ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಲ್ಲಿ ನಿರ್ವಹಣಾ ಹುದ್ದೆಗಳಿಗೆ ನೇಮಕಾತಿ(BMRCL Maintainer Recruitment 2025) ಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
BMRCL ನಲ್ಲಿ ಒಟ್ಟು 150 ನಿರ್ವಹಣೆದಾರ ಹುದ್ದೆಗಳಿಗೆ ಐದು ವರ್ಷದ ಅವಧಿಗೆ ಒಪ್ಪಂದದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ ವಿಸ್ತರಣೆಗೆ ಅವಕಾಶಗಳಿವೆ. ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಬಿಎಂಆರ್‌ಸಿಎಲ್ ಅಧಿಕೃತ ವೆಬ್ ಸೈಟ್ english.bmrc.co.inನ ಮೂಲಕ ಅರ್ಜಿ ಸಲ್ಲಿಸಬಹುದು.
ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ಪ್ರಮುಖ ದಿನಾಂಕಗಳು, ಪ್ರಮುಖ ದಿನಾಂಕಗಳು, ಅರ್ಹತೆ ಹಾಗೂ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
Highlights of Employment News
Organization Name – Bangalore Metro Rail Corporation Limited
Post Name – Maintainer
Total Vacancy – 150
Application Process – Online
Job Location – Bengaluru
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – 23-04-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-05-2025
- ಹಾರ್ಡ್ ಕಾಪಿಯನ್ನು ಸಲ್ಲಿಸಲು ಕೊನೆಯ ದಿನಾಂಕ – 27 – 05 – 2025
ಶೈಕ್ಷಣಿಕ ಅರ್ಹತೆ:
ಮೆಟ್ರಿಕ್ಯುಲೇಷನ್ ಜೊತೆಗೆ ಈ ಕೆಳಗಿನ ತಾಂತ್ರಿಕ ಟ್ರೇಡ್‌ಗಳಲ್ಲಿ ಎರಡು ವರ್ಷಗಳ ಐಟಿಐ – ಎಲೆಕ್ಟ್ರಿಷಿಯನ್ / ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ / ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ಸ್ / ವೈರ್‌ಮ್ಯಾನ್ / ಫಿಟ್ಟರ್ / ಮೆಕ್ಯಾನಿಕ್ ಕಂಪ್ಯೂಟರ್ ಹಾರ್ಡ್‌ವೇರ್ / ಮೆಕ್ಯಾನಿಕ್ ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್ / ಇನ್ಫರ್ಮೇಷನ್ ಟೆಕ್ನಾಲಜಿ & ಎಲೆಕ್ಟ್ರಾನಿಕ್ಸ್ ಸಿಸ್ಟಮ್ ನಿರ್ವಹಣೆ / ಮೆಕ್ಯಾನಿಕ್ ಕಮ್ಯುನಿಕೇಷನ್ ಸಲಕರಣೆ ನಿರ್ವಹಣೆ, ಮೆಕ್ಯಾನಿಕ್ ಮೆಕಾಟ್ರಾನಿಕ್ಸ್ ಅಥವಾ ರಕ್ಷಣಾ ಸೇವೆಗಳಿಂದ ಪ್ರಮಾಣೀಕರಿಸಲ್ಪಟ್ಟ NCVT/NCTVT/NAC ಗೆ ಸಮಾನವಾದ ಅರ್ಹತೆ ಪಡೆದಿರಬೇಕು.
- ಕನ್ನಡ ಭಾಷೆ ಪರಿಜ್ಞಾನ ಕಡ್ಡಾಯ
ವಯೋಮಿತಿ:
- 23-04-2025 ರಂತೆ ಗರಿಷ್ಠ ವಯಸ್ಸಿನ ಮಿತಿ – 50 ವರ್ಷಗಳು
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ನಿಯಮಗಳ ಪ್ರಕಾರ ವಯೋಮಿತಿ ಸಿಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ಅಭ್ಯರ್ಥಿಗಳ ಶಾರ್ಟ್ ಲಿಸ್ಟ್
- ಸಂದರ್ಶನ ಮತ್ತು ದಾಖಲೆ ಪರಿಶೀಲನೆ.
- ವೈದ್ಯಕೀಯ ಪರೀಕ್ಷೆ
ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 25,000 – 59,060 ವೇತನವನ್ನು ನೀಡಲಾಗುತ್ತದೆ.
ಬಿಎಂಆರ್‌ಸಿಎಲ್ ನಿಯಮಗಳ ಪ್ರಕಾರ ಇತರ ಸವಲತ್ತುಗಳು ದೊರೆಯುತ್ತದೆ.
ಅರ್ಜಿ ಶುಲ್ಕ:
ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.
How to Apply for BMRCL Maintainer Recruitment 2025
ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನ ಹಂತಗಳನ್ನು ಅನುಸರಿಸಿ;
- ಬಿ ಎಂ ಆರ್ ಸಿ ಎಲ್ ನ ಅಧಿಕೃತ ವೆಬ್ ಸೈಟ್ https://english.bmrc.co.in/ ಗೆ ಭೇಟಿ ನೀಡಿ.
- ಮುಖಪುಟದಲ್ಲಿ ವೃತ್ತಿ ಜೀವನ ಆಯ್ಕೆ ಮಾಡಿ.
- ಬಿಎಂಆರ್‌ಸಿಎಲ್/ಎಚ್‌ಆರ್/0006/ಒ&ಎಂ/2025 ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಸ್ವ- ವಿವರ ಹಾಗೂ ಕೇಳಲಾಗುವ ಅಗತ್ಯ ಶೈಕ್ಷಣಿಕದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.
- ಸಲ್ಲಿಸಿದ ಅರ್ಜಿಯನ್ನು ಪ್ರಿಂಟ್ ತೆಗೆದುಕೊಂಡು ಜೊತೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಲಗತ್ತಿಸಿ.
ಹಾರ್ಡ್ ಕಾಪಿಯನ್ನು ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ.
ಜನರಲ್ ಮ್ಯಾನೇಜರ್ (HR) ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ III ಮಹಡಿ, BMTC ಕಾಂಪ್ಲೆಕ್ಸ್, KH ರಸ್ತೆ ಶಾಂತಿನಗರ, ಬೆಂಗಳೂರು – 560027
ಲಕೋಟೆಯ ಮೇಲೆ ನಿರ್ವಹಣೆದಾರ ಹುದ್ದೆಗೆ ಅರ್ಜಿ ಎಂದು ಬರೆಯಿರಿ.
ಹೆಚ್ಚಿನ ಮಾಹಿತಿಗಾಗಿ: ತಾಂತ್ರಿಕ ಸಮಸ್ಯೆಗಳು ಕಂಡುಬಂದಲ್ಲಿ ಇಮೇಲ್ ಐಡಿ
helpdesk@bmrc.co.in ಅನ್ನು ಸಂಪರ್ಕಿಸಿ. (ಇಮೇಲ್‌ನಲ್ಲಿ ನಿಮ್ಮ ಸಂಪರ್ಕ ಸಂಖ್ಯೆಯನ್ನು ನಮೂದಿಸಿ)
Important Direct Links:
Official Notification PDF | Download |
Online Application Form Link | Apply Now |
Official Website | bmrc.co.in |
More Updates | Karnataka Help.in |