ಮುಂಬೈ: ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ(ಐಬಿಪಿಎಸ್)ಯು ಹಿಂದಿ ಅಧಿಕಾರಿ, ಬ್ಯಾಂಕರ್ ಫ್ಯಾಕಲ್ಟಿ(ತಾಂತ್ರಿಕ ಮತ್ತು ಸಾಮಾನ್ಯ), ನಿರ್ದೇಶಕರ ಕಾರ್ಯನಿರ್ವಾಹಕ ಕಾರ್ಯದರ್ಶಿ, ಸರ್ವರ್ ಅಡ್ಮಿನಿಸ್ಟ್ರೇಟರ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಗಳನ್ನು ಹೊರಡಿಸಿದೆ.
ಬ್ಯಾಂಕರ್ ಫ್ಯಾಕಲ್ಟಿ(ತಾಂತ್ರಿಕ ಮತ್ತು ಸಾಮಾನ್ಯ), ನಿರ್ದೇಶಕರ ಕಾರ್ಯನಿರ್ವಾಹಕ ಕಾರ್ಯದರ್ಶಿ ಹುದ್ದೆಗಳನ್ನು ನಿಗದಿತ ಅವಧಿಯ ಪೂರ್ಣಕಾಲಿಕ ಗುತ್ತಿಗೆ ಆಧಾರದ ಮೇಲೆ ಹಾಗೂ ಹಿಂದಿ ಅಧಿಕಾರಿ, ಸರ್ವರ್ ಅಡ್ಮಿನಿಸ್ಟ್ರೇಟರ್ ಹುದ್ದೆಗಳನ್ನು ನಿಯಮಿತ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಮುಂಬೈನಲ್ಲಿ ನಿಯೋಜನೆ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ಆರಂಭದ ದಿನಾಂಕ- ಸೆಪ್ಟೆಂಬರ್ 23
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಅಕ್ಟೋಬರ್ 06
- ಆಯ್ಕೆ ಪ್ರಕ್ರಿಯೆ/ಪರೀಕ್ಷೆ ನಡೆಯುವ ಸಮಯ- ಅಕ್ಟೋಬರ್ 2026
- ಸರ್ವರ್ ಅಡ್ಮಿನಿಸ್ಟ್ರೇಟರ್ ಹುದ್ದೆಗೆ ನೇರ ಸಂದರ್ಶನ (Walk-in) ದಿನಾಂಕ- ಸೆಪ್ಟೆಂಬರ್ 30 (ಬೆಳಗ್ಗೆ 09:30 ರಿಂದ 10:30 ರವರೆಗೆ ನೋಂದಣಿ ಸಮಯ)
ಶೈಕ್ಷಣಿಕ ಅರ್ಹತೆ ಮತ್ತು ಅನುಭವ:
ಹಿಂದಿ ಅಧಿಕಾರಿ (Hindi Officer) ಹುದ್ದೆಗೆ; ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹಿಂದಿ ವಿಷಯದಲ್ಲಿ ಸ್ನಾತಕೋತ್ತರ ಪದವಿ (Master’s Degree) ಹೊಂದಿರಬೇಕು ಮತ್ತು ಪದವಿ ಮಟ್ಟದಲ್ಲಿ ಇಂಗ್ಲಿಷ್ ಅನ್ನು ಮುಖ್ಯ ಅಥವಾ ಐಚ್ಛಿಕ ವಿಷಯವಾಗಿ ಓದಿರಬೇಕು. ಅಥವಾ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದು, ಪದವಿ ಮಟ್ಟದಲ್ಲಿ ಹಿಂದಿ ವಿಷಯವನ್ನು ಓದಿರಬೇಕು. (ಇತರ ಪರ್ಯಾಯ ಶೈಕ್ಷಣಿಕ ಅರ್ಹತೆಗಳಿಗೂ ಅವಕಾಶವಿದೆ).
ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಇಂಗ್ಲಿಷ್‌ನಿಂದ ಹಿಂದಿಗೆ ಮತ್ತು ಹಿಂದಿಯಿಂದ ಇಂಗ್ಲಿಷ್‌ಗೆ ಭಾಷಾಂತರ ಮಾಡಿದ ಕನಿಷ್ಠ 1 ವರ್ಷದ ಅನುಭವ ಇರಬೇಕು. ಕಂಪ್ಯೂಟರ್ ಆಪರೇಟಿಂಗ್ ಜ್ಞಾನ (MS Word & Excel) ಕಡ್ಡಾಯ.
ಬ್ಯಾಂಕರ್ ಫ್ಯಾಕಲ್ಟಿ – ತಾಂತ್ರಿಕ ಹುದ್ದೆಗೆ; ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಸಿವಿಲ್, ಇಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್, ಇನ್ಫರ್ಮೇಷನ್ ಟೆಕ್ನಾಲಜಿ, ಕಂಪ್ಯೂಟರ್ ಸೈನ್ಸ್ ಇತ್ಯಾದಿ ವಿಭಾಗಗಳಲ್ಲಿ ಪೂರ್ಣಾವಧಿ ಬಿ.ಇ/ಬಿ.ಟೆಕ್ (B.E/B.Tech) ಅಥವಾ AMIE ಪದವಿ ಹೊಂದಿರಬೇಕು.
ಸಾರ್ವಜನಿಕ ವಲಯದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಕನಿಷ್ಠ 15 ವರ್ಷಗಳ ಕಾಲ ತಾಂತ್ರಿಕ ಅಧಿಕಾರಿ/ಎಸ್‌ಎಸ್‌ಐ ಅಧಿಕಾರಿಯಾಗಿ ಹಿರಿಯ ಮ್ಯಾನೇಜ್‌ಮೆಂಟ್ ಕೇಡರ್‌ನಲ್ಲಿ ಕೆಲಸ ಮಾಡಿ ನಿವೃತ್ತರಾಗಿರಬೇಕು.
ಬ್ಯಾಂಕರ್ ಫ್ಯಾಕಲ್ಟಿ ಹುದ್ದೆಗೆ; ಯಾವುದೇ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು (CAIIB ಹೊಂದಿರುವವರಿಗೆ ಆದ್ಯತೆ).
ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಚೀಫ್ ಮ್ಯಾನೇಜರ್ ಮತ್ತು ಅದಕ್ಕಿಂತ ಹೆಚ್ಚಿನ ಹುದ್ದೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿರಬೇಕು.
ನಿರ್ದೇಶಕರ ಕಾರ್ಯನಿರ್ವಾಹಕ ಕಾರ್ಯದರ್ಶಿ (Executive Secretary to Director) ಹುದ್ದೆಗೆ; ಯಾವುದೇ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಮರಾಠಿ ಭಾಷೆಯ ಜ್ಞಾನ ಅಪೇಕ್ಷಣೀಯ.
ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಉನ್ನತ ನಿರ್ವಹಣಾ ವಿಭಾಗದಲ್ಲಿ (ಕಾರ್ಯನಿರ್ವಾಹಕ ನಿರ್ದೇಶಕ, ವ್ಯವಸ್ಥಾಪಕ ನಿರ್ದೇಶಕ ಅಥವಾ ಮಂಡಳಿಯ ಕಾರ್ಯದರ್ಶಿ[Board Secretariat]) ಕನಿಷ್ಠ 3 ವರ್ಷಗಳ ಕಾಲ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವ ಇರಬೇಕು.
ಸರ್ವರ್ ಅಡ್ಮಿನಿಸ್ಟ್ರೇಟರ್ (ಗ್ರೇಡ್-ಡಿ) ಹುದ್ದೆಗೆ; ಇಲೆಕ್ಟ್ರಾನಿಕ್ಸ್/ ಕಂಪ್ಯೂಟರ್ ಸೈನ್ಸ್/ ಇನ್ಫರ್ಮೇಷನ್ ಟೆಕ್ನಾಲಜಿ ಅಥವಾ ತತ್ಸಮಾನ ವಿಭಾಗದಲ್ಲಿ ಬಿ.ಇ/ಬಿ.ಟೆಕ್ (B.E/B.Tech) ಪದವಿ ಹೊಂದಿರಬೇಕು.
ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. ಲಿನಕ್ಸ್ ಸರ್ವರ್ ಅಡ್ಮಿನಿಸ್ಟ್ರೇಷನ್ ಮತ್ತು ನೆಟ್‌ವರ್ಕ್ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರಾಯೋಗಿಕ ಅನುಭವ ಕಡ್ಡಾಯ.
ವಯೋಮಿತಿ:
01-09-2026 ಕ್ಕೆ ಅನ್ವಯಿಸುವಂತೆ;
ಹಿಂದಿ ಅಧಿಕಾರಿ ಹುದ್ದೆಗೆ; ಕನಿಷ್ಠ 23 ವರ್ಷಗಳು – ಗರಿಷ್ಠ 30 ವರ್ಷಗಳು (ಅಭ್ಯರ್ಥಿಯು 02.09.1996 ಕ್ಕಿಂತ ಮುಂಚೆ ಮತ್ತು 01.09.2003 ಕ್ಕಿಂತ ತಡವಾಗಿ ಜನಿಸಿರಬಾರದು).
ಬ್ಯಾಂಕರ್ ಫ್ಯಾಕಲ್ಟಿ (ತಾಂತ್ರಿಕ ಮತ್ತು ಸಾಮಾನ್ಯ) ಹುದ್ದೆಗೆ; ಕನಿಷ್ಠ 50 ವರ್ಷಗಳು – ಗರಿಷ್ಠ 61 ವರ್ಷಗಳು (ಅಭ್ಯರ್ಥಿಯು 02.09.1965 ಕ್ಕಿಂತ ಮುಂಚೆ ಮತ್ತು 01.09.1976 ಕ್ಕಿಂತ ತಡವಾಗಿ ಜನಿಸಿರಬಾರದು).
ನಿರ್ದೇಶಕರ ಕಾರ್ಯನಿರ್ವಾಹಕ ಕಾರ್ಯದರ್ಶಿ ಹುದ್ದೆಗೆ; ಕನಿಷ್ಠ 45 ವರ್ಷಗಳು – ಗರಿಷ್ಠ 61 ವರ್ಷಗಳು (ಅಭ್ಯರ್ಥಿಯು 02.09.1965 ಕ್ಕಿಂತ ಮುಂಚೆ ಮತ್ತು 01.09.1981 ಕ್ಕಿಂತ ತಡವಾಗಿ ಜನಿಸಿರಬಾರದು).
ಸರ್ವರ್ ಅಡ್ಮಿನಿಸ್ಟ್ರೇಟರ್ ಹುದ್ದೆಗೆ; ಕನಿಷ್ಠ 25 ವರ್ಷಗಳು – ಗರಿಷ್ಠ 33 years (ಅಭ್ಯರ್ಥಿಯು 02.09.1993 ಕ್ಕಿಂತ ಮುಂಚೆ ಮತ್ತು 01.09.2001 ಕ್ಕಿಂತ ತಡವಾಗಿ ಜನಿಸಿರಬಾರದು).
ಆಯ್ಕೆ ಪ್ರಕ್ರಿಯೆ:
ಹಿಂದಿ ಅಧಿಕಾರಿ ಹುದ್ದೆಗೆ; ಆನ್‌ಲೈನ್ ಪರೀಕ್ಷೆ (Online Examination), ಕೌಶಲ್ಯ ಪರೀಕ್ಷೆ ಮತ್ತು ಐಟಂ ರೈಟಿಂಗ್ ವ್ಯಾಯಾಮ (Skill Test & Item Writing Exercise), ಗುಂಪು ಚರ್ಚೆ (Group Exercises) ಮತ್ತು ವೈಯಕ್ತಿಕ ಸಂದರ್ಶನ (Personal Interview).
ಬ್ಯಾಂಕರ್ ಫ್ಯಾಕಲ್ಟಿ ಮತ್ತು ಕಾರ್ಯನಿರ್ವಾಹಕ ಕಾರ್ಯದರ್ಶಿ ಹುದ್ದೆಗೆ; ಅರ್ಜಿಗಳ ಪರಿಶೀಲನೆ, ಶಾರ್ಟ್ಲಿಸ್ಟ್(Shortlisting) ಮತ್ತು ವೈಯಕ್ತಿಕ ಸಂದರ್ಶನ.
ಸರ್ವರ್ ಅಡ್ಮಿನಿಸ್ಟ್ರೇಟರ್ ಹುದ್ದೆಗೆ; ದಾಖಲಾತಿ ಪರಿಶೀಲನೆ, ಶಾರ್ಟ್‌ಲಿಸ್ಟ್ ಮಾಡುವುದು, ಆನ್‌ಲೈನ್ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನ (Walk-in Selection Process).
ಸಂಬಳ ಮತ್ತು ಭತ್ಯೆಗಳು:
ಹಿಂದಿ ಅಧಿಕಾರಿ (ಗ್ರೇಡ್-ಇ); ಆರಂಭಿಕ ಮೂಲ ವೇತನ ರೂ.44,900/-. ಮಾಸಿಕ ಒಟ್ಟು ವೇತನ ಸುಮಾರು ರೂ.91,070/- (ಡಿಎ, ಎಚ್‌ಆರ್‌ಎ ಮತ್ತು ಟಿಎ ಒಳಗೊಂಡಂತೆ). ವಾರ್ಷಿಕ ಸಿಟಿಸಿ(CTC) ಸುಮಾರು ರೂ.17.39 ಲಕ್ಷಗಳು.
ಬ್ಯಾಂಕರ್ ಫ್ಯಾಕಲ್ಟಿ ಮತ್ತು ಕಾರ್ಯನಿರ್ವಾಹಕ ಕಾರ್ಯದರ್ಶಿ ಹುದ್ದೆಗೆ; ಮಾಸಿಕ ಏಕೀಕೃತ ಸಂಭಾವನೆ ರೂ.90,000/- ಮತ್ತು ವಾರ್ಷಿಕ ಸಿಟಿಸಿ (CTC) ಸುಮಾರು ರೂ.20.21ಲಕ್ಷಗಳು.
ಸರ್ವರ್ ಅಡ್ಮಿನಿಸ್ಟ್ರೇಟರ್ ಹುದ್ದೆಗೆ; ಆರಂಭಿಕ ಮೂಲ ವೇತನ ರೂ.35,400/-. ಮಾಸಿಕ ಒಟ್ಟು ವೇತನ ಸುಮಾರು ರೂ.73,020/-. ವಾರ್ಷಿಕ ಸಿಟಿಸಿ(CTC) ಸುಮಾರು ರೂ. 14.09 ಲಕ್ಷಗಳು.
ಅರ್ಜಿ ಶುಲ್ಕ:
ಹಿಂದಿ ಅಧಿಕಾರಿ ಹುದ್ದೆಗೆ ಪ್ರತಿ ಅಭ್ಯರ್ಥಿಗೆ ರೂ.1000/- (ಆನ್‌ಲೈನ್ ಮೂಲಕ ಮಾತ್ರ ಪಾವತಿಸಬೇಕು).
ಬ್ಯಾಂಕರ್ ಫ್ಯಾಕಲ್ಟಿ ಮತ್ತು ಕಾರ್ಯನಿರ್ವಾಹಕ ಕಾರ್ಯದರ್ಶಿ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಸರ್ವರ್ ಅಡ್ಮಿನಿಸ್ಟ್ರೇಟರ್ ಹುದ್ದೆಗೆ ಇದು ನೇರ ಸಂದರ್ಶನ (Walk-in) ಪ್ರಕ್ರಿಯೆಯಾಗಿದ್ದು, ಯಾವುದೇ ಅರ್ಜಿ ಶುಲ್ಕದ ಉಲ್ಲೇಖವಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ.?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸರ್ವರ್ ಅಡ್ಮಿನಿಸ್ಟ್ರೇಟರ್ ಹುದ್ದೆ ಹೊರತುಪಡಿಸಿ, ಇನ್ನುಳಿದ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣ https://www.ibps.in/index.php/careers/ದ “Careers“ವಿಭಾಗದಲ್ಲಿ ಲಭ್ಯವಿರುವ “Apply Online for Recruitment of Various Posts in IBPS – 23 Sep 2026” ಶೀರ್ಷಿಕೆಯ ಲಿಂಕ್ ಮೇಲೆ ಕ್ಲಿಕ್ಕಿಸಿ.
ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಹೊಸ ಬಳಕೆದಾರರಾಗಿ ನೋಂದಣಿಯಾಗಿ. ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ. ಕೊನೆಗೆ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ಲಿಂಕ್‌ಗಳು:
| ಹಿಂದಿ ಅಧಿಕಾರಿ ಹುದ್ದೆಯ ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಬ್ಯಾಂಕರ್ ಫ್ಯಾಕಲ್ಟಿ (ತಾಂತ್ರಿಕ ಮತ್ತು ಸಾಮಾನ್ಯ), ನಿರ್ದೇಶಕರ ಕಾರ್ಯನಿರ್ವಾಹಕ ಕಾರ್ಯದರ್ಶಿ ಹುದ್ದೆಯ ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಸರ್ವರ್ ಅಡ್ಮಿನಿಸ್ಟ್ರೇಟರ್ ಹುದ್ದೆಯ ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ನಮೂನೆ ಲಿಂಕ್ | ಈಗಲೇ ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | www.ibps.in |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕಹೆಲ್ಪ್.ಇನ್ |