ರಸಗೊಬ್ಬರ ಸಂಸ್ಥೆ(HURL)ಯಲ್ಲಿ ವಿವಿಧ ಹುದ್ದೆಗಳ ಭರ್ತಿ

40 ಸ್ಥಾನಗಳಿಗೆ ಭರ್ತಿ

Published on:

ಸರ್ಕಾರಿ ಸ್ವಾಮ್ಯದ ಪ್ರಮುಖ ರಸಗೊಬ್ಬರ ಸಂಸ್ಥೆಯಾಗಿರುವ ಹಿಂದೂಸ್ತಾನ್ ಉರ್ವರಕ್ & ರಸಾಯನ ಲಿಮಿಟೆಡ್‌ ತನ್ನ ವಿವಿಧ ವಿಭಾಗಗಳಿಗೆ ಎಕ್ಸಿಕ್ಯೂಟಿವ್‌ ಮತ್ತು ನಾನ್‌ ಯುನಿನೈಸೆಡ್‌ ಸೂಪರ್ವೈಸರ್‌ (NUS) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಮಾ.12ರವರೆಗೆ ಅವಕಾಶವಿದೆ.

ಅಧಿಕಾರಿ (07 ಹುದ್ದೆ), ಸಹಾಯಕ ವ್ಯವಸ್ಥಾಪಕ (03 ಹುದ್ದೆ), ಜೂನಿಯರ್ ಎಂಜಿನಿಯರ್ ಸಹಾಯಕ (30 ಹುದ್ದೆ) ಸೇರಿದಂತೆ ಒಟ್ಟು 40 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಮತ್ತು ಅರ್ಹ ಅರ್ಜಿದಾರರು HURL ಅಧಿಕೃತ ಜಾಲತಾಣ https://jobse0226.hurl.net.in/ಕ್ಕೆ ಭೇಟಿ ನೀಡಿ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಫೆಬ್ರವರಿ 11, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮಾರ್ಚ್ 12, 2026

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಬಿ.ಎಸ್ಸಿ/ಎಂ.ಎಸ್ಸಿ/ಎಂಬಿಎ/ಪಿಜಿಡಿಬಿಎಂ/ ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ/ಬಿ.ಟೆಕ್ ಪದವಿ ಪೂರ್ಣಗೊಳಿಸಿರಬೇಕು.

ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆ ನಿಗದಿ ಪಡಿಸಲಾಗಿದೆ. ತಪ್ಪದೇ ಅಧಿಕೃತ ಅಧಿಸೂಚನೆಯನ್ನು ಓದಿ.

ವಯೋಮಿತಿ:

ಸಹಾಯಕ ವ್ಯವಸ್ಥಾಪಕರ ಹುದ್ದೆಗಳಿಗೆ – ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು
ಅಧಿಕಾರಿ ಹಾಗೂ ಜೂನಿಯರ್ ಎಂಜಿನಿಯರ್ ಸಹಾಯಕ ಹುದ್ದೆಗಳಿಗೆ – ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು

ವಯೋಮಿತಿ ಸಡಿಲಿಕೆ; ಹಿಂದೂಸ್ತಾನ್ ಉರ್ವರಕ್ & ರಸಾಯನ ಲಿಮಿಟೆಡ್ (HURL) ಮಾನದಂಡಗಳ ಅನುಸಾರ

ಆಯ್ಕೆ ಪ್ರಕ್ರಿಯೆ:

  • ಅರ್ಹ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್
  • ಸಂದರ್ಶನ
  • ವೈದ್ಯಕೀಯ ಪರೀಕ್ಷೆ

ಒಕ್ಕೂಟೇತರ ಮೇಲ್ವಿಚಾರಕರು (NUS)

NUS ಹುದ್ದೆಗೆ ಟ್ರೇಡ್‌/ಕೌಶಲ್ಯ/ಲಿಖಿತ ಪರೀಕ್ಷೆ ಅಥವಾ ಯಾವುದೇ ಇತರ ಸೂಕ್ತ ವಿಧಾನದ ಮೂಲಕ ಮಾಡಲಾಗುತ್ತದೆ.

ಸಂಬಳ:

ಅಧಿಕಾರಿ ಹುದ್ದೆಗಳಿಗೆ ₹40,000-1,40,000
ಸಹಾಯಕ ವ್ಯವಸ್ಥಾಪಕರ ಹುದ್ದೆಗಳಿಗೆ – ₹50,000-1,60,000
ಜೂನಿಯರ್ ಎಂಜಿನಿಯರ್ ಸಹಾಯಕ ಹುದ್ದೆಗಳಿಗೆ – ₹25,000-86,400

ಅರ್ಜಿ ಶುಲ್ಕ:

ಅರ್ಜಿ ಶುಲ್ಕ ಉಲ್ಲೇಖಿಸಲಾಗಿರುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ.?

• ಮೊದಲಿಗೆ ಅಭ್ಯರ್ಥಿಗಳು HURL ಅಧಿಕೃತ ಜಾಲತಾಣ https://jobse0226.hurl.net.in/ ಕ್ಕೆ ಭೇಟಿ ನೀಡಿ.

• ನೋಂದಣಿ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.

Hurl Executive And Non Unionised Supervisors (Nus) Notification 2026
Hurl Executive And Non Unionised Supervisors (Nus) Notification 2026

• ನಂತರ ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.

• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ ಸಲ್ಲಿಸಿ.

• ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.̳

Important Direct Links:

Last Date Extension Notice PDFDownload
Official Notification PDFDownload
Online Application Form Link
Apply Now
Official Websitewww.hurl.net.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment