ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು 2025-26 ನೇ(AISSEE – 2025) ಸಾಲಿನ 6 ರಿಂದ 9ನೇ ತರಗತಿ ಪ್ರವೇಶಾತಿಗೆ ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆಯನ್ನು ಏಪ್ರಿಲ್ 5 ರಂದು ನಡೆಸಿತ್ತು. ಪ್ರಸ್ತುತ ಕೀ ಉತ್ತರ ಪ್ರಕಟಿಸುವ ದಿನಾಂಕ ಹಾಗೂ ಇತರೆ ಪ್ರಮುಖ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಸಂಸ್ಥೆಯು 2025-26 ನೇ ಸಾಲಿನ 6 ರಿಂದ 9ನೇ ತರಗತಿ ಪ್ರವೇಶಾತಿಗೆ ನಡೆಸಿದ್ದ, ಪರೀಕ್ಷೆಯ ಕೀ ಉತ್ತರಕ್ಕಾಗಿ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ. ಶೀಘ್ರದಲ್ಲಿಯೇ ಸಂಸ್ಥೆಯು ಕೀಲಿ ಉತ್ತರ ಬಿಡುಗಡೆ ಮಾಡಲಿದೆ.
ಕೀ ಉತ್ತರ ಹಾಗೂ ಆಕ್ಷೇಪಣೆ ಸಲ್ಲಿಸುವ ಅಧಿಕೃತ ದಿನಾಂಕ ಹಾಗೂ ಸಮಯವನ್ನು ಮುಂದಿನ ದಿನಗಳಲ್ಲಿ ಅಧಿಕೃತ ವೆಬ್ ಸೈಟ್ exams.nta.ac.in/AISSEE/ನಲ್ಲಿ ಪ್ರಕಟಿಸಲಿದೆ. ಕೀಲಿ ಉತ್ತರ ಪ್ರಕಟಿಸಿದ ನಂತರ ಫಲಿತಾಂಶಗಳನ್ನು ಮೇ ತಿಂಗಳಿನಲ್ಲಿ ಘೋಷಿಸುವ ನಿರೀಕ್ಷೆಯಿದೆ.
How to Download AISSEE Sainik School Answer Key 2025
ಕೀ ಉತ್ತರಗಳನ್ನು ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಅಧಿಕೃತ ವೆಬ್ ಸೈಟ್ https://exams.nta.ac.in/AISSEE/ ಗೆ ಭೇಟಿ ನೀಡಿ.
ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆ – 2025 ಕೀಲಿ ಉತ್ತರ ಪ್ರಕಟ ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಂತರ ಅಲ್ಲಿ ಜನ್ಮ ದಿನಾಂಕ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
ನಿಮ್ಮ ತರಗತಿಯನ್ನು ಆಯ್ಕೆ ಮಾಡಿಕೊಳ್ಳಿ.
ಕೀಲಿ ಉತ್ತರದ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ.
ನಿಮ್ಮ ರಿಜಿಸ್ಟರ್ ನಂಬರ್ ಹಾಗೂ ಹೆಸರಿನ ಮೂಲಕ ನಿಮ್ಮ ರಾಂಕನ್ನು ಪರಿಶೀಲಿಸಿಕೊಳ್ಳಿ.