ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಲ್ಲಿ ಸಿವಿಲ್ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ(BMRCL Recruitment 2025) ಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಲ್ಲಿ ಸಿವಿಲ್ ಎಂಜಿನಿಯರ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಒಟ್ಟು 35 ಸಿವಿಲ್ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಬಿಎಂಆರ್‌ಸಿಎಲ್ ಅಧಿಕೃತ ವೆಬ್ ಸೈಟ್ https://projectrecruit.bmrc.co.in/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ಪ್ರಮುಖ ದಿನಾಂಕಗಳು, ಪ್ರಮುಖ ದಿನಾಂಕಗಳು, ಅರ್ಹತೆ ಹಾಗೂ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
Organization Name – Bangalore Metro Rail Corporation Limited Post Name – Graduate Engineer (Civil) Total Vacancy – 35 Application Process – Online Job Location – Bengaluru
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಆನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 03 – 05 – 2025 ಹಾರ್ಡ್ ಕಾಪಿ ಕಳುಹಿಸಲು ಕೊನೆಯ ದಿನಾಂಕ – 07 – 05 – 2025
ಖಾಲಿ ಇರುವ ಹುದ್ದೆಗಳ ವಿವರ:
ಬಿಎಂಆರ್‌ಸಿಎಲ್ ನಲ್ಲಿ ಒಟ್ಟು 35 ಪದವೀಧರ ಎಂಜಿನಿಯರ್ (ಸಿವಿಲ್) ಹುದ್ದೆಗೆ ಒಪ್ಪಂದದ ಮೇರೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಶೈಕ್ಷಣಿಕ ಅರ್ಹತೆ:
ಮಾನ್ಯತೆ ಪಡೆದ ಸಂಸ್ಥೆಯಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿಇ/ಬಿ.ಟೆಕ್.
ಕನಿಷ್ಠ 60% ಪ್ರತಿಶತ ಮಾನ್ಯ ಗೇಟ್ ಅಂಕಗಳೊಂದಿಗೆ ಸಿವಿಲ್ ಎಂಜಿನಿಯರಿಂಗ್ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
ಕನ್ನಡ ಭಾಷಾಜ್ಞಾನ ಕಡ್ಡಾಯ.
ವಯೋಮಿತಿ:
ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಗೇಟ್ ಸ್ಕೋರ್ (ಮುಖ್ಯ ಆಯ್ಕೆಯ ಮಾನದಂಡ)
ಅಭ್ಯರ್ಥಿಗಳ ಶಾರ್ಟ್ ಲಿಸ್ಟ್
ಸಂದರ್ಶನ ಮತ್ತು ದಾಖಲೆ ಪರಿಶೀಲನೆ.
ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 44 ಸಾವಿರ ವೇತನವನ್ನು ನೀಡಲಾಗುತ್ತದೆ.
ಬಿಎಂಆರ್‌ಸಿಎಲ್ ನಿಯಮಗಳ ಪ್ರಕಾರ ಇತರ ಸವಲತ್ತುಗಳು ದೊರೆಯುತ್ತದೆ.
ಅರ್ಜಿ ಶುಲ್ಕ:
ಅರ್ಜಿ ಶುಲ್ಕವನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿರುವುದಿಲ್ಲ.
How to Apply for BMRCL Engineer Recruitment 2025
ಅರ್ಜಿ ಸಲ್ಲಿಸುವ ವಿಧಾನ
• ಬಿ ಎಂ ಆರ್ ಸಿ ಎಲ್ ನ ಅಧಿಕೃತ ವೆಬ್ ಸೈಟ್ https://english.bmrc.co.in/ ಗೆ ಭೇಟಿ ನೀಡಿ.
ಮುಖಪುಟದಲ್ಲಿ ವೃತ್ತಿ ಜೀವನ ಆಯ್ಕೆ ಮಾಡಿ.
ಬಿಎಂಆರ್‌ಸಿಎಲ್/ಎಚ್‌ಆರ್/0005/ಪಿಆರ್‌ಜೆ/ಸಿವಿಲ್/2025 ಲಿಂಕ್ ಮೇಲೆ ಕ್ಲಿಕ್ ಮಾಡಿ.
ಸ್ವ- ವಿವರ ಹಾಗೂ ಕೇಳಲಾಗುವ ಅಗತ್ಯ ಶೈಕ್ಷಣಿಕದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.
ಅಗತ್ಯವಿರುವ ಎಲ್ಲಾ ದಾಖಲೆಗಳನ್ನು (ಗೇಟ್ ಅಂಕಪಟ್ಟಿ, ಅರ್ಹತಾ ಪ್ರಮಾಣಪತ್ರಗಳು, ಇತ್ಯಾದಿ) ಲಗತ್ತಿಸಿ. ಹಾರ್ಡ್ ಕಾಪಿಯನ್ನು ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ. (ಲಕೋಟೆಯ ಮೇಲೆ ಪದವಿ ಎಂಜಿನಿಯರ್ (ಸಿವಿಲ್) ಹುದ್ದೆಗೆ ಅರ್ಜಿ ಎಂದು ಬರೆಯಿರಿ.)
ಜನರಲ್ ಮ್ಯಾನೇಜರ್ (HR) ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ III ಮಹಡಿ, BMTC ಕಾಂಪ್ಲೆಕ್ಸ್, KH ರಸ್ತೆ ಶಾಂತಿನಗರ, ಬೆಂಗಳೂರು – 560027
ಹೆಚ್ಚಿನ ಮಾಹಿತಿಗಾಗಿ: ತಾಂತ್ರಿಕ ಸಮಸ್ಯೆಗಳು ಕಂಡುಬಂದಲ್ಲಿ ಇಮೇಲ್ ಐಡಿ helpdesk@bmrc.co.in ಅನ್ನು ಸಂಪರ್ಕಿಸಿ. (ಇಮೇಲ್‌ನಲ್ಲಿ ನಿಮ್ಮ ಸಂಪರ್ಕ ಸಂಖ್ಯೆಯನ್ನು ನಮೂದಿಸಿ)