RRB RPF 02/2024: ಅಂತಿಮ ಫಲಿತಾಂಶ ಪ್ರಕಟ

Published on:

ರೈಲ್ವೆ ನೇಮಕಾತಿ ಮಂಡಳಿಯು ರೈಲ್ವೆ ಸಂರಕ್ಷಣಾ ಪಡೆ(ಆರ್‌ಪಿಎಫ್‌)ಯ ಕಾನ್‌ಸ್ಟೇಬಲ್‌(ಕಾರ್ಯನಿರ್ವಾಹಕ) ಹುದ್ದೆಗೆ ಅರ್ಹತೆ ಪಡೆದ 4205 ಅಭ್ಯರ್ಥಿಗಳ ಅಂತಿಮ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದೆ.

ಸಿಇಎನ್‌ ಆರ್‌ಪಿಎಫ್‌02/2024ರಡಿ 4208 ಭರ್ತಿಗಾಗಿ ಅಧಿಸೂಚಿಸಲಾಗಿತ್ತು. ಕಂಪ್ಯೂಟರ್‌ ಆಧಾರಿತ ಪರೀಕ್ಷೆಯನ್ನು 2025ರ ಮಾ.2ರಿಂದ 7, 9ರಿಂದ 12 ಮತ್ತು ಮಾ.17ರಿಂದ 18ರವೆರೆಗೆ ಹಾಗೂ ದೈಹಿಕ ದಕ್ಷತೆ ಪರೀಕ್ಷೆ, ದೈಹಿಕ ಅಳತೆ ಪರೀಕ್ಷೆಯನ್ನು ನ.13 ರಿಂದ ಡಿ.06ರವರೆಗೆ ನಡೆಸಲಾಗಿತ್ತು. ದಾಖಲಾತಿ ಪರಿಶೀಲನೆ ಅನ್ವಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಅಭ್ಯರ್ಥಿಗಳು ಆಯಾ ಆರ್‌ಆರ್‌ಬಿ ಅಧಿಕೃತ ಜಾಲತಾಣದ(https://indianrailways.gov.in/railwayboard/view_section.jsp?lang=0&id=0,7,1281) ಮೂಲಕ ತಮ್ಮ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಬಹುದು.

ಆರ್‌ಪಿಎಫ್‌ ಕಾನ್‌ಸ್ಟೇಬಲ್‌ ಅಂತಿಮ ಫಲಿತಾಂಶ ಪಟ್ಟಿ ಹೇಗೆ ಡೌನ್ಲೋಡ್‌ ಮಾಡುವುದು?

ಹಂತ-1 ಅಧಿಕೃತ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281ಕ್ಕೆ ಭೇಟಿ

ಹಂತ-2 ಮುಖಪುಟದ ಇತ್ತಿಚೀನ ಮುಖ್ಯ ಪ್ರಕಟಣೆಗಳು(Important Announcements) ವಿಭಾಗ ಅಥವಾ ಫಲಿತಾಂಶ(Results) ವಿಭಾಗದಲ್ಲಿ ನೀಡಲಾದ “RPF 02/2024 PANEL FOR THE POST OF CONSTABLE (EXECUTIVE) AGAINST CEN RPF-02/2024″ ಶಿರ್ಷೀಕೆಯ ಲಿಂಕ್‌ ಒತ್ತುವ ಮೂಲಕ ಫಲಿತಾಂಶವಿರುವ ಪಿಡಿಎಫ್‌ ಡೌನ್ಲೋಡ್‌ ಮಾಡಿಕೊಂಡು, ಅದರಲ್ಲಿ ನಿಮ್ಮ ರೋಲ್‌ ನಂಬರ್‌ ಇದೆಯೇ ಎಂಬುದನ್ನು ಪರಿಶೀಲಿಸಿ.

Important Direct Links:

RRB CEN RPF 02/2024 Constable Final Result PDFDownload
Official WebsiteRRBs
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment