ಕೆನರಾ ಬ್ಯಾಂಕ್‌ನಲ್ಲಿ ಅಪ್ರೆಂಟಿಸ್‌ಶಿಪ್; 3500 ಸೀಟುಗಳು!

ಯಾವುದೇ ಪದವೀಧರರಿಗೆ ಆದ್ಯತೆ

Published on:

ಬೆಂಗಳೂರು: ಸಾರ್ವಜನಿಕ ವಲಯದ ಬ್ಯಾಂಕಾಗಿರುವ ಕೆನರಾ ಬ್ಯಾಂಕ್‌, 2026-27ನೇ ಹಣಕಾಸು ವರ್ಷಕ್ಕೆ ಅಪ್ರೆಂಟಿಸ್‌ಶಿಪ್‌ ಕಾಯ್ದೆಯಡಿ ಪದವೀಧರ ಅಪ್ರೆಂಟಿಸ್‌ ತರಬೇತಿಗೆ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.

ಕರ್ನಾಟಕ 581 ಸೀಟುಗಳು ಸೇರಿದಂತೆ ಒಟ್ಟು 3,500 ಸೀಟುಗಳಿಗೆ ನೇಮಕಾತಿ ನಡೆಯಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ನಿಗದಿತ ಶಿಷ್ಯವೇತನದ ಜೊತೆಗೆ 12 ತಿಂಗಳ ತರಬೇತಿ ಸಿಗಲಿದೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ- ಅಕ್ಟೋಬರ್ 01
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಅಕ್ಟೋಬರ್‌ 17

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Graduation) ಅಥವಾ ಅದಕ್ಕೆ ಸಮಾನವಾದ ಅರ್ಹತೆಯನ್ನು ಹೊಂದಿರಬೇಕು.

ಅಭ್ಯರ್ಥಿಗಳು ತಮ್ಮ ಪದವಿಯನ್ನು 01.01.2023 ರಿಂದ 01.09.2026 ರ ನಡುವೆ (ಎರಡೂ ದಿನಗಳು ಸೇರಿ) ಪೂರ್ಣಗೊಳಿಸಿರಬೇಕು.

ಸ್ಥಳೀಯ ಭಾಷೆಯ ಜ್ಞಾನ: ಅಭ್ಯರ್ಥಿಗಳು ತಾವು ಆಯ್ಕೆ ಮಾಡಿಕೊಳ್ಳುವ ರಾಜ್ಯದ ಸ್ಥಳೀಯ ಭಾಷೆಯನ್ನು ಹೊಂದಿರಬೇಕು. 10ನೇ ಅಥವಾ 12ನೇ ತರಗತಿಯಲ್ಲಿ ಸ್ಥಳೀಯ ಭಾಷೆಯನ್ನು ಓದಿರುವ ಪ್ರಮಾಣಪತ್ರ ಹೊಂದಿದ್ದರೆ ಭಾಷಾ ಪರೀಕ್ಷೆಯಿಂದ ವಿನಾಯಿತಿ ಇರುತ್ತದೆ. ಇಲ್ಲದಿದ್ದರೆ, ದಾಖಲಾತಿ ಪರಿಶೀಲನೆ ಸಮಯದಲ್ಲಿ ಸ್ಥಳೀಯ ಭಾಷಾ ಪರೀಕ್ಷೆ ನಡೆಸಲಾಗುತ್ತದೆ.

ವಯೋಮಿತಿ:

01.09.2026 ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷಗಳು (ಅಂದರೆ ಅಭ್ಯರ್ಥಿಗಳು 02.09.1998 ಕ್ಕಿಂತ ಮುಂಚೆ ಮತ್ತು 01.09.2006 ಕ್ಕಿಂತ ನಂತರ ಜನಿಸಿರಬಾರದು).

  • ಗರಿಷ್ಠ ವಯೋಮಿತಿ ಸಡಿಲಿಕೆ:
    • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (SC/ST) ಅಭ್ಯರ್ಥಿಗಳಿಗೆ 5 ವರ್ಷಗಳು
    • ಇತರ ಹಿಂದುಳಿದ ವರ್ಗಗಳ(OBC – Non-Creamy Layer) ಅಭ್ಯರ್ಥಿಗಳಿಗೆ 3 ವರ್ಷಗಳು
    • ವಿಕಲಚೇತನ(PwBD) ಅಭ್ಯರ್ಥಿಗಳಿಗೆ 10 ವರ್ಷಗಳು
    • ವಿಧವೆಯರು, ವಿಚ್ಛೇದಿತ ಮಹಿಳೆಯರು ಮತ್ತು ಕಾನೂನುಬದ್ಧವಾಗಿ ಪತಿಯಿಂದ ಬೇರ್ಪಟ್ಟ ಮರುಮದುವೆಯಾಗದ ಮಹಿಳೆಯರಿಗೆ ಸಾಮಾನ್ಯ/ಇಡಬ್ಲ್ಯೂಎಸ್(EWS) ವರ್ಗಕ್ಕೆ 35 ವರ್ಷ, OBC ಗೆ 38 ವರ್ಷ ಮತ್ತು SC/ST ಗೆ 40 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳ ಆಯ್ಕೆಯನ್ನು 12ನೇ ತರಗತಿ (HSC/10+2) ಅಥವಾ ಡಿಪ್ಲೊಮಾ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡಾವಾರು ಆಧಾರದ ಮೇಲೆ ರಾಜ್ಯವಾರು ಮೆರಿಟ್ ಪಟ್ಟಿ ಸಿದ್ಧಪಡಿಸಿ ಮಾಡಲಾಗುತ್ತದೆ.

  • ಕನಿಷ್ಠ ಅರ್ಹತಾ ಅಂಕಗಳು 12ನೇ ತರಗತಿ/ಡಿಪ್ಲೊಮಾದಲ್ಲಿ ಕನಿಷ್ಠ ಶೇ.60 ಅಂಕಗಳು(ಎಸ್ಸಿ/ಎಸ್ಟಿ/ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಶೇ. 55) ಇರಬೇಕು.
  • ಮೆರಿಟ್ ಪಟ್ಟಿಯಲ್ಲಿ ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆ ಮತ್ತು ಅಗತ್ಯವಿದ್ದಲ್ಲಿ ಸ್ಥಳೀಯ ಭಾಷಾ ಪರೀಕ್ಷೆ ನಡೆಸಲಾಗುತ್ತದೆ.
  • ಅಂತಿಮ ಆಯ್ಕೆಯು ವೈದ್ಯಕೀಯ ಫಿಟ್‌ನೆಸ್‌ಗೆ ಒಳಪಟ್ಟಿರುತ್ತದೆ.

ವೇತನ / ಸ್ಟೈಪೆಂಡ್:

ಆಯ್ಕೆಯಾದ ಅಭ್ಯರ್ಥಿಗಳಿಗೆ 12 ತಿಂಗಳ ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ರೂ.16,650/- ಮಾಸಿಕ ಸ್ಟೈಪೆಂಡ್ ನೀಡಲಾಗುತ್ತದೆ.

ಇದರಲ್ಲಿ ಕೆನರಾ ಬ್ಯಾಂಕ್ ನೇರವಾಗಿ ಅಭ್ಯರ್ಥಿಯ ಖಾತೆಗೆ ರೂ.10,500/- ಪಾವತಿಸಿದರೆ, ಉಳಿದ ರೂ.6,150/- ಗಳ ಸರ್ಕಾರಿ ಪಾಲನ್ನು DBT ಮೂಲಕ ನೇರವಾಗಿ ಅಭ್ಯರ್ಥಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ತರಬೇತಿ ಪಡೆಯುವ ಅಭ್ಯರ್ಥಿಗಳನ್ನು ಬ್ಯಾಂಕ್‌ನ ನೌಕರರೆಂದು ಪರಿಗಣಿಸಲಾಗುವುದಿಲ್ಲ ಮತ್ತು ಯಾವುದೇ ಇತರ ಭತ್ಯೆ ಅಥವಾ ಸೌಲಭ್ಯಗಳಿಗೆ ಅವರು ಅರ್ಹರಾಗಿರುವುದಿಲ್ಲ ಎಂದು ಅಧಿಕೃತ ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.

ಅರ್ಜಿ ಶುಲ್ಕ:

  • ಎಸ್ಸಿ/ಎಸ್ಟಿ/ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ
  • ಇತರ ಎಲ್ಲಾ ಅಭ್ಯರ್ಥಿಗಳಿಗೆ ರೂ.500/- (ಮಾಹಿತಿ ಶುಲ್ಕ ಸೇರಿದಂತೆ).

ಶುಲ್ಕವನ್ನು ಆನ್‌ಲೈನ್ ಮೋಡ್ (ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಇತ್ಯಾದಿ) ಮೂಲಕ ಮಾತ್ರ ಪಾವತಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ.?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಕೆನರಾ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ www.canarabank.bank.inನ ಫುಟರ್‌ ಭಾಗದಲ್ಲಿ “QUICK ACCESS” ವಿಭಾಗದಡಿ → “CAREERS” ಎಂಬ ಶೀರ್ಷಿಕೆಯ ಮೇಲೆ ಕ್ಲಿಕ್ಕಿಸಿ. ನಂತರ ಪುಟ ತೆರೆಯುತ್ತದೆ ಅಲ್ಲಿ → “Recruitment” ವಿಭಾಗದಡಿ “Engagement of Graduate Apprentices in Canara Bank under Apprentices Act, 1961 for FY 2026-27. [NEW]” ಎಂಬ ಶೀರ್ಷಿಕೆಯಡಿ ಒದಗಿಸಲಾಗಿರುವ ಆನ್‌ಲೈನ್‌ ಅರ್ಜಿ ನಮೂನೆ ಲಿಂಕ್‌ ಬಳಸಿಕೊಂಡು ಅರ್ಜಿ ಸಲ್ಲಿಸಬಹುದು.

ಸೂಚನೆ: ಅಭ್ಯರ್ಥಿಗಳು ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸುವ ಮುನ್ನ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ತರಬೇತಿ ಯೋಜನೆ(NATS) ಪೋರ್ಟಲ್‌ನಲ್ಲಿ (https://nats.education.gov.in) ಶೇ.100 ರಷ್ಟು ಪ್ರೊಫೈಲ್ ಪೂರ್ಣಗೊಳಿಸಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

ಪ್ರಮುಖ ಲಿಂಕ್‌ಗಳು:

ಅಧಿಕೃತ ಅಧಸೂಚನೆ ಪಿಡಿಎಫ್‌ ಲಿಂಕ್ಡೌನ್ಲೋಡ್‌ ಮಾಡಿ
ಆನ್‌ಲೈನ್‌ ಅರ್ಜಿ ನಮೂನೆ ಲಿಂಕ್(ಅ.01 ರಿಂದ ಲಭ್ಯ)ಈಗಲೇ ಅರ್ಜಿ ಸಲ್ಲಿಸಿ
ಅಧಿಕೃತ ಜಾಲತಾಣcanarabank.bank.in
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕಹೆಲ್ಪ್‌.ಇನ್
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment