Air Force Agniveer 02 2025Recruitment 2024:ಭಾರತೀಯ ವಾಯುಪಡೆ (IAF) ಅಗ್ನಿವೀರ್ ವಾಯುನಲ್ಲಿ 02/2025 ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಕನಸು ಕಂಡಿದ್ದ ಯುವಕ ಯುವತಿಯರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಭಾರತೀಯ ವಾಯುಪಡೆಯ ಅಧಿಕೃತ ವೆಬ್ ಸೈಟ್ ನ ಮೂಲಕ ಅರ್ಜಿಯನ್ನು ಜುಲೈ 28ರ ಒಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಸೇವೆಯ ಜತೆ ಜತೆಗೆ ಶಿಕ್ಷಣವನ್ನು ಪಡೆಯುವ ಅವಕಾಶ ಇರುವ ಈ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯಗಳ ಪರೀಕ್ಷೆಯನ್ನು ನಡೆಸಿ ಅಂತಿಮ ಫಲಿತಾಂಶವನ್ನು ಬಿಡುಗಡೆ ಮಾಡಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು ಗಮನವಿಟ್ಟು ಓದಿರಿ.
Shortview of Air force Agniveer 02 2025 Notification
Organization Name – Indian Air Force (IAF) Post Name – Agniveer Vayu Total Vacancy – 2500 Application Process: Online Job Location – All Over India
ನೇಮಕಾತಿಯ ಪ್ರಮುಖ ದಿನಾಂಕಗಳು:
ಅಧಿಸೂಚನೆ ಪ್ರಕಟಣೆಗೊಂಡ ದಿನಾಂಕ -10 ಜೂನ್ 2024 ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – 8 July 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 4 ಆಗಸ್ಟ್ 2024 (Extended) ಪರೀಕ್ಷೆ ನಡೆಯುವ ದಿನಾಂಕ – 18 ಅಕ್ಟೋಬರ್ 2024.
ಶಿಕ್ಷಣ ಅರ್ಹತೆ:
12ನೇ ತರಗತಿಯಲ್ಲಿ ಭೌತಶಾಸ್ತ್ರ, ಗಣಿತ, ಇಂಗ್ಲಿಷ್ ಓದಿದ್ದು, ಕನಿಷ್ಠ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇಂಗ್ಲಿಷ್‌ನಲ್ಲಿ ಶೇ.50 ಅಂಕ ಗಳಿಸಿರಬೇಕು.
ವಯಸ್ಸಿನ ಮಿತಿ:
17.5 ರಿಂದ 21 ವರ್ಷಗಳ ಒಳಗಿರಬೇಕು.
ದೈಹಿಕ ಅರ್ಹತೆಯ ವಿವರಗಳು:
ಎತ್ತರ : ಕನಿಷ್ಠ : 152.5 CMS
ಎದೆ : ವಿಸ್ತರಣೆ : 5 CMS
ಆಯ್ಕೆಯ ವಿಧಾನ:
ಆನ್‌ಲೈನ್ / ಆಫ್‌ಲೈನ್ ಪರೀಕ್ಷೆ
ದೈಹಿಕ ಪ್ರಮಾಣಿತ ಪರೀಕ್ಷೆ
ಸಂಬಳ:
ರೂ.30,000/- ತಿಂಗಳಿಗೆ
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳು: ರೂ. 550/-
ಪಾವತಿ ವಿಧಾನ: ಆನ್‌ಲೈನ್
How to Apply Air Force Agniveer 02 2025 Recruitment 2024
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
ಮೊದಲನೆಯದಾಗಿ, ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ https://agnipathvayu.cdac.in
ಮುಖಪುಟದಲ್ಲಿ ಕಾಣುವ ಏರ್ ಫೋರ್ಸ್ ಅಗ್ನಿವೀರ್ ಏರ್ ಇಂಟೇಕ್ 02/2025 ಅನ್ನು ಕ್ಲಿಕ್ ಮಾಡಿ
ಈಗ, ಅಧಿಕೃತ ಪುಟವು ನಿಮ್ಮ ಮುಂದೆ ತೆರೆಯುತ್ತದೆ; ನೀವು ಅಭ್ಯರ್ಥಿಗಳ ಮೇಲೆ ಕ್ಲಿಕ್ ಮಾಡಿ.
ಈಗ, ನೀವು ಹೊಸ ನೋಂದಣಿ ಮೇಲೆ ಕ್ಲಿಕ್ ಮಾಡಬೇಕು .
ನೋಂದಣಿ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಫೋಟೋ ಸಹಿಯನ್ನು ಅಪ್‌ಲೋಡ್ ಮಾಡಿ.
ಈಗ ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಿ.
ಸಲ್ಲಿಸಿದ ನಂತರ, ನಿಮ್ಮ ಅಂತಿಮ ಅರ್ಜಿಯನ್ನು ಪ್ರಿಂಟ್‌ಔಟ್ ಡೌನ್‌ಲೋಡ್ ಮಾಡಿ.