ಆರ್‌ಆರ್‌ಬಿ ಎಂಟಿಪಿಸಿ(ಪದವಿ) ಹುದ್ದೆಗಳ ನೇಮಕಾತಿ

Published on:

Updated On:

ಭಾರತೀಯ ರೈಲ್ವೆ ಇಲಾಖೆಯು ರೈಲ್ವೆ ನೇಮಕಾತಿ ಮಂಡಳಿಗಳ(ಆರ್‌ಆರ್‌ಬಿ) ಮೂಲಕ ಪದವಿ ಹಂತದ ವಿವಿಧ ತಾಂತ್ರಿಕೇತರ ಜನಪ್ರಿಯ ವಿಭಾಗಗಳ (ಎಂಟಿಪಿಸಿ-ಪದವಿ) ಒಟ್ಟು 3477 ಹುದ್ದೆಗಳ ಭರ್ತಿಗಾಗಿ ಅಧಿಕೃತ ಕಿರು ಅಧಿಸೂಚನೆಯನ್ನು ಹೊರಡಿಸಿದೆ.

ಪ್ರಮುಖ ದಿನಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ- ಅಕ್ಟೋಬರ್‌ 08
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ- ನವೆಂಬರ್ 06

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ(Degree) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಕೆಲವು ಹುದ್ದೆಗಳಿಗೆ ಪದವಿಯೊಂದಿಗೆ ಕಂಪ್ಯೂಟರ್‌ನಲ್ಲಿ ಇಂಗ್ಲಿಷ್ ಅಥವಾ ಹಿಂದಿ ಟೈಪಿಂಗ್ ಪ್ರಾವೀಣ್ಯತೆ ಅತ್ಯಗತ್ಯವಾಗಿರುತ್ತದೆ.

ವಯೋಮಿತಿ:

01-01-2027ರಂತೆ, ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 33 ವರ್ಷಗಳು ಇರಬೇಕು.

ವರ್ಗಗಳಿಗೆ ಅನುಗುಣವಾಗಿ ನೇಮಕಾತಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರಲಿದೆ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಈ ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:

  • ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ-1)
  • ಎರಡನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ-2)
  • ಕೌಶಲ್ಯ ಪರೀಕ್ಷೆ (ಹುದ್ದೆಗಳಿಗೆ ಅನುಗುಣವಾಗಿ)
  • ದಾಖಲೆಗಳ ಪರಿಶೀಲನೆ(ಡಿವಿ) ಮತ್ತು ವೈದ್ಯಕೀಯ ಪರೀಕ್ಷೆ (ಎಂಇ)

ಸಂಬಳ:

ಹುದ್ದೆಗಳಿಗೆ ಅನುಗುಣವಾಗಿ 7ನೇ ವೇತನ ಆಯೋಗದ (7th CPC) ಅಡಿ ಹಂತ-5 ಮತ್ತು 6ರನ್ವಯ ಆರಂಭಿಕ ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ₹500/- (ಮೊದಲ ಹಂತದ ಸಿಬಿಟಿ ಪರೀಕ್ಷೆಗೆ ಹಾಜರಾದ ನಂತರ ₹400/- ಶುಲ್ಕವನ್ನು ಬ್ಯಾಂಕ್ ಚಾರ್ಜ್ ಕಡಿತಗೊಳಿಸಿ ಮರುಪಾವತಿ ಮಾಡಲಾಗುತ್ತದೆ).

ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕರು, ವಿಕಲಚೇತನರು, ಮಹಿಳೆಯರು, ತೃತೀಯ ಲಿಂಗಿಗಳು, ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ(ಇಬಿಸಿ) ಅಭ್ಯರ್ಥಿಗಳಿಗೆ ₹250/- (ಮೊದಲ ಹಂತದ ಸಿಬಿಟಿ ಪರೀಕ್ಷೆಗೆ ಹಾಜರಾದ ನಂತರ ಸಂಪೂರ್ಣ ₹250/- ಶುಲ್ಕವನ್ನು ಬ್ಯಾಂಕ್ ಶುಲ್ಕ ಕಡಿತಗೊಳಿಸಿ ಮರುಪಾವತಿ ಮಾಡಲಾಗುತ್ತದೆ).

ಗಮನಿಸಿ: ಇನ್ನಷ್ಟು ವಿವರವಾದ ಮಾಹಿತಿಯನ್ನು ವಿಸ್ತೃತ ಅಧಿಸೂಚನೆ ಬಿಡುಗಡೆಯಾದ ತದನಂತರ ಇಲ್ಲಿ ನವೀಕರಿಸಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ.?

ಅರ್ಹ ಅಭ್ಯರ್ಥಿಗಳು ರೈಲ್ವೆ ಇಲಾಖೆಯ ಅಧಿಕೃತ ಜಾಲತಾಣ https://www.rrbapply.gov.in/ದ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ಲಿಂಕ್‌ಗಳು

ವಿವರವಾದ ಅಧಿಸೂಚನೆ ಪಿಡಿಎಫ್‌ ಲಿಂಕ್ಶೀಘ್ರದಲ್ಲೇ ಬಿಡುಗಡೆ…
ಕಿರು ಅಧಿಸೂಚನೆ ಪಿಡಿಎಫ್‌ ಲಿಂಕ್ಡೌನ್ಲೋಡ್‌ ಮಾಡಿ
ಆನ್‌ಲೈನ್‌ ಅರ್ಜಿ ನಮೂನೆ ಲಿಂಕ್–(ಅ.08ರಿಂದ)–
ಅಧಿಕೃತ ಜಾಲತಾಣrrb.indianrailways.gov.in
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕಹೆಲ್ಪ್‌.ಇನ್

About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

1 thought on “ಆರ್‌ಆರ್‌ಬಿ ಎಂಟಿಪಿಸಿ(ಪದವಿ) ಹುದ್ದೆಗಳ ನೇಮಕಾತಿ”

Leave a Comment