RRB ತಂತ್ರಜ್ಞ ಹುದ್ದೆಗಳು: CBT ಪರಿಷ್ಕೃತ ವೇಳಾಪಟ್ಟಿ ಪ್ರಕಟ

Published on:

ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್ 02/2025ರಡಿ ಅಧಿಸೂಚಿಸಿದ ತಂತ್ರಜ್ಞ ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಿರುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಸೋಮವಾರ(ಫೆ.16) ಪ್ರಕಟಿಸಿದ್ದು, ಪರೀಕ್ಷೆಗಳು ಮಾರ್ಚ್ 06, 09 ಹಾಗೂ 10ರಂದು ನಡೆಯಲಿವೆ.

ಒಟ್ಟು 6238 ತಂತ್ರಜ್ಞ ಗ್ರೇಡ್-I ಸಿಗ್ನಲ್ ಮತ್ತು ತಂತ್ರಜ್ಞ ಗ್ರೇಡ್-III ವರ್ಗದ ವಿವಿಧ ಹುದ್ದೆಗಳ ಹುದ್ದೆಗಳ ಭರ್ತಿಗಾಗಿ ಪರೀಕ್ಷೆ ಜರುಗುತ್ತಿದೆ. ಆರ್‌ಆರ್‌ಬಿ ಆಯಾ ಪ್ರಾದೇಶಿಕ ಅಧಿಕೃತ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281ದಲ್ಲಿ ಅಭ್ಯರ್ಥಿಗಳು ಪರೀಕ್ಷಾ ವೇಳಾಪಟ್ಟಿಯನ್ನು ಪರಿಶೀಲಿಸಬಹುದು.

ವೇಳಾಪಟ್ಟಿ ಡೌನ್ಲೋಡ್ ಮಾಡುವ ವಿಧಾನ

• ಮೊದಲಿಗೆ ಅಭ್ಯರ್ಥಿಗಳು ಆರ್.ಆರ್.ಬಿ ಅಧಿಕೃತ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281 ಕ್ಕೆ ಭೇಟಿ ನೀಡಿ.

• ನಂತರ ನಿಮ್ಮ ಸಂಬಂಧಿತ ಅಥವಾ ನೀವು ಅರ್ಜಿ ಸಲ್ಲಿಸಿದ ಆರ್.ಆರ್.ಬಿ ಅಧಿಕೃತ ಜಾಲತಾಣವನ್ನು ಆಯ್ಕೆ ಮಾಡಿ.

• ಬಳಿಕ ಇತ್ತೀಚಿನ ನವೀಕರಣಗಳು ವಿಭಾಗದಲ್ಲಿ ನೀಡಲಾಗಿರುವ “ಸಿಇಎನ್ ಸಂಖ್ಯೆ 02/2025 (ತಂತ್ರಜ್ಞ) ಪರಿಷ್ಕೃತ ತಾತ್ಕಾಲಿಕ ಸಿಬಿಟಿ ವೇಳಾಪಟ್ಟಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.

• ನಂತರ ವೇಳಾಪಟ್ಟಿಯ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಪರೀಕ್ಷಾ ವೇಳಾಪಟ್ಟಿ ಹಾಗೂ ಇತರೆ ಸೂಚನೆಗಳನ್ನು ಪರಿಶೀಲಿಸಬಹುದು.

Important Direct Links:

Revised Schedule PDFDownload
Official WebsiteRRBs
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment