ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ರೆಡಿಟ್ ಆಫೀಸರ್‌ಗಳ ನೇಮಕಾತಿ

ಪದವಿ ಪಡೆದಿರುವವರು ಅರ್ಹರು | ಬೆಂಗಳೂರು, ಹುಬ್ಬಳ್ಳಿಯಲ್ಲಿ ನೇಮಕಾತಿ ಪರೀಕ್ಷೆ

Published on:

Updated On:

ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕಾಗಿರುವ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಬ್ಯಾಂಕಿಂಗ್ ಅಧಿಕಾರಿ ವಿಭಾಗದಲ್ಲಿ ವಿವಿಧ ಶ್ರೇಣಿಯ ಕ್ರೆಡಿಟ್ ಅಧಿಕಾರಿ (ಸಾಮಾನ್ಯ ಬ್ಯಾಂಕಿಂಗ್) ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ.

ಕ್ರೆಡಿಟ್ ಆಫೀಸರ್ ಗ್ರೇಡ್ [MMGS-II] (418 ಹುದ್ದೆಗಳು), ಕ್ರೆಡಿಟ್ ಆಫೀಸರ್ ಗ್ರೇಡ್[MMGS-III] (60 ಹುದ್ದೆಗಳು), ಕ್ರೆಡಿಟ್ ಆಫೀಸರ್ ಗ್ರೇಡ್[SMG-IV] (36 ಹುದ್ದೆಗಳು) ಸೇರಿದಂತೆ ಒಟ್ಟು 514 ಕ್ರೆಡಿಟ್ ಆಫೀಸರ್ ಹುದ್ದೆಗಳಿಗೆ ಪದವೀಧರ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಬ್ಯಾಂಕಿಂಗ್ ವಲಯದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು BOI ಅಧಿಕೃತ ವೆಬ್ ಸೈಟ್ https://bankofindia.bank.in/career/recruitment-noticeಗೆ ಭೇಟಿ ನೀಡಿ. 2026ರ ಜನವರಿ 05ರೊಳಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಡಿಸೆಂಬರ್ 20, 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 05, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜನವರಿ 05, 2026

ಶೈಕ್ಷಣಿಕ ಅರ್ಹತೆ:

ನೇಮಕಾತಿಯ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ/ಸ್ನಾತಕೋತ್ತರ ಪದವಿ ಅಥವಾ ಎಂಬಿಎ/ಪಿಜಿಡಿಬಿಎಂ ಪದವಿ ಅಥವಾ ಚಾರ್ಟರ್ಡ್ ಅಕೌಂಟೆಂಟ್/ಚಾರ್ಟರ್ಡ್ ಫೈನಾನ್ಶಿಯಲ್ ಅನಾಲಿಸ್ಟ್/ಸಿಎಂಎ – ಐಸಿಡಬ್ಲ್ಯೂಎ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ:

01-11-2025 ರಂತೆ;

✓ ಕ್ರೆಡಿಟ್ ಆಫೀಸರ್ ಗ್ರೇಡ್ (MMGS-II) ಹುದ್ದೆಗೆ;

ಕನಿಷ್ಠ ವಯಸ್ಸಿನ ಮಿತಿ – 25
ಗರಿಷ್ಠ ವಯಸ್ಸಿನ ಮಿತಿ – 35

✓ ಕ್ರೆಡಿಟ್ ಆಫೀಸರ್ ಗ್ರೇಡ್ (MMGS-III) ಹುದ್ದೆಗೆ;

ಕನಿಷ್ಠ ವಯಸ್ಸಿನ ಮಿತಿ – 28
ಗರಿಷ್ಠ ವಯಸ್ಸಿನ ಮಿತಿ – 38

✓ ಕ್ರೆಡಿಟ್ ಆಫೀಸರ್ ಗ್ರೇಡ್ (SMG-IV) ಹುದ್ದೆಗೆ;

ಕನಿಷ್ಠ ವಯಸ್ಸಿನ ಮಿತಿ – 30
ಗರಿಷ್ಠ ವಯಸ್ಸಿನ ಮಿತಿ – 40

ವಯೋಮಿತಿ ಸಡಿಲಿಕೆ; ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ -10 ವರ್ಷಗಳು.

ಆಯ್ಕೆ ಪ್ರಕ್ರಿಯೆ:

  • ಅರ್ಜಿಗಳ ಶಾರ್ಟ್‌ಲಿಸ್ಟ್
  • ಆನ್‌ಲೈನ್ ಪರೀಕ್ಷೆ
  • ಸಂದರ್ಶನ

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ 64,820ರೂ.ಗಳಿಂದ-1,20,940ರೂ.ವರೆಗೆ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ (ಜಿಎಸ್‌ಟಿ ಸೇರಿದಂತೆ):

ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ – 850ರೂ.
ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 175ರೂ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ:

• BOI ಅಧಿಕೃತ ವೆಬ್ ಸೈಟ್ https://bankofindia.bank.in/career/recruitment-notice ಗೆ ಭೇಟಿ ನೀಡಿ.

• ನೇಮಕಾತಿ ಸೂಚನೆಗಳು ವಿಭಾಗದಲ್ಲಿ ನೀಡಲಾಗಿರುವ “ವಿವಿಧ ಮಾಪಕಗಳಲ್ಲಿ GBO ಸ್ಟ್ರೀಮ್‌ನಲ್ಲಿ ಕ್ರೆಡಿಟ್ ಅಧಿಕಾರಿಗಳ ನೇಮಕಾತಿ ಯೋಜನೆ ಸಂಖ್ಯೆ 2025-26/01 ದಿನಾಂಕ 01.11.2025ರ” ಸೂಚನೆ ಲಿಂಕ್ ಮೇಲೆ ಕ್ಲಿಕ್ ಮಾಡಿ.

• ನಂತರ “CLICK HERE” for apply online ಲಿಂಕ್ ಮೇಲೆ ಟ್ಯಾಪ್ ಮಾಡಿ. ಅಥವಾ ನೇರವಾಗಿ https://ibpsreg.ibps.in/boinov25/ಗೆ ಭೇಟಿ ನೀಡಿ.

• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಈಗಾಗಲೇ ನೋಂದಾಯಿಸಿದಲ್ಲಿ ನೋಂದಣಿ ಸಂಖ್ಯೆ, ಪಾಸ್ವರ್ಡ್ ಹಾಗೂ ಭದ್ರತಾ ಕೋಡ್ ನಮೂದಿಸಿ ಲಾಗಿನ್ ಆಗಿ.

• ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವ-ವಿವರಗಳನ್ನು ನಮೂದಿಸಿ. ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿ ಮಾಡಿ.

• ಅಂತಿಮವಾಗಿ ಅರ್ಜಿಯನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ ಸಲ್ಲಿಸಿ.

• ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.

Important Direct Links:

Official Notification PDFDownload
Post Wise Qualification Details PDFDownload
Online Application Form LinkApply Now
Official Websitebankofindia.bank.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment