ರೈಲ್ವೆ ನೇಮಕಾತಿ ಮಂಡಳಿಯು(ಆರ್‌ಆರ್‌ಬಿ) ಅಧಿಸೂಚನೆ ಸಂಖ್ಯೆ 07/2026ರಡಿ ಪದವಿಪೂರ್ವ(ಯುಜಿ) ಹಂತದದ ನಾನಾ ತಾಂತ್ರಿಕೇತರ ಜನಪ್ರಿಯ ವಿಭಾಗಗಳ(ಎನ್‌ಟಿಪಿಸಿ) ಒಟ್ಟು 1688 ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಕಿರು ಅಧಿಸೂಚನೆಯನ್ನು ಪ್ರಕಟಿಸಿದೆ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ- ಅಕ್ಟೋಬರ್ 15
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ- ನವೆಂಬರ್ 13
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ಮಂಡಳಿ/ಸಂಸ್ಥೆಯಿಂದ ಕನಿಷ್ಠ ಶೇಕಡಾ 50ರಷ್ಟು ಅಂಕಗಳೊಂದಿಗೆ 12ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಕೆಲವು ಹುದ್ದೆಗಳಿಗೆ ಕಂಪ್ಯೂಟರ್‌ನಲ್ಲಿ ಇಂಗ್ಲಿಷ್ ಅಥವಾ ಹಿಂದಿ ಟೈಪಿಂಗ್ ಪ್ರಾವೀಣ್ಯತೆ ಕೌಶಲ್ಯ ಹೊಂದಿರಬೇಕು.
ವಯೋಮಿತಿ:
01.01.2027ಕ್ಕೆ ಅನ್ವಯಿಸುವಂತೆ;
ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 30 ವರ್ಷಗಳು.
ವರ್ಗಗಳಿಗೆ ಅನುಗುಣವಾಗಿ ನೇಮಕಾತಿ ನಿಯಮಗಳ ಪ್ರಕಾರ ಗರಿಷ್ಠ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
ನೇಮಕಾತಿ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:
- ಕಂಪ್ಯೂಟರ್ ಆಧಾರಿತ ಪರೀಕ್ಷೆ-1
- ಕಂಪ್ಯೂಟರ್ ಆಧಾರಿತ ಪರೀಕ್ಷೆ-2
- ಕಂಪ್ಯೂಟರ್ ಆಧಾರಿತ ಟೈಪಿಂಗ್ ಕೌಶಲ್ಯ ಪರೀಕ್ಷೆ (ಸಿಬಿಟಿಎಸ್‌ಟಿ)
- ದಾಖಲೆಗಳ ಪರಿಶೀಲನೆ (ಡಿವಿ) ಮತ್ತು ವೈದ್ಯಕೀಯ ಪರೀಕ್ಷೆ (ಎಂಇ)
ಸಂಬಳ:
7ನೇ ವೇತನ ಆಯೋಗದ (7th CPC) ಪ್ರಕಾರ ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿ ಇರಲಿದೆ.
ಅರ್ಜಿ ಶುಲ್ಕ:
- ಸಾಮಾನ್ಯ ಮತ್ತು ಇತರ ಅಭ್ಯರ್ಥಿಗಳಿಗೆ ರೂ.500/- ಶುಲ್ಕವಿರುತ್ತದೆ. (ಮೊದಲ ಹಂತದ ಸಿಬಿಟಿ ಪರೀಕ್ಷೆಗೆ ಹಾಜರಾದ ನಂತರ ಬ್ಯಾಂಕ್ ಶುಲ್ಕವನ್ನು ಕಡಿತಗೊಳಿಸಿ ರೂ.400/- ಅನ್ನು ಮರುಪಾವತಿ ಮಾಡಲಾಗುತ್ತದೆ.)
- ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕರು, ವಿಕಲಚೇತನರು (ಪಿಡಬ್ಲ್ಯೂಬಿಡಿ), ಮಹಿಳೆಯರು, ತೃತೀಯ ಲಿಂಗಿಗಳು, ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ(ಇಬಿಸಿ) ಅಭ್ಯರ್ಥಿಗಳಿಗೆ ರೂ.250/- ಶುಲ್ಕವಿರುತ್ತದೆ. (ಮೊದಲ ಹಂತದ ಸಿಬಿಟಿ ಪರೀಕ್ಷೆಗೆ ಹಾಜರಾದ ನಂತರ ಈ ಸಂಪೂರ್ಣ ಶುಲ್ಕವನ್ನು (ಬ್ಯಾಂಕ್ ಶುಲ್ಕ ಕಡಿತಗೊಳಿಸಿ) ಮರುಪಾವತಿ ಮಾಡಲಾಗುತ್ತದೆ.
ಗಮನಿಸಿ: ಇನ್ನಷ್ಟು ವಿವರವಾದ ಮಾಹಿತಿಯನ್ನು ವಿಸ್ತೃತ ಅಧಿಸೂಚನೆ ಬಿಡುಗಡೆಯಾದ ತದನಂತರ ಇಲ್ಲಿ ನವೀಕರಿಸಲಾಗುವುದು.
ಅರ್ಜಿ ಸಲ್ಲಿಕೆ ಹೇಗೆ.?
ಅಭ್ಯರ್ಥಿಗಳು ರೈಲ್ವೆ ಇಲಾಖೆಯ ಅಧಿಕೃತ ಜಾಲತಾಣ https://www.rrbapply.gov.in/ಕ್ಕೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಮುಖ್ಯ ಲಿಂಕ್‌ಗಳು:
| ವಿಸ್ತೃತ ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಶೀಘ್ರದಲ್ಲೇ ಬಿಡುಗಡೆ |
| ಅಧಿಕೃತ ಕಿರು ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ನಮೂನೆ ಲಿಂಕ್ | —ಅ.15ರಿಂದ– |
| ಅಧಿಕೃತ ಜಾಲತಾಣ | https://rrb.indianrailways.gov.in/ |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕಹೆಲ್ಪ್.ಇನ್ |