ಬೆಂಗಳೂರು: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ(ಕೆಎಸ್‌ಎಸ್‌ಎಫ್‌ಸಿಎಲ್) ಸಂಸ್ಥೆಯು ಗುತ್ತಿಗೆ ಆಧಾರದಡಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.
ಲೀಗಲ್ ಕನ್ಸಲ್ವೆಂಟ್ 01 ಹುದ್ದೆ, ಸೌಹಾರ್ದ ಅಭಿವೃದ್ಧಿ ಅಧಿಕಾರಿ 04 ಹುದ್ದೆಗಳು ಮತ್ತು ಉಪ ಸಿಬ್ಬಂದಿ ಕಮ್ ವಾಹನ ಚಾಲಕ 04 ಹುದ್ದೆಗಳಿಗೆ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ಇರುತ್ತದೆ.
ಪ್ರಮುಖ ದಿನಾಂಕ:
- ಅಧಿಕೃತ ಅಧಿಸೂಚನೆ ದಿನಾಂಕ – ಸೆಪ್ಟೆಂಬರ್ 23
- ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 15 ಸಂಜೆ 5:30 ರವರೆಗೆ.
ಶೈಕ್ಷಣಿಕ ಅರ್ಹತೆ:
ಲೀಗಲ್ ಕನ್ಸಲ್ವೆಂಟ್ ಹುದ್ದೆಗೆ; ಅಂಗೀಕೃತ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಕಡ್ಡಾಯ.
ಸೌಹಾರ್ದ ಅಭಿವೃದ್ಧಿ ಅಧಿಕಾರಿ ಹುದ್ದೆಗೆ; ಯಾವುದೇ ವಿಷಯದಲ್ಲಿ ಪದವಿ.
ಉಪ ಸಿಬ್ಬಂದಿ ಕಮ್ ವಾಹನ ಚಾಲಕ ಹುದ್ದೆಗೆ; ಎಸ್‌ಎಸ್‌ಎಲ್‌ಸಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಲಘು ಮೋಟಾರ್ ವಾಹನ ಚಾಲನಾ ಪರವಾನಿಗೆ ಪಡೆದು ಮೂರು ವರ್ಷಗಳಾಗಿರಬೇಕು.
ಎಲ್ಲಾ ಹುದ್ದೆಗಳಿಗೆ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ.
ವಯೋಮಿತಿ:
- ಲೀಗಲ್ ಕನ್ಸಲ್ವೆಂಟ್ ಹುದ್ದೆಗೆ ಗರಿಷ್ಠ 40 ವರ್ಷಗಳು.
- ಸೌಹಾರ್ದ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಗರಿಷ್ಠ 30 ವರ್ಷಗಳು.
- ಉಪ ಸಿಬ್ಬಂದಿ ಕಮ್ ವಾಹನ ಚಾಲಕ ಹುದ್ದೆಗೆ ಗರಿಷ್ಠ 30 ವರ್ಷಗಳು.
ಆಯ್ಕೆ ವಿಧಾನ:
ಎಲ್ಲಾ ಹುದ್ದೆಗೆ ಸಂದರ್ಶನದ ಹುದ್ದೆಗೆ ಮೂಲಕ ಆಯ್ಕೆ ಮಾಡಲಾಗುತ್ತದೆ. (ಉಪ ಸಿಬ್ಬಂದಿ ಕಮ್ ವಾಹನ ಚಾಲಕ ಹುದ್ದೆಗೆ ವಾಹನಾ ಚಾಲನೆಯ ಪ್ರಾಯೋಗಿಕ ಪರೀಕ್ಷೆ ಇರಲಿದೆ)
ಮಾಸಿಕ ವೇತನ:
- ಲೀಗಲ್ ಕನ್ಸಲ್ವೆಂಟ್ ಹುದ್ದೆಗೆ; ರೂ.40,000/-
- ಸೌಹಾರ್ದ ಅಭಿವೃದ್ಧಿ ಅಧಿಕಾರಿ ಹುದ್ದೆಗೆ; ರೂ.30,000/-
- ಉಪ ಸಿಬ್ಬಂದಿ ಕಮ್ ವಾಹನ ಚಾಲಕ ಹುದ್ದೆಗೆ; ರೂ.18,000/-
ಅರ್ಜಿ ಶುಲ್ಕ:
- ಲೀಗಲ್ ಕನ್ಸಲ್ವೆಂಟ್ ಮತ್ತು ಸೌಹಾರ್ದ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ರೂ.500/-
- ಉಪ ಸಿಬ್ಬಂದಿ ಕಮ್ ವಾಹನ ಚಾಲಕ ಹುದ್ದೆಗೆ ರೂ.300/-
(ಅರ್ಜಿ ಶುಲ್ಕವನ್ನು “Karnataka State Souharda Federal Cooperative Ltd.” ಹೆಸರಿನಲ್ಲಿ ಡಿ.ಡಿ. (Demand Draft) ಮೂಲಕ ಪಾವತಿಸಬೇಕು).
ಅರ್ಜಿ ಸಲ್ಲಿಕೆ ಹೇಗೆ.?
ಆಸಕ್ತ ಅಭ್ಯರ್ಥಿಗಳು ಅಧಿಕೃತ ಜಾಲತಾಣ ದ ಮೂಲಕ ಅಥವಾ ನಾವು ಕೇಳ ನೀಡಿದ ಲಿಂಕ್ ಮೂಲಕ ಅರ್ಜಿ ನಮೂನೆ ಪಿಡಿಎಫ್ ನಮೂನೆ ಡೌನ್ಲೋಡ್ ಮಾಡಿಕೊಂಡು. ಮಾಹಿತಿಯನ್ನು ಸರಿಯಾಗಿ ತುಂಬಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ, “ಸೌಹಾರ್ದ ಸಹಕಾರಿ ಸೌಧ #68, ಒಂದನೇ ಮಹಡಿ, 18ನೇ ಅಡ್ಡರಸ್ತೆ, ಮಾರ್ಗೋಸ ರಸ್ತೆ ಮಲ್ಲೇಶ್ವರಂ, ಬೆಂಗಳೂರು-560055″ ವಿಳಾಸಕ್ಕೆ ನಿಗದಿತ ಕೊನೆದಿನಾಂಕದೊಳಗೆ ತಲುಪುವಂತೆ ಕಳುಹಿಸಿಕೊಡಬೇಕು.
ಪ್ರಮುಖ ಲಿಂಕ್‌ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಅರ್ಜಿ ನಮೂನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಅಧಿಕೃತ ಜಾಲತಾಣ | www.souharda.coop |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕಹೆಲ್ಪ್.ಇನ್ |