ರೈಲ್ವೆ ಇಲಾಖೆಯಲ್ಲಿ ತಂತ್ರಜ್ಞ ಹುದ್ದೆಗಳ ಭರಪೂರ ಭರ್ತಿ

ಒಟ್ಟು 6557 ಸ್ಥಾನಗಳು

Published on:

ರೈಲ್ವೆ ನೇಮಕಾತಿ ಮಂಡಳಿಯು ಅಧಿಸೂಚನೆ ಸಂಖ್ಯೆ.02/2026ರ ಮೂಲಕ ತಂತ್ರಜ್ಞ ಗ್ರೇಡ್‌-I ಸಿಗ್ನಲ್‌ ಮತ್ತು ತಂತ್ರಜ್ಞ ಗ್ರೇಡ್‌-III ನಾನಾ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.

ತಂತ್ರಜ್ಞ ಗ್ರೇಡ್‌-I ಸಿಗ್ನಲ್‌ 323 ಸ್ಥಾನಗಳು ಹಾಗೂ ತಂತ್ರಜ್ಞ ಗ್ರೇಡ್‌-III 6234 ಸ್ಥಾನಗಳೂ ಸೇರಿದಂತೆ ಒಟ್ಟು 6557 ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. 18ರಿಂದ 33ರ ವಯೋಮಾನದ ಸಂಬಂಧಿತ ವಿಷಯದಲ್ಲಿ ಬಿ.ಎಸ್ಸಿ/ಡಿಪ್ಲೊಮಾ/ಬಿಇ ಅಥವಾ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಅರ್ಹತೆ ಹೊಂದಿರುವವರು ಮಂಡಳಿಯ ಅಧಿಕೃತ ಜಾಲತಾಣ https://www.rrbapply.gov.in/ದ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಜೂನ್‌ 30, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜುಲೈ 29, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನ – ಜುಲೈ 31, 2026
  • ಅರ್ಜಿ ನಮೂನೆ ತಿದ್ದುಪಡಿಗೆ ಆಗಸ್ಟ್‌ 01 ರಿಂದ 10ರವೆರೆಗೆ ಬಿಡುವು

ಶೈಕ್ಷಣಿಕ ಅರ್ಹತೆ:

ತಂತ್ರಜ್ಞ ಗ್ರೇಡ್‌-I ಸಿಗ್ನಲ್‌ ಹುದ್ದೆಗೆ:- ಸಂಬಂಧಿತ ವಿಷಯದಲ್ಲಿ ಬಿ.ಎಸ್ಸಿ/ಮೂರು ವರ್ಷದ ಡಿಪ್ಲೊಮಾ/ಬಿಇ

ತಂತ್ರಜ್ಞ ಗ್ರೇಡ್‌-III ಹುದ್ದೆಗಳಿಗೆ:- ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಅರ್ಹತೆ

ಗಮನಿಸಿ: ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿ.

ವಯೋಮಿತಿ:

10-07-2026ರಂತೆ;

ತಂತ್ರಜ್ಞ ಗ್ರೇಡ್‌-I ಸಿಗ್ನಲ್‌ ಹುದ್ದೆಗೆ:- 18-33 ವರ್ಷಗಳು
ತಂತ್ರಜ್ಞ ಗ್ರೇಡ್‌-III ಹುದ್ದೆಗೆ:- 18-30 ವರ್ಷಗಳು

ಆಯ್ಕೆ ವಿಧಾನ:

i) ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
ii) ದಾಖಲೆ ಪರಿಶೀಲನೆ(DV)
iii) ವೈದ್ಯಕೀಯ ಪರೀಕ್ಷೆ(ME)

ಸಂಬಳ:

ತಂತ್ರಜ್ಞ ಗ್ರೇಡ್‌-I ಸಿಗ್ನಲ್‌ ಹುದ್ದೆಗೆ ರೂ.29200/-
ತಂತ್ರಜ್ಞ ಗ್ರೇಡ್‌-III ಹುದ್ದೆಗೆ ರೂ.19900/-

ಪರೀಕ್ಷಾ ಶುಲ್ಕ:

ಎಸ್ಸಿ,ಎಸ್ಟಿ, ಮಹಿಳೆ, ಮಾಜಿ ಸೈನಿಕ, ಟ್ರಾನ್ಸ್ಜೆಂಡರ್‌, ಅಲ್ಪಸಂಖ್ಯಾತ ಅಥವಾ ಇಬಿಸಿ ವರ್ಗದ ಅಭ್ಯರ್ಥಿಗಳಿಗೆ ಶುಲ್ಕವಿರುವುದಿಲ್ಲ, ಆದರೆ ಪರೀಕ್ಷಾ ಶುಲ್ಕ ರೂ.250/- ಪಾವತಿಸಬೇಕು, ಇದು ಸಿಬಿಡಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಮರುಪಾವತಿಯಾಗಲಿದೆ.

ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.500/- (ಸಿಬಿಡಿ ಪರೀಕ್ಷೆ ಹಾಜರಾದ ಅಭ್ಯರ್ಥಿಗಳಿಗೆ ರೂ.400 ಮರುಪಾವತಿಯಾಗಲಿದೆ)

ಅರ್ಜಿ ಸಲ್ಲಿಸುವುದು ಹೇಗೆ.?

ಹಂತ-1 ಅಧಿಕೃತ ಜಾಲತಾಣhttps://www.rrbapply.gov.in/#/auth/homeಕ್ಕೆ ಭೇಟಿ.

ಹಂತ-2 ಹೊಸ ಬಳಕೆದಾರರಾಗಿದ್ದಲ್ಲಿ ನೋಂದಣಿ ಮಾಡಿಕೊಳ್ಳಿ ಅಥವಾ ಲಾಗಿನ್‌ ಮಾಡಿಕೊಳ್ಳಿ.

ಹಂತ-3 ನಂತರ “Online Application” ವಿಭಾಗದ ಮೇಲೆ ಕ್ಲಿಕ್ಕಿಸಿ, “CENTRALISED EMPLOYMENT NOTIFICATION (CEN) No.02/2026 TECHNICIAN GRADE I SIGNAL” ಅಥವಾ “CENTRALISED EMPLOYMENT NOTIFICATION (CEN) No.02/2026 TECHNICIAN GRADE III Posts”. ಯಾವ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವಿರಿ ಅದರಡಿ ಆರ್‌ಆರ್‌ಬಿಯನ್ನು ಆಯ್ಕೆ ಮಾಡಿಕೊಂಡು “Next” ಬಟನ್‌ ಮೇಲೆ ಒತ್ತಿ.

ಹಂತ-4 ತದನಂತರ ಅರ್ಜಿ ನಮೂನೆ ಪುಟ ಪರದೆಯಾಗುತ್ತದೆ. ಅಲ್ಲಿ ಈ ಕೆಳಗಿನ ಹಂತಗಳನ್ನು ಯಶಸ್ವಿಯಾಗಿ ಮಾಹಿತಿ ತುಂಬುವ ಮುಖೇನ ಅರ್ಜಿ ಸಲ್ಲಿಸಿ;

Personal Details(ವೈಯಕ್ತಿಕ ವಿವರಗಳು)
Other Details(ಇತರೆ ವಿವರಗಳು)
Educational Qualification(ಶೈಕ್ಷಣಿಕ ಅರ್ಹತೆ)
Upload Profile Documents (ಅಪ್ಲೋಡ್‌ ಪ್ರೊಫೈಲ್‌ ದಾಖಲೆಗಳು)
Preference and Preview and Submit(ಆದ್ಯತೆ, ಪೂರ್ವವೀಕ್ಷಣೆ ಮತ್ತು ಸಲ್ಲಿಸು)

Important Direct Links:

Official Notification PDFDownload
Online Application Form LinkApply NOw
Official WebsiteRRBs
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

11 thoughts on “ರೈಲ್ವೆ ಇಲಾಖೆಯಲ್ಲಿ ತಂತ್ರಜ್ಞ ಹುದ್ದೆಗಳ ಭರಪೂರ ಭರ್ತಿ”

Leave a Comment