ಶಿಲ್ಲಾಂಗ್(ಮೇಘಾಲಯ): ಅಸ್ಸಾಂ ರೈಫಲ್ಸ್‌ನ ಮಹಾನಿರ್ದೇಶಕರ ಕಚೇರಿಯು ಅಸ್ಸಾಂ ರೈಫಲ್ಸ್ ಟೆಕ್ನಿಕಲ್ ಮತ್ತು ಟ್ರೇಡ್ಸ್‌ಮನ್ ನೇಮಕಾತಿ ರ‍್ಯಾಲಿ 2026ರ ಮೂಲಕ ವಿವಿಧ ಗ್ರೂಪ್-ಸಿ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ನೇಮಕಾತಿ ರ‍್ಯಾಲಿಯು ನವೆಂಬರ್ 23, 2026ರಿಂದ ಆರಂಭವಾಗಲಿದೆ. ಹವಲ್ದಾರ್ ಹಾಗೂ ನಾನಾ ಟ್ರೇಡ್‌ನ ವಾರಂಟ್ ಆಫೀಸರ್, ರೈಫಲ್ ಮ್ಯಾನ್ ಹುದ್ದೆ ಸೇರಿದಂತೆ ಒಟ್ಟು 354 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ- ಸೆಪ್ಟೆಂಬರ್ 28, 2026.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಅಕ್ಟೋಬರ್ 28, 2026 (ರಾತ್ರಿ 23:59 ಗಂಟೆಯವರೆಗೆ).
- ನೇಮಕಾತಿ ರ‍್ಯಾಲಿ ಪ್ರಾರಂಭ ದಿನಾಂಕ(ತಾತ್ಕಾಲಿಕ)- ನವೆಂಬರ್ 23, 2026
ಹುದ್ದೆವಾರು ಹುದ್ದೆಗಳ ಸಂಖ್ಯೆ:
| ಹುದ್ದೆಯ ಹೆಸರು (Trade) | ಒಟ್ಟು ಹುದ್ದೆಗಳ ಸಂಖ್ಯೆ |
|---|---|
| ವಾರಂಟ್ ಆಫೀಸರ್ (ಚಿಫರ್)/ Warrant Officer (Cipher) | 124 |
| ರೈಫಲ್‌ಮನ್ (ಎಲೆಕ್ಟ್ರಿಕಲ್ ಫಿಟ್ಟರ್ ಸಿಗ್ನಲ್)/ Rifleman (Electrical Fitter Signal) | 32 |
| ರೈಫಲ್‌ಮನ್ (ಲೈನ್‌ಮನ್ ಫೀಲ್ಡ್)/ Rifleman (Lineman Field) | 21 |
| ರೈಫಲ್‌ಮನ್ (ಆರ್ಮರರ್)/ Rifleman (Armourer) | 29 |
| ರೈಫಲ್‌ಮನ್ (ಇಂಜಿನಿಯರ್ ಎಕ್ವಿಪ್ಮೆಂಟ್ ಮೆಕ್ಯಾನಿಕ್)/Rifleman (Engineer Equipment Mechanic) | 10 |
| ರೈಫಲ್‌ಮನ್ (ರಿಕವರಿ ವೆಹಿಕಲ್ ಮೆಕ್ಯಾನಿಕ್)/ Rifleman (Recovery Vehicle Mechanic) | 13 |
| ರೈಫಲ್‌ಮನ್ (ಎಲೆಕ್ಟ್ರಿಷಿಯನ್ ಮೋಟಾರ್ ವೆಹಿಕಲ್)/ Rifleman (Electrician Motor Vehicle) | 22 |
| ಹವಲ್ದಾರ್ (ಇನ್ಸ್ಟ್ರುಮೆಂಟ್ ಮೆಕ್ಯಾನಿಕ್)/ Havildar (Instrument Mechanic) | 06 |
| ರೈಫಲ್‌ಮನ್ (ಮೆಟಲ್‌ಸ್ಮಿತ್)/ Rifleman (Metalsmith) | 19 |
| ರೈಫಲ್‌ಮನ್ (ಅಪ್ಹೋಲ್ಸ್ಟರ್)/ Rifleman (Upholster) | 03 |
| ರೈಫಲ್‌ಮನ್ ಸ್ಟೋರ್ ಕೀಪರ್ ಟೆಕ್ನಿಕಲ್ (ಎಲೆಕ್ಟ್ರಿಕಲ್ ಮೆಕ್ಯಾನಿಕಲ್ ಇಂಜಿನಿಯರ್)/ Rifleman Store Keeper Technical (Electrical Mechanical Engineer) | 16 |
| ರೈಫಲ್‌ಮನ್ (ವೆಹಿಕಲ್ ಮೆಕ್ಯಾನಿಕ್)/ Rifleman (Vehicle Mechanic) | 23 |
| ರೈಫಲ್‌ಮನ್ (ವೆಲ್ಡರ್)/ Rifleman (Welder) | 02 |
| ವಾರಂಟ್ ಆಫೀಸರ್ (ಡ್ರಾಫ್ಟ್ಸ್‌ಮನ್)/ Warrant Officer (Draughtsman) | 02 |
| ವಾರಂಟ್ ಆಫೀಸರ್(ಆಪರೇಷನ್ ಥಿಯೇಟರ್ ಟೆಕ್ನಿಷಿಯನ್)/ Warrant Officer (Operation Theatre Technician) | 01 |
| ವಾರಂಟ್ ಆಫೀಸರ್ (ಫಿಸಿಯೋಥೆರಪಿಸ್ಟ್)/ Warrant Officer (Physiotherapist) | 02 |
| ರೈಫಲ್‌ಮನ್ (ಮೇಸನ್)/ Rifleman (Mason) | 29 |
| ಒಟ್ಟು ಹುದ್ದೆಗಳು | 354 |
ಶೈಕ್ಷಣಿಕ ಅರ್ಹತೆ:
ರೈಫಲ್‌ಮನ್ (ಎಲೆಕ್ಟ್ರಿಕಲ್ ಫಿಟ್ಟರ್ ಸಿಗ್ನಲ್) ಹುದ್ದೆಗೆ; 10ನೇ ತರಗತಿ ತೇರ್ಗಡೆ ಮತ್ತು ಐಟಿಐ(ITI) ನಲ್ಲಿ ಸಂಬಂಧಿತ ಟ್ರೇಡ್ ಪ್ರಮಾಣಪತ್ರ ಅಥವಾ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ.
ರೈಫಲ್‌ಮನ್ (ಲೈನ್‌ಮನ್ ಫೀಲ್ಡ್) ಹುದ್ದೆಗೆ; 10ನೇ ತರಗತಿ ತೇರ್ಗಡೆ ಮತ್ತು ಐಟಿಐ ಅಥವಾ ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ.
ರೈಫಲ್‌ಮನ್ (ಆರ್ಮರರ್) ಹುದ್ದೆಗೆ; 10ನೇ ತರಗತಿ ತೇರ್ಗಡೆ ಮತ್ತು ವೆಲ್ಡಿಂಗ್ ಟ್ರೇಡ್‌ನಲ್ಲಿ ಐಟಿಐ ಪ್ರಮಾಣಪತ್ರ.
ರೈಫಲ್‌ಮನ್ (ವೆಹಿಕಲ್ ಮೆಕ್ಯಾನಿಕ್) ಹುದ್ದೆಗೆ; 10ನೇ ತರಗತಿ ತೇರ್ಗಡೆ ಮತ್ತು ಐಟಿಐ ಅಥವಾ ಮೆಕ್ಯಾನಿಕ್ ಮೋಟಾರ್ ವೆಹಿಕಲ್/ಡೀಸೆಲ್ ಮೆಕ್ಯಾನಿಕ್ ಇತ್ಯಾದಿಗಳಲ್ಲಿ ಡಿಪ್ಲೊಮಾ.
ವಾರಂಟ್ ಆಫೀಸರ್ (ಡ್ರಾಫ್ಟ್ಸ್‌ಮನ್) ಹುದ್ದೆಗೆ; 12ನೇ ತರಗತಿ ತೇರ್ಗಡೆ ಮತ್ತು ಆರ್ಕಿಟೆಕ್ಚರಲ್ ಅಸಿಸ್ಟೆಂಟ್‌ಶಿಪ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ.
ವಾರಂಟ್ ಆಫೀಸರ್ (ಫಿಸಿಯೋಥೆರಪಿಸ್ಟ್) ಹುದ್ದೆಗೆ; 12ನೇ ತರಗತಿ ತೇರ್ಗಡೆ, ಫಿಸಿಯೋಥೆರಪಿಯಲ್ಲಿ ಕನಿಷ್ಠ ಎರಡು ವರ್ಷಗಳ ಡಿಪ್ಲೊಮಾ ಮತ್ತು ಕನಿಷ್ಠ 50 ಹಾಸಿಗೆಗಳ ಆಸ್ಪತ್ರೆಯಲ್ಲಿ ಒಂದು ವರ್ಷದ ಕೆಲಸದ ಅನುಭವ.
(ಗಮನಿಸಿ: ಇತರ ಹುದ್ದೆಗಳಿಗೂ ಆಯಾ ಟ್ರೇಡ್‌ಗೆ ಸಂಬಂಧಿಸಿದಂತೆ 10ನೇ ತರಗತಿ/12ನೇ ತರಗತಿ/ಐಟಿಐ/ಡಿಪ್ಲೊಮಾ ಅರ್ಹತೆಗಳನ್ನು ನಿಗದಿಪಡಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿ).
ವಯೋಮಿತಿ:
01-07-2026 ಕ್ಕೆ ಅನ್ವಯಿಸುವಂತೆ;
ಸಾಮಾನ್ಯ ವಯೋಮಿತಿ: ಹೆಚ್ಚಿನ ಹುದ್ದೆಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 23 ವರ್ಷಗಳು. ವಾರಂಟ್ ಆಫೀಸರ್ (ಚಿಫರ್, ಡ್ರಾಫ್ಟ್ಸ್‌ಮನ್, ಆಪರೇಷನ್ ಥಿಯೇಟರ್ ಟೆಕ್ನಿಷಿಯನ್ ಮತ್ತು ಫಿಸಿಯೋಥೆರಪಿಸ್ಟ್) ಹುದ್ದೆಗಳಿಗೆ ವಯೋಮಿತಿ 18 ರಿಂದ 25 ವರ್ಷಗಳು.
ವಯೋಮಿತಿ ಸಡಿಲಿಕೆ: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳಿಗೆ: 5 ವರ್ಷಗಳು. ಇತರ ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳಿಗೆ: 3 ವರ್ಷಗಳು. ಮಾಜಿ ಸೈನಿಕರಿಗೆ(ಇಎಸ್‌ಎಂ) ನಿಯಮಾನುಸಾರ ಸಡಿಲಿಕೆ ಇರುತ್ತದೆ.
ಇಲಾಖಾ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷಗಳವರೆಗೆ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಈ ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
- ದೈಹಿಕ ಗುಣಮಟ್ಟದ ಪರೀಕ್ಷೆ(ಪಿಎಸ್ಟಿ) ಮತ್ತು ದೈಹಿಕ ದಕ್ಷತೆ ಪರೀಕ್ಷೆ(ಪಿಇಟಿ): ಆರ್‌ಎಫ್‌ಐಡಿ (RFID) ತಂತ್ರಜ್ಞಾನ ಆಧಾರಿತ ಓಟದ ಸ್ಪರ್ಧೆ ಮತ್ತು ದೈಹಿಕ ಅಳತೆಗಳ ತಪಾಸಣೆ.
- ದಾಖಲೆಗಳ ಪರಿಶೀಲನೆ(ಡಿವಿ).
- ಗಣಕಯಂತ್ರ ಆಧಾರಿತ ಪರೀಕ್ಷೆ(ಸಿಬಿಟಿ): 100 ಅಂಕಗಳ ಲಿಖಿತ ಪರೀಕ್ಷೆ.
- ಟ್ರೇಡ್ ಸ್ಕಿಲ್ ಟೆಸ್ಟ್(ಕೌಶಲ್ಯ ಪರೀಕ್ಷೆ): ಪ್ರಾಯೋಗಿಕ ಕೌಶಲ್ಯ ಪರೀಕ್ಷೆ (ಇದಕ್ಕೆ ಯಾವುದೇ ಅಂಕಗಳಿರುವುದಿಲ್ಲ, ಕೇವಲ ಅರ್ಹತೆಗಾಗಿ ಮಾತ್ರ).
- ವೈದ್ಯಕೀಯ ತಪಾಸಣೆ: ವಿವರವಾದ ವೈದ್ಯಕೀಯ ಪರೀಕ್ಷೆ(ಡಿಎಂಇ) ಮತ್ತು ಅಗತ್ಯವಿದ್ದರೆ ಮರು ವೈದ್ಯಕೀಯ ಪರೀಕ್ಷೆ(ಆರ್‌ಎಂಇ).
- ಅಂತಿಮ ಮೆರಿಟ್ ಪಟ್ಟಿ: ಎಲ್ಲಾ ಹಂತಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುತ್ತದೆ.
ಸಂಬಳ:
ಅಸ್ಸಾಂ ರೈಫಲ್ಸ್ ಸಿಬ್ಬಂದಿಗೆ ಅನ್ವಯವಾಗುವ ವೇತನ ಶ್ರೇಣಿ ಮತ್ತು ಇತರ ಭತ್ಯೆಗಳ ಪ್ರಕಾರ ಸಂಬಳವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
- ಗ್ರೂಪ್ ಸಿ ಹುದ್ದೆಗಳಿಗೆ ರೂ.100/-.
- ಪರಿಶಿಷ್ಟ ಜಾತಿ(ಎಸ್‌ಸಿ), ಪರಿಶಿಷ್ಟ ಪಂಗಡ(ಎಸ್‌ಟಿ) ಮತ್ತು ಮಾಜಿ ಸೈನಿಕ(Ex-servicemen) ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಪಾವತಿ ವಿಧಾನ: ಎಸ್‌ಬಿಐ (SBI) ಚಲನ್ ಅಥವಾ ಆನ್‌ಲೈನ್ ಪಾವತಿ ಮೂಲಕ ನಿಗದಿತ ಬ್ಯಾಂಕ್ ಖಾತೆಗೆ ಶುಲ್ಕ ಪಾವತಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅರ್ಹ ಅಭ್ಯರ್ಥಿಗಳು ಅಸ್ಸಾಂ ರೈಫಲ್ಸ್ ಅಧಿಕೃತ ಜಾಲತಾಣ https://www.assamrifles.gov.in/join-assam-riflesದಲ್ಲಿ ಸೆ.28ರಿಂದ ಲಭ್ಯವಾಗಲಿರುವ ಲಿಂಕ್ ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ಲಿಂಕ್‌ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ನಮೂನೆ ಲಿಂಕ್(ಸೆ.28ರಿಂದ ಲಭ್ಯ) | ಈಗಲೇ ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | www.assamrifles.gov.in |
| ಮತ್ತಷ್ಟು ಸುದ್ದಿಗಾಗಿ | ಕರ್ನಾಟಕಹೆಲ್ಪ್.ಇನ್ |