ರೈಲ್ವೆ ಇಲಾಖೆಯಲ್ಲಿ ಗ್ರೂಪ್‌-ಡಿ ಹುದ್ದೆಗಳ ಭರ್ತಿ; ಕೊನೆ ದಿನಾಂಕ ವಿಸ್ತರಣೆ

ಎಸ್ಸೆಸ್ಸೆಲ್ಸಿ/ಐಟಿಐ ಆದವರಿಗೆ ಅವಕಾಶ

Published on:

Updated On:

ರೈಲ್ವೆ ಇಲಾಖೆಯ ವಿವಿಧ ರೈಲ್ವೆ ವಲಯಗಳಿಗೆ 7ನೇ ಸಿಪಿಸಿ ಪೇ ಮ್ಯಾಟ್ರಿಕ್ಸ್‌ನ ಹಂತ 1(ಗ್ರೂಪ್‌-ಡಿ)ರ ವಿವಿಧ ಹುದ್ದೆಗಳ ಭರ್ತಿಗಾಗಿ ರೈಲ್ವೆ ನೇಮಕಾತಿ ಮಂಡಳಿ(RRB)ಯು ಅರ್ಜಿ ಆಹ್ವಾನಿಸಿದೆ.

ವಿವಿಧ ವಿಭಾಗಗಳಿಗೆ ಒಟ್ಟು 22195 ಅಭ್ಯರ್ಥಿಗಳನ್ನು ನೇಮಕ ಮಾಡಕೊಳ್ಳಲಿದೆ. ಎಸ್ಸೆಸ್ಸೆಲ್ಸಿ ಅಥವಾ ಐಟಿಐ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಕೆಗಾಗಿ ಮಾ.09ರವರೆಗೆ ಅವಕಾಶವಿದ್ದು, ಆರ್‌ಆರ್‌ಬಿ ಅಧಿಕೃತ ಜಾಲತಾಣ https://www.rrbapply.gov.in/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – ಜನವರಿ 31
  • ಅರ್ಜಿ ಸಲ್ಲಿಸಲು ಕೊನೆ ದಿನ – ಮಾರ್ಚ್‌ 09(ವಿಸ್ತರಣೆ)
  • ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ – ಮಾರ್ಚ್‌ 11(ವಿಸ್ತರಣೆ)

ಶೈಕ್ಷಣಿಕ ಅರ್ಹತೆ:

ಮಾನ್ಯತೆ ಪಡೆದ ಮಹಾವಿದ್ಯಾಲಯ/ಸಂಸ್ಥೆಯಿಂದ 10ನೇ ತರಗತಿ ಅಥವಾ ಐಟಿಐ ಅಥವಾ ನ್ಯಾಕ್‌(NAC) ಪ್ರಮಾಣಪತ್ರ ಹೊಂದಿರಬೇಕು.

ವಯೋಮಿತಿ:

01-01-2026ರಂತೆ;

ಕನಿಷ್ಠ 18 ವರ್ಷಗಳು, ಗರಿಷ್ಠ 33 ವರ್ಷಗಳು

ಸರ್ಕಾರಿ ನಿಯಮಗಳಿಗೆ ಅನುಸಾರ ವರ್ಗವಾರು ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ:

  • ಕಂಪ್ಯೂಟರ್‌ ಆಧಾರಿತ ಪರೀಕ್ಷೆ(CBT)
  • ದೈಹಿಕ ದಕ್ಷತೆಯ ಪರೀಕ್ಷೆ(PET)
  • ದಾಖಲಾತಿ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಸಂಬಳ:

ಪ್ರತಿ ತಿಂಗಳಿಗೆ ₹18000 ವೇತನ ನೀಡಲಾಗುತ್ತದೆ.

ಪರೀಕ್ಷಾ ಶುಲ್ಕ:

ಪ.ಜಾ/ಪ.ಪಂ/ಮಾಜಿ ಸೈನಿಕರು, ಅಂಗವಿಕ, ಮಹಿಳೆ, ಲಿಂಗಪರಿವರ್ತಿತರು, ಅಲ್ಪಸಂಖ್ಯಾತರು ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗ (ಇಬಿಸಿ) ಅಭ್ಯರ್ಥಿಗಳಿಗೆ – ₹250/-
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ₹500/-

ಅರ್ಜಿ ಸಲ್ಲಿಕೆ ಹೇಗೆ?

• RRBಯ ಅಧಿಕೃತ ಆನ್‌ಲೈನ್‌ ಪೋರ್ಟಲ್‌ https://www.rrbapply.gov.in/ಗೆ ಭೇಟಿ ನೀಡಿ.

• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ/ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

• ಲಾಗಿನ್ ಆದ ನಂತರ “Recruitment for Various Posts in Level 1 of 7th CPC Pay Matrix “ಅನ್ವಯಿಸು” ಲಿಂಕ್ ಮೇಲೆ ಕ್ಲಿಕ್ ಮಾಡಿ.

• ನಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸ ಬಯಸುವ ಹುದ್ದೆಗಳನ್ನು ಆಯ್ಕೆ ಮಾಡಿ.

• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ನಮೂದಿಸಿ. ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.

• ಅಂತಿಮವಾಗಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.

• ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.

Important Direct Links:

Online Form Last Date Extension Notice (Dated On 02/03/2026)Download
Official Notification PDFDownload
Online Application Form LinkApply Now
Official WebsiteRRBs
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

10 thoughts on “ರೈಲ್ವೆ ಇಲಾಖೆಯಲ್ಲಿ ಗ್ರೂಪ್‌-ಡಿ ಹುದ್ದೆಗಳ ಭರ್ತಿ; ಕೊನೆ ದಿನಾಂಕ ವಿಸ್ತರಣೆ”

Leave a Comment