PSI ಆಯ್ಕೆ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಲು ಫೆ.13ರವರೆಗೆ ಅವಕಾಶ

Published on:

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2025-26ನೇ ಸಾಲಿಗೆ ವಸತಿ ಸಹಿತ ಸಬ್‌ ಇನ್‌ಸ್ಪೆಕ್ಟರ್‌(PSI) ಆಯ್ಕೆ ಪೂರ್ವ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹಿಂದುಳಿದ ವರ್ಗದ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ)ಗೆ ಸೇರಿದ ಪದವೀಧರ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ತರಬೇತಿಗೆ ಅರ್ಹರು. ತರಬೇತಿ ಅವಧಿ ಅಂದಾಜು 75 ದಿನಗಳಾಗಿರುತ್ತವೆ. ಈ ಅವಧಿಯಲ್ಲಿ ಉಚಿತ ವಸತಿ ಜೊತೆಗೆ ಊಟದ ವ್ಯವಸ್ಥೆ ಇರುತ್ತದೆ. ಆಸಕ್ತರು http://164.100.133.164:81/PSI_2526/App_form.aspxಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖ್ಯ ದಿನಾಂಕಗಳು:

  • ಅಧಿಕೃತ ಪ್ರಕಟಣೆಯ ದಿನಾಂಕ – ಫೆಬ್ರವರಿ 02
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 13

ಶೈಕ್ಷಣಿಕ ಅರ್ಹತೆ:

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ಇತರೆ ಅರ್ಹತೆಗಳು:

ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು
ಕುಟುಂಬದ ವಾರ್ಷಿಕ ಆದಾಯದ ಮಿತಿ ರೂ.08 ಲಕ್ಷಗಳು

ವಯಸ್ಸಿನ ಮಿತಿ:

13-02-2026ರಂತೆ;

ಕನಿಷ್ಠ – 21 ವರ್ಷಗಳು
ಗರಿಷ್ಠ – 27 ವರ್ಷಗಳು

ಆಯ್ಕೆ ಪ್ರಕ್ರಿಯೆ:

  • ಮೆರಿಟ್‌ ಪಟ್ಟಿ
  • ದೈಹಿಕ ಪರೀಕ್ಷೆ
  • ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ.?

ಹಂತ-1 ಅಧಿಕೃತ ಜಾಲತಾಣ https://bcwd.karnataka.gov.in/knಕ್ಕೆ ಭೇಟಿ ನೀಡಿ.

ಹಂತ-2 ನಂತರ ಮುಖಪುಟದ “ಸುದ್ದಿ ಮತ್ತು ಘಟನೆಗಳು (ಇತ್ತೀಚಿನ ಸುದ್ದಿಗಳು)” ವಿಭಾಗದಲ್ಲಿ ನೀಡಲಾಗಿರುವ “ವಸತಿ ಸಹಿತ ಪೊಲೀಸ್ ಸಬ್-ಇನ್ಸ್ಪೆಕ್ಟರ್(PSI) ಆಯ್ಕೆ ಪೂರ್ವ ತರಬೇತಿಗಾಗಿ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ” ಲಿಂಕ್‌ ಮೇಲೆ ಒತ್ತಿ.

ಹಂತ-3 ಮತ್ತೊಂದು ಪುಟ ತೆರೆಯುತ್ತದೆ. ಅಲ್ಲಿ “ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ:” ಎಂಬ ಶೀರ್ಷಿಕೆಯ ಬಲಭಾಗದಲ್ಲಿ ನೀಡಲಾದ “CLICK HERE” ಮೇಲೆ ಒತ್ತಿ, ಮುಂದೆ ಅಲ್ಲಿ ಉಚಿತ ತರಬೇತಿ ಅರ್ಜಿ ನಮೂನೆ ತೆರೆಯುತ್ತದೆ. ನಮೂನೆಯಲ್ಲಿ ಕೇಳಲಾದ ಸಂಪೂರ್ಣ ಮಾಹಿತಿ ಸರಿಯಾಗಿ ಭರ್ತಿ ಮಾಡಿ.

Bcwd Psi Pre-Selection Training 2026
Bcwd Psi Pre-Selection Training Online Application 2026

ಹೆಚ್ಚಿನ ಮಾಹಿತಿಗಾಗಿ: ಸಹಾಯವಾಣಿ 8050770004ಗೆ ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದು.

Important Direct Links:

Official Notice PDFDownload
Online Application Form LinkApply Now
Official Websitebcwd.karnataka.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

5 thoughts on “PSI ಆಯ್ಕೆ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ”

Leave a Comment