ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ(AFMS)ಆಯೋಗವು ವೈದ್ಯಕೀಯ ಅಧಿಕಾರಿ(ಶಾರ್ಟ್ ಸರ್ವಿಸ್ ಕಮಿಷನ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳಲ್ಲಿ ಖಾಲಿ ಇರುವ ಪುರುಷ 169 ಮತ್ತು ಮಹಿಳೆ 56 ಸೇರಿದಂತೆ ಒಟ್ಟು 225 ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲಿದ್ದು, ಆಸಕ್ತ ಪುರುಷ ಹಾಗೂ ಮಹಿಳಾ ಉದ್ಯೋಗಾಕಾಂಕ್ಷಿಗಳು AFMS ಅಧಿಕೃತ ಜಾಲತಾಣ https://join.afms.gov.in/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಸೆಪ್ಟೆಂಬರ್ 13, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 03, 2025
ಸಂದರ್ಶನ ನಡೆಸಲಾಗುವ ತಾತ್ಕಾಲಿಕ ದಿನಾಂಕ – ನವೆಂಬರ್ 11, 2025
ಶೈಕ್ಷಣಿಕ ಅರ್ಹತೆ:
• ಅಭ್ಯರ್ಥಿಗಳು ಎಂಬಿಬಿಎಸ್ ಉತ್ತೀರ್ಣರಾಗಿರಬೇಕು ಹಾಗೂ ರಾಷ್ಟ್ರೀಯ ವೈದ್ಯಕೀಯ ಮಂಡಳಿ ಕಾಯ್ದೆ, 2019 ರಲ್ಲಿ ಸೇರಿಸಲಾದ ವೈದ್ಯಕೀಯ ಅರ್ಹತೆಯನ್ನು ಹೊಂದಿರಬೇಕು.
• ಅರ್ಜಿದಾರರು ಯಾವುದೇ ರಾಜ್ಯ ವೈದ್ಯಕೀಯ ಮಂಡಳಿ/NMC/MCI ನಿಂದ ಶಾಶ್ವತ ನೋಂದಣಿಯನ್ನು ಹೊಂದಿರಬೇಕು. ರಾಜ್ಯ ವೈದ್ಯಕೀಯ ಮಂಡಳಿ/NBE/NMCಯಿಂದ ಮಾನ್ಯತೆ ಪಡೆದ ಸ್ನಾತಕೋತ್ತರ ಪದವಿ ಹೊಂದಿರುವವರು ಸಹ ಅರ್ಜಿ ಸಲ್ಲಿಸಬಹುದು.
• ಜುಲೈ 31, 2025 ರಂದು ಅಥವಾ ಅದಕ್ಕೂ ಮೊದಲು ಇಂಟರ್ನ್ಶಿಪ್ ಪೂರ್ಣಗೊಳಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
ವಯೋಮಿತಿ:
31-12-2025 ರಂತೆ;
ಕನಿಷ್ಠ ಮಿತಿ – ಅಭ್ಯರ್ಥಿಯು MBBS ಪದವಿಯನ್ನು ಹೊಂದಿದ್ದರೆ 30 ವರ್ಷ ವಯಸ್ಸನ್ನು ತಲುಪಿರಬಾರದು. (02 ಜನವರಿ 1996 ರಂದು ಅಥವಾ ನಂತರ ಜನಿಸಿದವರು ಮಾತ್ರ ಅರ್ಹರು)
ಗರಿಷ್ಠ ಮಿತಿ – ಸ್ನಾತಕೋತ್ತರ ಪದವಿಯನ್ನು ಹೊಂದಿದ್ದರೆ 35 ವರ್ಷ ವಯಸ್ಸನ್ನು ತಲುಪಿರಬಾರದು. (02 ಜನವರಿ 1991 ರಂದು ಅಥವಾ ನಂತರ ಜನಿಸಿದವರು ಮಾತ್ರ ಅರ್ಹರು).
ಆಯ್ಕೆ ವಿಧಾನ:
ಅರ್ಜಿಗಳ ಕಿರುಪಟ್ಟಿ
ವೈಯಕ್ತಿಕ ಸಂದರ್ಶನ
ವಿಶೇಷ ದೈಹಿಕ ಪರೀಕ್ಷೆ(ಎಸ್ಎಂಬಿ)/ವೈದ್ಯಕೀಯ ಪರೀಕ್ಷೆ
ದಾಖಲೆ ಪರಿಶೀಲನೆ
ಸಂಬಳ:
ಮಾಸಿಕ 84,000ರೂ. ವರೆಗೆ ವೇತನ ಹಾಗೂ ಇತರ ಸರ್ಕಾರಿ ಸೇವೆ ಹಾಗೂ ಸೌಲಭ್ಯಗಳನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – 200ರೂ.
ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 200ರೂ.
How to Apply for AFMS Medical Officer (SSC) Recruitment 2025
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ;
ಮೊದಲಿಗೆ AFMS ಅಧಿಕೃತ ಜಾಲತಾಣ https://join.afms.gov.in/ ಕ್ಕೆ ಭೇಟಿ ನೀಡಿ.
ಹೊಸ ಬಳಕೆದಾರರಾಗಿದ್ದಲ್ಲಿ ನೋಂದಣಿ ಮಾಡಿ. ಅಥವಾ ಈಗಾಗಲೇ ನೋಂದಾಯಿಸಿದ್ದಲ್ಲಿ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳಲ್ಲಿ ವೈದ್ಯಕೀಯ ಅಧಿಕಾರಿ ನೇಮಕಾತಿ 2025 – ಅರ್ಜಿ ನಮೂನೆ ಆಯ್ಕೆ ಮಾಡಿ.
ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
ಅಂತಿಮವಾಗಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.