ಬ್ಯಾಂಕ್‌ ಆಫ್‌ ಇಂಡಿಯಾ: ಕ್ರೆಡಿಟ್‌ ಆಫೀಸರ್‌ಗಳ ನೇಮಕ ಪ್ರಕ್ರಿಯೆ ಆರಂಭ; ಅರ್ಜಿ ಆಹ್ವಾನ

Published on:

ಮುಂಬೈ: ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕಾಗಿರುವ ಬ್ಯಾಂಕ್‌ ಆಫ್‌ ಇಂಡಿಯಾದ ಜನರಲ್ ಬ್ಯಾಂಕಿಂಗ್ ಅಧಿಕಾರಿ ಸ್ಟ್ರೀಮ್‌ನಲ್ಲಿ 779 ಕ್ರೆಡಿಟ್‌ ಆಫೀಸರ್‌ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಯಾಗಿದೆ.

677 ಮೀಡಲ್‌ ಮ್ಯಾನೇಜ್‌ಮೆಂಟ್‌ ಗ್ರೇಡ್‌-II ಸ್ಥಾನಗಳು, 61 ಮೀಡಲ್‌ ಮ್ಯಾನೇಜ್‌ಮೆಂಟ್‌ ಗ್ರೇಡ್‌-III ಸ್ಥಾನಗಳು ಹಾಗೂ 41 ಸೀನಿಯರ್‌ ಮಾನೇಜ್‌ಮೆಂಟ್‌ ಗ್ರೇಡ್‌-IV ಸ್ಥಾನಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಗಳ ಆಯ್ಕೆಯು ಆನ್‌ಲೈನ್‌ ಪರೀಕ್ಷೆ ಅಥವಾ ವೈಯಕ್ತಿಕ ಸಂದರ್ಶನ ಮೂಲಕ ಇರಲಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ಜಾಲತಾಣ https://bankofindia.bank.in/career/recruitment-notice ಅಥವಾ https://ibpsreg.ibps.in/boicojun26/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜು.20ರವೆರೆಗೆ ಅವಕಾಶವಿದೆ.

ಮುಖ್ಯ ದಿನಾಂಕಗಳು:

  • ಆನ್‌ಲೈನ್‌ ಅರ್ಜಿ ಆರಂಭ ದಿನಾಂಕ- ಜೂನ್‌ 30
  • ಅರ್ಜಿ ಸಲ್ಲಿಕೆಗೆ ಹಾಗೂ ಶುಲ್ಕ ಪಾವತಿಗೆ ಕೊನೆಯ ದಿನಾಂಕ್-‌ ಜುಲೈ 20
  • ಅರ್ಜಿ ನಮೂನೆ ತಿದ್ದುಪಡಿಗೆ ಕೊನೆ ದಿನ – ಜುಲೈ 20
  • ತಮ್ಮ ಅರ್ಜಿ ನಮೂನೆ ಪ್ರಿಂಟ್‌ ತೆಗೆದುಕೊಳ್ಳಲು ಆಗಸ್ಟ್‌ 04ರವೆರೆಗೆ ಅವಕಾಶ

ಶೈಕ್ಷಣಿಕ ಅರ್ಹತೆ:

ಆಸಕ್ತರು, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಹೊಂದಿರಬೇಕು ಅಥವಾ ಸಿಎ/ಸಿಎಂಎ-ಐಸಿಡಬ್ಲ್ಯೂಎ/ಸಿಎಸ್/ಸಿಎಫ್‌ಎ ಅರ್ಹತೆ ಹೊಂದಿರಬೇಕು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ನಿಗದಿತ ಕೆಲಸದ ಅನುಭವ ಹೊಂದಿರಬೇಕು.

ವಯೋಮಿತಿ:

01-06-2026ರಂತೆ:

ಕ್ರೆಡಿಟ್‌ ಆಫೀಸರ್‌(ಎಂಎಂಜಿಎಸ್‌-II); ಕನಿಷ್ಠ 25, ಗರಿಷ್ಠ 32 ವರ್ಷಗಳು
ಕ್ರೆಡಿಟ್‌ ಆಫೀಸರ್‌(ಎಂಎಂಜಿಎಸ್‌-III); ಕನಿಷ್ಠ 28, ಗರಿಷ್ಠ 38 ವರ್ಷಗಳು
ಕ್ರೆಡಿಟ್‌ ಆಫೀಸರ್‌ (ಎಸ್‌ಎಂಜಿಎಸ್‌-IV); ಕನಿಷ್ಠ 32, ಗರಿಷ್ಠ 45 ವರ್ಷಗಳು

ನೇಮಕ ಪ್ರಕ್ರಿಯೆ:

ಆನ್‌ಲೈನ್‌ ಪರೀಕ್ಷೆ ಅಥವಾ ವೈಯಕ್ತಿಕ ಸಂದರ್ಶನ

ವೇತನ ಶ್ರೇಣಿ:

ಕ್ರೆಡಿಟ್‌ ಆಫೀಸರ್‌(ಎಂಎಂಜಿಎಸ್‌-II); 64820-2340(1)-67160-2680 (10)-93960
ಕ್ರೆಡಿಟ್‌ ಆಫೀಸರ್‌(ಎಂಎಂಜಿಎಸ್‌-III); 85920-2680(5)-99320-2980(2)-105280
ಕ್ರೆಡಿಟ್‌ ಆಫೀಸರ್‌ (ಎಸ್‌ಎಂಜಿಎಸ್‌-IV); 102300-2980(4)-114220-3360(2)-120940

ಅರ್ಜಿ/ಇಂಟಿಮೇಷನ್‌ ಶುಲ್ಕ:

ಎಸ್ಸಿ/ಎಸ್ಟಿ/ಪಿಡಬ್ಲ್ಯೂಡಿ ವರ್ಗದ ಅಭ್ಯರ್ಥಿಗಳಿಗೆ ರೂ.175/- (ಇಂಟಿಮೇಷನ್‌ ಶುಲ್ಕ ಮಾತ್ರ)
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.850/-

ಅರ್ಜಿ ಸಲ್ಲಿಕೆಯ ಹಂತಗಳು….

ಹಂತ-1 ಬ್ಯಾಂಕಿನ ಅಧಿಕೃತ ಜಾಲತಾಣ https://bankofindia.bank.in/career/recruitment-noticeಕ್ಕೆ ಭೇಟಿ.

ಹಂತ-2 ನಂತರ “Careers” ವಿಭಾಗಕ್ಕೆ ಭೇಟಿ ನೀಡಿ, ಅಲ್ಲಿ “Recruitment of Credit Officers in
GBO Stream Project No. 2026-27/01 Notice dated 01.06.2026
” ಮೇಲೆ ಕ್ಲಿಕ್ಕಿಸಿ. ನಂತರ ಪಿಡಿಎಫ್‌ ಓಪನ್‌ ಮಾಡಿ. ಅಲ್ಲಿ ನೀಡಲಾದ “APPLY ONLINE” ಲಿಂಕ್‌ ಮೇಲೆ ಒತ್ತುವ ಮೂಲಕ ಅರ್ಜಿ ನಮೂನೆಯ ಪುಟ ತೆರೆದುಕೊಳ್ಳುತ್ತದೆ.( ಅಥವಾ ನೇರವಾಗಿ https://ibpsreg.ibps.in/boicojun26/ಗೆ ಭೇಟಿ ನೀಡಿ)

Bank Of India Credit Officer Notification 2026
ಬ್ಯಾಂಕ್‌ ಆಫ್‌ ಇಂಡಿಯಾ: ಕ್ರೆಡಿಟ್‌ ಆಫೀಸರ್‌ಗಳ ನೇಮಕ ಪ್ರಕ್ರಿಯೆ ಆರಂಭ; ಅರ್ಜಿ ಆಹ್ವಾನ

ಹಂತ-3 ಹೊಸ ಬಳಕೆದಾರ ಮೇಲೆ ಕ್ಲಿಕ್ಕಿಸಿ, ನೋಂದಣಿ ಮಾಡಿಕೊಂಡು ಅಲ್ಲಿ ಕೇಳಲಾದ ಸಂಪೂರ್ಣ ಮಾಹಿತಿಯನ್ನು ಸರಿಯಾಗಿ ತುಂಬಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್‌ ಮಾಡಿ. ಕೊನೆಗೆ ಅರ್ಜಿ, ಇಂಟಿಮೇಷನ್‌ ಶುಲ್ಕ ಪಾವತಿಸುವ ಮುಖೇನ ಅರ್ಜಿ ಸಲ್ಲಿಕೆ ಮಾಡಬಹುದು.

Important Direct Links:

Official Notification PDFDownload
CO Eligibility Details PDFDownload
Online Application PDF(Direct Link)Apply Now
Official Websitewww.bankofindia.bank.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment