ಬೆಂಗಳೂರು: ನಗರ ಸಿವಿಲ್ ನ್ಯಾಯಾಲಯ ಘಟಕದಲ್ಲಿ ಉಳಿಕೆ ಮೂಲ ವೃಂದ ಹಾಗೂ ಕೆಕೆ ವೃಂದಡಿ ಖಾಲಿ ಇರುವ ಶೀಘ್ರಲಿಪಿಕಾರರು ಗೇಡ್-III, ಬೆರಳಚ್ಚುಗಾರು, ಆದೇಶ ಜಾರಿಕಾರ, ಚಾಲಕ ಮತ್ತು ಜವಾನ ಹುದ್ದೆಗಳ ಭರ್ತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಉಳಿಕೆ ಮೂಲ ವೃಂದದಲ್ಲಿ 88 ಸ್ಥಾನ ಹಾಗೂ ಕಲ್ಯಾಣ ಕರ್ನಾಟಕ ವೃಂದದಲ್ಲಿ 22 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅರ್ಹತಾ ಪರೀಕ್ಷೆ, ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಿದೆ. ಪಿಯುಸಿ,ಡಿಪ್ಲೊಮಾ,ಎಸ್ಸೆಸ್ಸೆಲ್ಸಿ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅಧಿಕೃತ ಜಾಲತಾಣ(https://bengaluru.dcourts.gov.in/kn/notice-category/ನೇಮಕಾತಿ/)ಕ್ಕೆ ಭೇಟಿ ನೀಡಿ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ- ಜುಲೈ 30 ಮಧ್ಯರಾತ್ರಿ 11:59ರವರೆಗೆ
ಶೈಕ್ಷಣಿಕ ಅರ್ಹತೆ:
ಶೀಘ್ರಲಿಪಿಗಾರರು ಗೇಡ್-III ಮತ್ತು ಬೆರಳಚ್ಚುಗಾರ ಹುದ್ದೆಗೆ; ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ತೇರ್ಗಡೆ ಅಥವಾ ತತ್ಸಮಾನ ಅರ್ಹತೆ.
ಆದೇಶ ಜಾರಿಕಾರ ಹುದ್ದೆಗೆ; ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಅರ್ಹತೆ ಜೊತೆಗೆ ವಾಹನ ಪರವಾನಿಗಿ ಹೊಂದಿರಬೇಕು.
ಚಾಲಕ ಹುದ್ದೆಗೆ; ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಅರ್ಹತೆ ಜೊತೆಗೆ ಭಾರಿ ವಾಹನ ಪರವಾನಿಗಿ(HVL) ಹೊಂದಿರಬೇಕು.
ಜವಾನ ಹುದ್ದೆಗೆ; ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಅರ್ಹತೆ ಜೊತೆಗೆ ಕನ್ನಡ ಓದಲು, ಬರೆಯಲು ಬರಬೇಕು.
ವಯೋಮಿತಿ:
30-07-2026ರಂತೆ;
ಕನಿಷ್ಠ 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ; ಸಾಮಾನ್ಯ ವರ್ಗದ ಅಭ್ಯರ್ಥಿಗಳು 40 ವರ್ಷ ಪ್ರವರ್ಗ-(ಎ), ಪ್ರವರ್ಗ-II-(ಬಿ), ಮತ್ತು ಪ್ರವರ್ಗ-III-(ಎ), ಮತ್ತು ಪ್ರವರ್ಗ-I-(ಬಿ) ಅಭ್ಯರ್ಥಿಗಳು 43 ವರ್ಷ. ಪ.ಜಾ ಮತ್ತು ಪ.ಪಂ ಹಾಗೂ ಪ್ರವರ್ಗ-1 ರ ಅಭ್ಯರ್ಥಿಗಳಿಗೆ 45 ವರ್ಷ
ಆಯ್ಕೆ ಪ್ರಕ್ರಿಯೆ:
ಅರ್ಹತಾ ಪರೀಕ್ಷೆ
ಬೆರಳಚ್ಚು ಪರೀಕ್ಷೆ (ಶೀಘ್ರಲಿಪಿಗಾರ, ಬೆರಳಚ್ಚುಗಾರ ಹುದ್ದೆಗೆ ಮಾತ್ರ)
ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.300/- ಪ್ರವರ್ಗ-II ಎ, ಪ್ರವರ್ಗ-ಬಿ, ಪ್ರವರ್ಗ-III ಎ, ಪ್ರವರ್ಗ-III ಬಿ ಸೇರಿದ ಅಭ್ಯರ್ಥಿಗಳಿಗೆ ರೂ.150/- ಪ.ಜಾ, ಪ.ಪಂ, ಪ್ರವರ್ಗ-I ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ
ಅರ್ಜಿ ಸಲ್ಲಿಕೆ ಕ್ರಿಯೆ…
ಹಂತ-1 ಬೆಂಗಳೂರು ನಗರ ನ್ಯಾಯಾಲಯಗಳು ಅಧಿಕೃತ ಜಾಲತಾಣದ “ನೇಮಕಾತಿ”( https://bengaluru.dcourts.gov.in/kn/notice-category/ನೇಮಕಾತಿ/) ವಿಭಾಗಕ್ಕೆ ಭೇಟಿ ನೀಡಿ.
ಹಂತ-2 ನಂತರ ಅಲ್ಲಿ ಅರ್ಜಿ ಸಲ್ಲಿಸಲಿಚ್ಛಿಸುವ ಹುದ್ದೆಯ ಶಿರ್ಷೀಕೆಯಡಿ ನೀಡಲಾದ “Click here to apply” ಮೇಲೆ ಕ್ಲಿಕ್ಕಿಸಿ.
ಹಂತ-3 ತದನಂತರ ಅರ್ಜಿ ನಮೂನೆ ತೆರೆಯುತ್ತದೆ. ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ತುಂಬಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಗೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸುವ ಮುಖೇನ ಅರ್ಜಿ ಸಲ್ಲಿಸಬಹುದು.
Siddappa pattedr