2025ನೇ ಸಾಲಿಗೆ ಬಿ.ಇಡಿ ದಾಖಲಾತಿಗೆ ಸಂಬಂಧಿಸಿದ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಶಾಲಾ ಶಿಕ್ಷಣ ಇಲಾಖೆ ಸೋಮವಾರ ಪ್ರಕಟಿಸಿದೆ.
ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಕಾಲೇಜಿಗೆ ದಾಖಲಾಗದ ಹಾಗೂ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳಿಗೆ ಅಭಿಮತ ದಾಖಲಿಸಲು ಡಿ.8 ರಿಂದ ಡಿ.10ವರೆಗೆ ಅವಕಾಶ ನೀಡಲಾಗಿತ್ತು. ಅದರಂತೆ ಅರ್ಹ ಅಭ್ಯರ್ಥಿಗಳ ಎರಡನೇ ಸೀಟು ಹಂಚಿಕೆ ಫಲಿತಾಂಶ ಪಟ್ಟಿಗಳನ್ನು ಇಲಾಖೆಯ ಅಧಿಕೃತ ಜಾಲತಾಣದ ಲಿಂಕ್ https://sts.karnataka.gov.in/GPSTRHK/ದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದರಿ ಸುತ್ತಿನಲ್ಲಿ ಹಂಚಿಕೆಯಾದ ಕಾಲೇಜುಗಳಿಗೆ ಸೇರಬಯಸುವವರು ಇಲಾಖೆಯ ಜಾಲತಾಣದಲ್ಲಿ ಯೂಸರ್ ಐಡಿ ಮತ್ತು ಪಾಸ್ ವರ್ಡನ್ನು ಬಳಸಿ ಡಿ.15 ರಿಂದ ಡಿ.20ರೊಳಗೆ ನಿಗದಿತ ಶುಲ್ಕವನ್ನು ಚಲನ್ ಪಡೆದು ಪಾವತಿಸಬೇಕು. ನಂತರ ಜಿಲ್ಲಾ ನೋಡಲ್ ಕೇಂದ್ರಕ್ಕೆ ಭೇಟಿ ನೀಡಿ ದಾಖಲಾತಿ ಪತ್ರ ಪಡದುಕೊಂಡು. ಸಂಬಂಧಿಸಿದ ಕಾಲೇಜಿಗೆ ಸೇರ್ಪಡೆಗೊಳ್ಳಲು ಸೂಚಿಸಲಾಗಿದೆ.
ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳಿಗೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿದ್ದು, ಆ ಕಾಲೇಜಿಗೆ ದಾಖಲಾಗಲು ಇಚ್ಛಿಸದವರು ಶುಲ್ಕ ಪಾವತಿಸದೆ ಲಾಗಿನ್ ಮಾಡಿಕೊಂಡು ‘Opted for the Next Round’ ಎಂದು ಅಭಿಮತ ದಾಖಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಿ.ಇಡಿ 2025 ಎರಡನೇ ಸುತ್ತಿನ ವಿಷಯವಾರು ಸೀಟು ಹಂಚಿಕೆಯ ಫಲಿತಾಂಶವಿರುವ ಪಿಡಿಎಫ್ ಲಿಂಕ್ಗಳು
B.ed 2nd Round Seat Allotment SCIENCE Candidates List PDF
2A cast 77.87 aagide soo adaru seat sigata ell
What happened sir