹಿತಿಯನ್ನು ನಮೂದಿಸಿ ಅರ್ಜಿಯನ್ನು ಸಲ್ಲಿಸಬೇಕು.
• ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಲು ಅಭ್ಯರ್ಥಿಗಳು ಎರಡು ಹಂತಗಳನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
Important Direct Links:
| Official Notification PDF | Download |
| Trade Apprentice Registration Link | Register Now |
| Technician Apprentice Registration Link | Register Now |
| Online Application Form Link | Apply Now |
| Official Website | www.iocl.com |
| More Updates | KarnatakaHelp.in |