ಕೇಂದ್ರೀಯ ನೇರ ತೆರಿಗೆ ಮಂಡಳಿಯು (CBDT) ಖಾಲಿ ಇರುವ 22 ಹಿರಿಯ ಅನುವಾದ ಅಧಿಕಾರಿ ಹುದ್ದೆಗಳ ನೇಮಕಾತಿ(CBDT Recruitment 2025) ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಒಟ್ಟು 22 ಅನುವಾದ ಅಧಿಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಗುಜರಾತ್, ಕರ್ನಾಟಕ, ಗೋವಾ, ಒಡಿಶಾ, ಎನ್‌ಡಬ್ಲ್ಯೂಆರ್, ತಮಿಳುನಾಡು, ಪುದುಚೇರಿ, ದೆಹಲಿ, ಕೇರಳ, ಮುಂಬೈ, ಪುಣೆ ವಲಯ ಘಟಕಗಳಲ್ಲಿ ಒಟ್ಟು 22 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
Highlights of Income Tax Job News
Organization Name – The Central Board of Direct Taxes (CBDT)
Post Name – Senior Translation Officer
Total Vacancy – 22
Application Process – Online
Job Location – All India (Karnataka)
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – 26-03-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -18-05-2024
ಶೈಕ್ಷಣಿಕ ಅರ್ಹತೆ:
ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ / ಪದವಿ ಶಿಕ್ಷಣವನ್ನು ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಓದಿರಬೇಕು.
- ಭಾರತ ಸರ್ಕಾರಿ ಸಂಸ್ಥೆಗಳು ಸೇರಿದಂತೆ ಕೇಂದ್ರ/ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಹಿಂದಿಯಿಂದ ಇಂಗ್ಲಿಷ್‌ಗೆ ಮತ್ತು ಪ್ರತಿಯಾಗಿ ಅನುವಾದ ಕಾರ್ಯದಲ್ಲಿ ಎರಡು ವರ್ಷಗಳ ಅನುಭವ.
ವಯೋಮಿತಿ:
ಗರಿಷ್ಠ ವಯಸ್ಸಿನ ಮಿತಿ – 56 ವರ್ಷಗಳು.
ಆಯ್ಕೆ ಪ್ರಕ್ರಿಯೆ:
- ಅಭ್ಯರ್ಥಿಗಳ ವಿದ್ಯಾರ್ಹತೆ, ಕಾರ್ಯಾನುಭವ, ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.
- ಸಂದರ್ಶನ.
- ಕೌಶಲ್ಯ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಉಲ್ಲೇಖಿಸಲಾಗಿರುವುದಿಲ್ಲ.
How to Apply for CBDT Senior Translation Officer Recruitment 2025
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿಯ ಫಾರ್ಮ್ ಅನ್ನು ಇಲ್ಲಿ ಕ್ಲಿಕ್ ಮಾಡುವ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ.
- ನಂತರ ಅರ್ಜಿಯನ್ನು ಮುದ್ರಣ ಮಾಡಿ, ಕೇಳಲಾಗುವ ವಿವರಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಲಗತ್ತಿಸಿ.
ಹಾರ್ಡ್ ಕಾಪಿಯನ್ನು ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ಮೂಲಕ ಈ ಕೆಳಗೆ ನೀಡಿರುವ ವಿಳಾಸಕ್ಕೆ ಕಳುಹಿಸಿ.
ಆದಾಯ ತೆರಿಗೆ ನಿರ್ದೇಶನಾಲಯ (ಹೆಚ್‌ಆರ್‌ಡಿ), ಕೇಂದ್ರ ನೇರ ತೆರಿಗೆ ಮಂಡಳಿ, ಅಧಿಕೃತ ಭಾಷಾ ವಿಭಾಗ, ಕೊಠಡಿ ಸಂಖ್ಯೆ 401, ಎರಡನೇ ಮಹಡಿ, ಜವಾಹರ ಲಾಲ್ ನೆಹರು ಸ್ಟೇಡಿಯಂ, ಪ್ರಗತಿ ವಿಹಾರ್, ನವದೆಹಲಿ – 110003
ನಂತರ ಅರ್ಜಿಯ ಸಾಫ್ಟ್‌ಕಾಪಿಯನ್ನು ಸ್ಕ್ಯಾನ್ ಮಾಡಿ ಇಮೇಲ್ ವಿಳಾಸ delhi.dd.ol.hq.admin@incometax.gov.in ಗೆ ಕಳುಹಿಸಿ.
Important Direct Links:
Official Notification and Application Form PDF | Download |
Official Website | incometaxindia.gov.in |
More Updates | Karnataka Help.in |