WhatsApp Channel Join Now
Telegram Group Join Now

Army NCC Special Entry Scheme (57th April)Notification 2024: NCC ಸ್ಪೆಷಿಯಲ್ ಎಂಟ್ರಿ ನೇಮಕಾತಿ

ಭಾರತೀಯ ಸೇನೆಯು ಪ್ರತಿ ವರ್ಷದಂತೆ ಈ ವರ್ಷದ ಎನ್‌ಸಿಸಿ ಸ್ಪೆಷಿಯಲ್ ಎಂಟ್ರಿ ಸ್ಕೀಮ್‌ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ.

2024ನೇ ಸಾಲಿನ NCC ಸ್ಪೆಷಲ್ ಸ್ಕೀಮ್ ಅಡಿಯಲ್ಲಿ 57ನೇ ಬ್ಯಾಚ್ ಕೋರ್ಸ್ ಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ, ಈ ಕೋರ್ಸ್ ಏಪ್ರಿಲ್ 2025 ರಂದು ಆರಂಭವಾಗಲಿದ್ದು, ಶಾಲಾ ಕಾಲೇಜು ಮಟ್ಟದಲ್ಲಿ NCC ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಶಿಕ್ಷಣದ ಜೊತೆಗೆ ಸರ್ಕಾರಿ ಉದ್ಯೋಗ ಪಡೆಯುವ ಆಸೆ ಇದ್ದರೆ ಎನ್‌ಸಿಸಿ ಕೋಟಾದಡಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 9 ರವರೆಗೆ ಕಾಲಾವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್ ಸೈಟ್ www.joinindianarmy.nic.in ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ಗಮನವಿಟ್ಟು ಓದಿರಿ.

Army Ncc Special 54Th Entry Scheme Notification 2024
Army Ncc Special 54Th Entry Scheme Notification 2024

Shortview of Army NCC Special Entry Scheme 2024

Organization Name – Indian Army
Course Name – NCC Special Entry Scheme 57th Course (Apr 2025)
Application Process: Online
Job Location – All Over India

Important Dates:

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಜುಲೈ 11, 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 9, 2024
  • ಕೋರ್ಸ್ ಪ್ರಾರಂಭ ದಿನಾಂಕ: ಏಪ್ರಿಲ್ 2025

ಅರ್ಹತೆ:

  • ಭಾರತೀಯ ಪ್ರಜೆಯಾಗಿರಬೇಕು
  • ಯಾವುದಾದರೂ ಪದವಿ ಪಡೆದಿರಬೇಕು, ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
  • ಅರ್ಜಿದಾರರು NCC ‘C’ ಪ್ರಮಾಣಪತ್ರವನ್ನು ಹೊಂದಿರಬೇಕು ಮತ್ತು ಕನಿಷ್ಠ 50% ಒಟ್ಟು ಅಂಕಗಳೊಂದಿಗೆ ಪದವಿ ಪಡೆದಿರಬೇಕು.
  • ಭೌತಿಕವಾಗಿ ಸದೃಢವಾಗಿರಬೇಕು ಮತ್ತು ವೈದ್ಯಕೀಯವಾಗಿ ಸೂಕ್ತವಾಗಿರಬೇಕು.

ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿಯು 19 ರಿಂದ 25 ವರ್ಷ ವಯಸ್ಸಿನೊಳಗೆ ಇರಬೇಕು (ಶಿಫಾರಸು ಮಾಡಲಾದ ವಯಸ್ಸು 22 ವರ್ಷ)

ವೇತನ ವಿವರ:

ರೂ 56,100 ರಿಂದ 2,50,000 ವರೆಗೆ ಮಾಸಿಕ ಸಂಬಳ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

• ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು

• ಆಯ್ಕೆ ಮಾಡಲಾದ ಅಭ್ಯರ್ಥಿಗಳು ಶಾರೀರಿಕ ಸಾಮರ್ಥ್ಯ ಪರೀಕ್ಷೆ (PST), ಲಿಖಿತ ಪರೀಕ್ಷೆ ಮತ್ತು ಸಂದರ್ಶನಕ್ಕೆ ಹಾಜರಾಗಬೇಕು

ಕೋರ್ಸ್ ವಿವರ:

ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಭಾರತೀಯ ಮಿಲಿಟರಿಯು ಎನ್‌ಸಿಸಿ ವಿಶೇಷ ಎಂಟ್ರಿ ಮೂಲಕ ರೆಗುಲರ್ ಆರ್ಮಿಗೆ 14 ವರ್ಷಗಳ ಸೇವೆಗೆ ಸೇರಿಸಿಕೊಳ್ಳಲಿದೆ. ಪ್ರಾಥಮಿಕವಾಗಿ ಹತ್ತು ವರ್ಷ ಸೇವೆಗೆ ಸೇರಿಸಿಕೊಳ್ಳುತ್ತದೆ ನಂತರ 4 ವರ್ಷಗಳ ಅವಧಿಗೆ ಸೇವೆ ಮುಂದೂಡುವ ಅವಕಾಶವನ್ನು ನೀಡುತ್ತದೆ.

ಅರ್ಜಿ ಶುಲ್ಕ:

ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

How to Apply for Army NCC Special Entry Scheme Recruitment 2024

  • ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://www.joinindianarmy.nic.in/
  • “ಆನ್‌ಲೈನ್ ನೋಂದಣಿ” ಕ್ಲಿಕ್ ಮಾಡಿ.
  • Army NCC Special Entry Scheme (57th April)Notification 2024” ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ನಿಮ್ಮ ಅರ್ಜಿಯನ್ನು ಸಲ್ಲಿಸಿ.
  • ಅರ್ಜಿ ಸ್ವೀಕೃತಿಯ ದೃಢೀಕರಣವನ್ನು ಪಡೆಯಿರಿ.

Important Direct Links:

Official Notification PDFDownload
Online Application Form LinkApply Link Here
Official WebsiteIndian Army
More UpdatesKarnatakaHelp.in

Leave a Comment