WhatsApp Channel Join Now
Telegram Group Join Now

Change Mobile Number In Aadhaar Card: ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆಯನ್ನು ಚೇಂಜ್ ಈ ರೀತಿಯಾಗಿ ಮಾಡಿ!

How To Change Mobile Number In Aadhaar Card: ನಮಸ್ಕಾರ ಬಂಧುಗಳೇ, ಇಂದು ನಾವು “ಆಧಾರ್ ಕಾರ್ಡ್” ನಲ್ಲಿರುವ ಮೊಬೈಲ್ ಸಂಖ್ಯೆಯನ್ನು ಹೇಗೆ ಚೇಂಜ್ ಮಾಡುವುದು ಎಂಬುದರ ಕುರಿತು ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ. ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸದ್ದೇವೆ.

ಭಾರತ ದೇಶದಲ್ಲಿ ಆಧಾರ್ ಕಾರ್ಡ್ ಸರ್ಕಾರದ ಎಲ್ಲಾ ಯೋಜನೆಗಳು ಮತ್ತು ವಿಳಾಸದ ಪುರಾವೆ ಹೊಂದಿರುವ ಅಧಿಕೃತ ದಾಖಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಆಧಾರ್ ಕಾಡ್೯ಗೆ ಮೊಬೈಲ್ ನಂಬರ್ ನೊಂದಾಯಿಸುವುದು ಕಡ್ಡಾಯವಾಗಿದೆ. ಹಾಗಾಗಿ ಎಲ್ಲಾ ಸಾರ್ವಜನಿಕರು ಈಗಾಗಲೇ ತಮ್ಮ ಆಧಾರ್ ಕಾರ್ಡ್ ಜೊತೆಗೆ ತಮ್ಮ ದೂರವಾಣಿ ಸಂಖ್ಯೆಯನ್ನು ನೊಂದಾಯಿಸಿಕೊಂಡಿದ್ದಾರೆ ಒಂದು ವೇಳೆ ನೋಂದಾಯಿಸಿದ ದೂರವಾಣಿ ಸಂಖ್ಯೆಯು ಕಳೆದು ಹೋದರೆ ಅಥವಾ ಆಂತರಿಕ ಕಾರಣಗಳಿಂದ ದೂರವಾಣಿ ಸಂಖ್ಯೆಯನ್ನು ಬದಲಿಸಬೇಕು ಎಂದು ನೀವು ಯೋಚಿಸುತ್ತಿದ್ದರೆ ಈ ಕೆಳಗಿನ ಮಾಹಿತಿಯನ್ನು ಗಮನವಿಟ್ಟು ಓದಿರಿ.

How To Change Mobile Number In Aadhaar Card
How To Change Mobile Number In Aadhaar Card

How To Change Mobile Number In Aadhaar Card

ಆಧಾರ್ ಕಾರ್ಡ್‌ನಲ್ಲಿರುವ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವುದು ಎರಡು ರೀತಿಯಲ್ಲಿ ಸಾಧ್ಯವಿದೆ: ಆನ್‌ಲೈನ್‌ನಲ್ಲಿ ಅಥವಾ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ.

ಆನ್‌ಲೈನ್‌ ಮೂಲಕ ಮೊಬೈಲ್ ಸಂಖ್ಯೆ ಬದಲಾಯಿಸುವುದು(How to Change Mobile Number in Aadhar Card Online):

  • ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಯ ವೆಬ್‌ಸೈಟ್‌ಗೆ https://uidai.gov.in/ ಭೇಟಿ ನೀಡಿ.
  • ನನ್ನ ಆಧಾರ್” ವಿಭಾಗಕ್ಕೆ ಹೋಗಿ ಮತ್ತು “ಆಧಾರ್ ಡೇಟಾ ಅಪ್ಡೇಟ್” ಆಯ್ಕೆಯನ್ನು ಆರಿಸಿ.
  • ನಿಮ್ಮ ಆಧಾರ್ ಸಂಖ್ಯೆ ಮತ್ತು ಪಾಸ್‌ವರ್ಡ್ ಅಥವಾ ಒಟಿಪಿ (ನೀವು ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ) ಕ್ಲಿಕ್ ಮಾಡಿ.
  • ಮೊಬೈಲ್ ಸಂಖ್ಯೆ” ವಿಭಾಗಕ್ಕೆ ಹೋಗಿ ಮತ್ತು Update ಮಾಡಿ” ಕ್ಲಿಕ್ ಮಾಡಿ.
  • ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು “ನಿಯಮಗಳು ಮತ್ತು ಷರತ್ತುಗಳು” ಗೆ (Terms and Conditions) ಸಮ್ಮತಿ ಸೂಚಿಸಿ.
  • ಒಟಿಪಿ ನಮೂದಿಸಿ ಮತ್ತು “ಸಲ್ಲಿಸಿ” (Submit) ಕ್ಲಿಕ್ ಮಾಡಿ

ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಮೊಬೈಲ್ ಸಂಖ್ಯೆ ಬದಲಾಯಿಸುವುದು(How to Change Mobile Number in Aadhar Card Offline):

  • ನಿಮ್ಮ ಸಮೀಪದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ.
  • ಆಧಾರ್ ಡೇಟಾ ಮರುಪಡೆಯುವಿಕೆ (Update)” ಫಾರ್ಮ್ (Form) ನ್ನು ಪಡೆಯಿರಿ.
  • ಫಾರ್ಮ್‌ನಲ್ಲಿ ಕೇಳಿದ ವಿವರಗಳನ್ನು ಭರ್ತಿ ಮಾಡಿ, ನಿಮ್ಮ ಹಳೆಯ ಮತ್ತು ಹೊಸ ಮೊಬೈಲ್ ಸಂಖ್ಯೆಗಳನ್ನು ಸೇರಿಸಿ.
  • ಅಗತ್ಯವಿರುವ ದಾಖಲೆಗಳು ( ನಿಮ್ಮ ಆಧಾರ್ ಕಾರ್ಡ್ ಮತ್ತು ಹೊಸ ಮೊಬೈಲ್ ಸಂಖ್ಯೆಯನ್ನು ದೃಢೀಕರಿಸುವ ದಾಖಲೆ) photocopy ಗಳನ್ನು ಸಲ್ಲಿಸಿ.
  • ಅಧಿಕಾರಿಯು ಫಾರ್ಮ್‌ನ್ನು ಪರಿಶೀಲಿಸಿ ಮತ್ತು ನಿಮ್ಮ ಬಯೋಮೆಟ್ರಿಕ್ ದೃಢೀಕರಣವನ್ನು (Biometric Verification) ಪಡೆಯುತ್ತಾರೆ.
  • ಶುಲ್ಕವನ್ನು (ಒಂದು ವೇಳೆ ಇದ್ದರೆ) ಪಾವತಿ ಮಾಡಿ ಮತ್ತು ಪ್ರಕ್ರಿಯೆ ಪೂರ್ಣಗೊಳ್ಳಲು ನಿಮಗೆ ರಸೀದನ್ನು ನೀಡಲಾಗುತ್ತದೆ.

ಗಮನಿಸಿ: ನಿಮ್ಮ ಹೊಸ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲು ಸಾಧ್ಯವಾಗುವಂತಹ (Active) ಮೊಬೈಲ್ ಸಂಖ್ಯೆಯನ್ನು ಹೊಂದಿರುವುದು ಮುಖ್ಯವಾಗಿರುತ್ತೇವೆ.

ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

Important Links:

Official Websiteuidai.gov.in
MoreUpdatesKarnataka Help.in

Leave a Comment