ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ರೆಡಿಟ್ ಆಫೀಸರ್‌ಗಳ ನೇಮಕಾತಿ

ಪದವಿ ಪಡೆದಿರುವವರು ಅರ್ಹರು | ಬೆಂಗಳೂರು, ಹುಬ್ಬಳ್ಳಿಯಲ್ಲಿ ನೇಮಕಾತಿ ಪರೀಕ್ಷೆ

Published on:

Updated On:

ಫಾಲೋ ಮಾಡಿ
Bank of India Credit Officers Notification 2025
BOI Credit Officer Notification 2025

ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕಾಗಿರುವ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಬ್ಯಾಂಕಿಂಗ್ ಅಧಿಕಾರಿ ವಿಭಾಗದಲ್ಲಿ ವಿವಿಧ ಶ್ರೇಣಿಯ ಕ್ರೆಡಿಟ್ ಅಧಿಕಾರಿ (ಸಾಮಾನ್ಯ ಬ್ಯಾಂಕಿಂಗ್) ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ.

ಕ್ರೆಡಿಟ್ ಆಫೀಸರ್ ಗ್ರೇಡ್ [MMGS-II] (418 ಹುದ್ದೆಗಳು), ಕ್ರೆಡಿಟ್ ಆಫೀಸರ್ ಗ್ರೇಡ್[MMGS-III] (60 ಹುದ್ದೆಗಳು), ಕ್ರೆಡಿಟ್ ಆಫೀಸರ್ ಗ್ರೇಡ್[SMG-IV] (36 ಹುದ್ದೆಗಳು) ಸೇರಿದಂತೆ ಒಟ್ಟು 514 ಕ್ರೆಡಿಟ್ ಆಫೀಸರ್ ಹುದ್ದೆಗಳಿಗೆ ಪದವೀಧರ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಬ್ಯಾಂಕಿಂಗ್ ವಲಯದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು BOI ಅಧಿಕೃತ ವೆಬ್ ಸೈಟ್ https://bankofindia.bank.in/career/recruitment-noticeಗೆ ಭೇಟಿ ನೀಡಿ. 2026ರ ಜನವರಿ 05ರೊಳಗೆ ಅರ್ಜಿ ಸಲ್ಲಿಸಬಹುದು.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment