CBSC 12 ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ಭಾರತದಾದ್ಯಂತ ಫೆಬ್ರವರಿ 15 ರಿಂದ ಏಪ್ರಿಲ್ 04 ರವರೆಗೆ ನಡೆಸಿತ್ತು. ಪ್ರಸ್ತುತ CBSC 12 ನೇ ತರಗತಿ ಫಲಿತಾಂಶ(CBSE Result 2025)ವು ಪ್ರಕಟಗೊಂಡಿದೆ.
ಈ ವರ್ಷ, ಸಿಬಿಎಸ್‌ಇ 12 ನೇ ತರಗತಿಯ ಪರೀಕ್ಷೆಯನ್ನು ಒಟ್ಟು 17 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೊಂದಾಯಿಸಿಕೊಂಡು ಪರೀಕ್ಷೆಯನ್ನು ಬರೆದಿದ್ದರು. ಪ್ರಸ್ತುತ CBSC 12 ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ, ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
CBSC 12 ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಬರೆದ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿದ್ದರು. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ಫಲಿತಾಂಶವನ್ನು ಮೇ 13 ನೇ ತಾರೀಕು ತನ್ನ ಅಧಿಕೃತ ವೆಬ್ ಸೈಟ್ https://results.cbse.nic.in/ ನಲ್ಲಿ ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಫಲಿತಾಂಶವನ್ನು ವೀಕ್ಷಿಸಬಹುದು.
How to Check CBSE 12 Result 2025
ಫಲಿತಾಂಶವನ್ನು ನೋಡುವ ವಿಧಾನ;
CBSE ಅಧಿಕೃತ ವೆಬ್‌ಸೈಟ್ https://examinationservices.nic.in/cbseresults/class_xii_jh_2025/ClassTwelfth_bn_2025.htm ಗೆ ಭೇಟಿ ನೀಡಿ.
ನಿಮ್ಮ ನೋಂದಣಿ ಸಂಖ್ಯೆ, ಶಾಲಾ ಸಂಖ್ಯೆ ಮತ್ತು ಪ್ರವೇಶ ಕಾರ್ಡ್ ಐಡಿ ಯನ್ನು ನಮೂದಿಸಿ.
ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ
ನಿಮ್ಮ CBSE 12th ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ.
ಅದನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.