ಹಾಸನ ಜಿಲ್ಲಾ ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ತಜ್ಞವೈದ್ಯರು, ಸಮುದಾಯ ಆರೋಗ್ಯ ಅಧಿಕಾರಿಗಳು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಪ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹಾಸನದ ಜಿಲ್ಲಾ ಆಯುಷ್ ಇಲಾಖೆಯಲ್ಲಿ ತಜ್ಞ ವೈದ್ಯರು ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆ, ಔಷಧಿ ವಿತರಕ ಹಾಗೂ ಸಮುದಾಯ ಆರೋಗ್ಯ ಅಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ನೇಮಕಾತಿಯಲ್ಲಿ ಒಟ್ಟು 14 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿ ಸಿದ್ಧಪಡಿಸಿ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಹಾಸನ ಜಿಲ್ಲಾ ಆಯುಷ್ ಇಲಾಖೆಯ ನೇಮಕಾತಿ(Ayush Department Hassan Recruitment 2024)ಗೆ ಅರ್ಜಿ ಸಲ್ಲಿಸಲು ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ನಮೂನೆಯನ್ನು ಪಡೆದುಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಸೇರಿಸಿ ನಿಗದಿತ ಕಛೇರಿಯ ವಿಳಾಸಕ್ಕೆ ಸೆಪ್ಟೆಂಬರ್ 28ರ ಒಳಗೆ ಅರ್ಜಿಯನ್ನು ಪೋಸ್ಟ್ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬಹುದು.
Shortview of Ayush Department Notification 2024
Organization Name – Hassan Ayush Department Post Name – Various Vacancies Total Vacancy – 14 Application Process: Offline Job Location – Hassan
ನೇಮಕಾತಿಯ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಆಗಸ್ಟ್ 29, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 28, 2024
ಖಾಲಿ ಇರುವ ಹುದ್ದೆಗಳ ವಿವರ:
ತಜ್ಞ ವೈದ್ಯರು (ಆಯುರ್ವೇದ) – 1
ತಜ್ಞ ವೈದ್ಯರು (ಯೋಗ & ಪ್ರಕೃತಿ ಚಿಕಿತ್ಸೆ) – 1
ಔಷಧಿ ವಿತರಕರು – 6
ಮಸಾಜಿಸ್ಟ್ ಹುದ್ದೆಗಳ – 2
ಮಲ್ಟಿಪರ್ಪಸ್ ವರ್ಕ್‌ರ್ – 1
ಸಮುದಾಯ ಆರೋಗ್ಯ ಅಧಿಕಾರಿ – 3
ವಿದ್ಯಾರ್ಹತೆ:
ತಜ್ಞ ವೈದ್ಯ ಹುದ್ದೆಗಳಿಗೆ – ಸಂಬಧಿಸಿದ ವಿಷಯದಲ್ಲಿ ಕನಿಷ್ಠ 3 ವರ್ಷಗಳ ಅನುಭವದೊಂದಿಗೆ ಬಿ.ಎ.ಎಂ.ಎಸ್ ಪದವಿ/ MSc ಸ್ನಾತಕೋತ್ತರ ಪದವಿ ಪಡೆದುಕೊಂಡಿರಬೇಕು.
ಔಷಧಿ ವಿತರಕ ಹುದ್ದೆಗೆ – ಬಿ-ಫಾರ್ಮ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಆಯುಷ್ ಆಸ್ಪತ್ರೆ ಕನಿಷ್ಠ 2 ವರ್ಷ ಕರ್ತವ್ಯ ನಿರ್ವಹಿಸಿರುವ ಅನುಭವ ಹೊಂದಿರಬೇಕು.
ಮಸಾಜಿಸ್ಟ್ , ಮತ್ತು ಮಲ್ಟಿಪರ್ಪಸ್ ವರ್ಕರ್, ಹುದ್ದೆಗಳಿಗೆ – SSLC ಪಾಸ್ ಮಾಡಿರಬೇಕು ಹಾಗೂ ಆಯುಷ್ ಆಸ್ಪತ್ರೆ ಕರ್ತವ್ಯ ನಿರ್ವಹಿಸಿರುವ ಅನುಭವ ಹೊಂದಿರಬೇಕು.
ಸಮುದಾಯ ಆರೋಗ್ಯ ಅಧಿಕಾರಿ ಹುದ್ದೆಗೆ – ಆಯುರ್ವೇದ ವೈದ್ಯಕೀಯ ವಿಜ್ಞಾನದಲ್ಲಿ ಪದವಿ (ಬಿ.ಎ.ಎಂ.ಎಸ್)/ ಯುನಾನಿ ವೈದ್ಯಕೀಯ ವಿಜ್ಞಾನದಲ್ಲಿ ಪದವಿ ಪಡೆದುಕೊಂಡಿಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 40 ವರ್ಷಗಳ ಒಳಗೆ ಇರಬೇಕು.
ವೇತನ ವಿವರ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಗದಿತ ಹುದ್ದೆಗಳ ಅನುಸಾರ ₹16,900 ರಿಂದ ₹57,550 ಮಾಸಿಕ ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ:
ಮೆರಿಟ್ ಪಟ್ಟಿ
ಸಂದರ್ಶನ
How to Apply for Ayush Department Hassan Recruitment 2024
ಅರ್ಜಿ ಸಲ್ಲಿಸುವುದು ಹೇಗೆ….?: ಹಾಸನ ಜಿಲ್ಲಾ ಆಯುಷ್ ಇಲಾಖೆಯ ವೆಬ್‌ಸೈಟ್ ಗೆ https://hassan.nic.in/en/notice/ayush-recruitment-2024 ಭೇಟಿ ನೀಡಿ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿಕೊಳ್ಳಿ. ಅಗತ್ಯ ದಾಖಲೆಗಳನ್ನು ಸೇರಿಸಿ ನಿಗದಿತ ಕಛೇರಿಯ ವಿಳಾಸಕ್ಕೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ: ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ, ಹೊಸಲೈನ್ ರಸ್ತೆ, ಹಾಸನ – 573201