ಕೆಇಎ: ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ

Published on:

ಬಿಡಿಎ, ಡಿಟಿಇ, ಆರ್‌ಜಿಯುಎಚ್‌ಎಸ್, ಬಿಡಬ್ಲ್ಯೂಎಸ್‌ಎಸ್‌ಬಿ, ಕೆಎಸ್‌ಎಸ್‌ಐಡಿಸಿ, ಕೆಕೆಆರ್‌ಟಿಸಿ, ಕೆಎಸ್‌ಡಿಎಲ್‌ನ ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಫೆ.21 ಮತ್ತು 22 ರಂದು ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಸೋಮವಾರ(ಫೆ.16)ದಿಂದ ಡೌನ್ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಫೆ.21ರಂದು ಆಪರೇಟರ್ ಹುದ್ದೆಗಾಗಿ ನಿರ್ದಿಷ್ಟ ಪತ್ರಿಕೆ-2 ಮಧ್ಯಾಹ್ನ 3 ಗಂಟೆಯಿಂದ ಸಂಜೆ 5ಗಂಟೆಯವೆರೆಗೆ ನಡೆಯಲಿದೆ. ಫೆ.22ಕ್ಕೆ ಸಾಮಾನ್ಯ ಜ್ಞಾನ ಪತ್ರಿಕೆ-1 ಬೆಳಗ್ಗೆ 10:30ರಿಂದ 12:30ರವರೆಗೆ ಹಾಗೂ ಕನ್ನಡ,ಇಂಗ್ಲೀಷ್‌,ಕಂಪ್ಯೂಟರ್‌ ಜ್ಞಾನ ವಿಷಯಗಳನ್ನೊಳಗೊಂಡ ಪತ್ರಿಕೆ-2 ಮಧ್ಯಾಹ್ನ 2:30 ರಿಂದ 4:30ರವೆರೆಗೆ ಜರುಗಲಿದೆ.

ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣದ ಲಿಂಕ್‌ https://www.cetonline.karnataka.gov.in/KEA_EXAM_PORTAL/Forms/Candidates/Login ಮೂಲಕ ತಮ್ಮ ಹಾಲ್‌ ಟಿಕೆಟ್‌ ಡೌನ್ಲೋಡ್‌ ಮಾಡಿಕೊಳ್ಳಬಹುದು.

ಕೆಇಎ ಫೆ.21, 22ರ ಪರೀಕ್ಷೆಯ ಪ್ರವೇಶ ಪತ್ರ ಹೇಗೆ ಡೌನ್ಲೋಡ್‌ ಮಾಡುವುದು?

ಹಂತ-1 ಕೆಇಎ ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea/ಗೆ ಭೇಟಿ ನೀಡಿ.

ಹಂತ-2 ನಂತರ ನೇಮಕಾತಿ ವಿಭಾಗದಲ್ಲಿ → ವಿವಿಧ ಇಲಾಖೆಗಳ ನೇಮಕಾತಿ(HK)-2025 → “ಪ್ರವೇಶ ಟಿಕೆಟ್ ಡೌನ್‌ಲೋಡ್ ಲಿಂಕ್- ಬಿಡಿಎ (ಎಸ್‌ಡಿಎ), ಡಿಟಿಇ (ಎಸ್‌ಡಿಎ), ಆರ್‌ಜಿಯುಎಚ್‌ಎಸ್ (ಜೂನ್ ಅಸಿಸ್ಟೆಂಟ್), ಬಿಡಬ್ಲ್ಯೂಎಸ್‌ಎಸ್‌ಬಿ (ಜೂನ್ ಅಸಿಸ್ಟೆಂಟ್ ಮತ್ತು ಮೀಟರ್ ರೀಡರ್), ಕೆಎಸ್‌ಎಸ್‌ಐಡಿಸಿ (ಜೂನ್ ಅಸಿಸ್ಟೆಂಟ್), ಕೆಕೆಆರ್‌ಟಿಸಿ (ಕಂಡಕ್ಟರ್), ಕೆಎಸ್‌ಡಿಎಲ್ (ಆಪರೇಟರ್ (ಸೆಮಿ-ಸ್ಕಿಲ್ಡ್))- 16.02.2026 ಪರೀಕ್ಷಾ ವೇಳಾಪಟ್ಟಿ: ನಿರ್ದಿಷ್ಟ ಪತ್ರಿಕೆ-2 (ಆಪರೇಟರ್) 21-ಫೆಬ್ರವರಿ-2026 ಶನಿವಾರ ಮಧ್ಯಾಹ್ನ 03:00 ರಿಂದ ಸಂಜೆ 05:00 ರವರೆಗೆ ಮತ್ತು ಪತ್ರಿಕೆ-1 (ಜಿಕೆ-ಎಚ್‌ಕೆ) 22-ಫೆಬ್ರವರಿ-2026 ಭಾನುವಾರ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ ಮತ್ತು ಪತ್ರಿಕೆ-2 (ಕೆಇಸಿ-ಎಚ್‌ಕೆ) 22-ಫೆಬ್ರವರಿ-2026 ಭಾನುವಾರ ಮಧ್ಯಾಹ್ನ 02:30 ರಿಂದ ಸಂಜೆ 04:30 ರವರೆಗೆ ನಡೆಯಲಿದೆ.” ಲಿಂಕ್‌ ಮೇಲೆ ಒತ್ತಿ.

Kea Exam Hall Ticket 2026 Link
Kea Exam Hall Ticket 2026 Link

ಹಂತ-3 ನಿಮ್ಮ ಲಾಗಿನ್‌ ವಿವರ ಭರ್ತಿ ಮಾಡಿ, ಹಾಲ್‌ ಟಿಕೆಟ್‌ ಡೌನ್ಲೋಡ್‌ ಮಾಡಿಕೊಳ್ಳಬಹುದು.

Important Direct Links:

KEA February 21 and 22 Exam Hall Ticket 2026 LinkDownload
Official Websitecetonline.karnataka.gov.in/kea
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment