Chikmagalur District Hospital Survey Unit Notification 2025
ಚಿಕ್ಕಮಗಳೂರು: ಜಿಲ್ಲಾ ಆಸ್ಪತ್ರೆಯ ಸರ್ವೇಕ್ಷಣಾ ಘಟಕದಲ್ಲಿ ಎನ್.ಪಿ.ಹೆಚ್.ಸಿ, ಎನ್.ಪಿ-ಎನ್.ಸಿ.ಡಿ ಹಾಗೂ ಎನ್.ಪಿ.ಪಿ.ಸಿ ಕಾರ್ಯಮದಡಿಯಲ್ಲಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.
ವಿವಿಧ ವೃಂದಗಳಲ್ಲಿ ಖಾಲಿ ಇರುವ ಕನ್ಸಲ್ಟೆಂಟ್ ಮೆಡಿಸನ್, ಮಲ್ಟಿ ರಿಯಾಬಿಲಶನ್ ವರ್ಕರ್, ಫಿಜಿಷಿಯನ್ ಹಾಗೂ ಹೃದ್ರೋಗ ತಜ್ಞರು ಸೇರಿದಂತೆ ಇತರೆ ಒಟ್ಟು 12 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ವೈದ್ಯಕೀಯ ವಲಯದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ನವೆಂಬರ್ 03ರೊಳಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
✓ ಕನ್ಸಲ್ಟೆಂಟ್ ಮೆಡಿಸನ್ (02) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಬಿ.ಬಿ.ಎಸ್, ಎಂ.ಡಿ ಪೂರ್ಣಗೊಳಿಸಿರಬೇಕು ಹಾಗೂ ಆಸ್ಪತ್ರೆಯಲ್ಲಿ ಕನಿಷ್ಠ 03 ವರ್ಷ ಕೆಲಸ ಮಾಡಿರುವ ವೃತ್ತಿ ಅನುಭವವನ್ನು ಹೊಂದಿರಬೇಕು.
✓ ಮಲ್ಟಿ ರಿಯಾಬಿಲಶನ್ ವರ್ಕರ್ (04) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ಮಂಡಳಿಯಿಂದ ದ್ವಿತೀಯ ಪಿಯುಸಿ/ಸಮಾನಂತರ ಅರ್ಹತೆ/ಮಲ್ಟಿ ರಿಹ್ಯಾಬಿಲಿಟೇಷನ್ ವರ್ಕರ್ (ಒಂದುವರೆ ವರ್ಷದ) ಸರ್ಟಿಫಿಕೇಟ್ ಕೋರ್ಸ್ (MRW)ಪೂರ್ಣಗೊಳಿಸಿರಬೇಕು. ಅಥವಾ 1/2 ವರ್ಷದ ಸಮುದಾಯ ಆಧಾರಿತ ಪುನರ್ವಸತಿ ಪದವಿ ನಂತರದ – (DCBR) / (PGDCBR) ಡಿಪ್ಲೋಮಾ ಪದವಿ ಪೂರ್ಣಗೊಳಿಸಿರಬೇಕು ಹಾಗೂ ಪುನರ್ವಸತಿ ಸಿಬ್ಬಂಧಿ /ವೃತ್ತಿನಿರತರು ಎಂದು ಭಾರತದ ಪುನರ್ವಸತಿ ಪರಿಷತ್, 1992 ನಿಯಮದ ಅಡಿಯಲ್ಲಿ ನೋಂದಣಿ ಆಗಿರಬೇಕು. ಆಸ್ಪತ್ರೆಯಲ್ಲಿ ಕನಿಷ್ಠ 02 ವರ್ಷ ಕೆಲಸ ಮಾಡಿದ ವೃತ್ತಿ ಅನುಭವ ಮತ್ತು ಬೇಸಿಕ್ ಕಂಪ್ಯೂಟರ್ ಸರ್ಟಿಫಿಕೇಟ್ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
✓ ಫಿಜಿಷಿಯನ್ (01) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಬಿ ಬಿ ಎಸ್, ಎಂ.ಡಿ ಪೂರ್ಣಗೊಳಿಸಿರಬೇಕು ಹಾಗೂ ಆಸ್ಪತ್ರೆಯಲ್ಲಿ ಕನಿಷ್ಠ 03 ವರ್ಷ ಕೆಲಸ ಮಾಡಿದ ವೃತ್ತಿ ಅನುಭವವನ್ನು ಹೊಂದಿರಬೇಕು.
✓ ಹೃದ್ರೋಗ ತಜ್ಞರು (CARDIOLOGIST) (01) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್, ಎಂ.ಡಿ ಪೂರ್ಣಗೊಳಿಸಿರಬೇಕು. ಎಂಡೋಕ್ರೈನಾಲಜಿ ಅಥವಾ ಕಾರ್ಡಿಯಾಲಜಿಯಲ್ಲಿ ವಿಶೇಷ ತರಭೇತಿ ಪಡೆದವರಿಗೆ ಆದ್ಯತೆ ನೀಡಲಾಗುವುದು ಹಾಗೂ ಆಸ್ಪತ್ರೆಯಲ್ಲಿ ಕನಿಷ್ಠ 03 ವರ್ಷ ಕೆಲಸ ಮಾಡಿಸ ಅನುಭವವನ್ನು ಹೊಂದಿರಬೇಕು.
✓ ಜಿಲ್ಲಾ ಹಣಕಾಸು ಮತ್ತು ಲಾಜಿಸ್ಟಿಕ್ ಸಲಹೆಗಾರರು (01) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯಗಳಲ್ಲಿ Inter CA/Inter ICWA/Mcom or MBA ಪೂರ್ಣಗೊಳಿಸಿರಬೇಕು ಹಾಗೂ ಸಾರ್ವಜನಿಕ ಆರೋಗ್ಯ ವಿಭಾಗದಲ್ಲಿ “ಕೆಲಸ ಮಾಡುವ ವರದಿ ಮಾಡುವ ವವ್ಯಸ್ಥೆಯಲ್ಲಿ” ಜಿಲ್ಲಾ ಮಟ್ಟದಲ್ಲಿ ಕನಿಷ್ಠ 3 ವರ್ಷಗಳ ಅನುಭವವನ್ನು ಹೊಂದಿರಬೇಕು ಹಾಗೂಆರೋಗ್ಯ ರಕ್ಷಣೆ ಹಣಕಾಸು/ರಾಷ್ಟ್ರೀಯ ಆರೋಗ್ಯ ಖಾತೆಗಳಲ್ಲಿ ಕೆಲಸ ಮಾಡಿದ ಅನುಭವ ಮತ್ತು ಬೇಸಿಕ್ ಕಂಪ್ಯೂಟರ್ ಸರ್ಟಿಫಿಕೇಟ್ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
✓ ಅಪ್ತಸಮಲೋಚಕರು (01) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಷಯದಲ್ಲಿ ಪದವಿ/ಅಪ್ತ ಸಲಹೆ /ಆರೋಗ್ಯ ಶಿಕ್ಷಣ /ಸಮೂಹ ಸಂವಹನದಲ್ಲಿ ಪದವಿ/ಡಿಪ್ಲೋಮಾ ಪದವಿ ಪೂರ್ಣಗೊಳಿಸಿರಬೇಕು ಹಾಗೂ ಆಪ್ತ ಸಲಹೆ ನೀಡುವುದರಲ್ಲಿ ಡಿಪ್ಲೋಮಾ/ಪದವಿ ಹೊಂದಿರುವವರಿಗೆ, ಆರೋಗ್ಯ ಸೇವೆ ಸೌಲಭ್ಯದಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ 02 ವರ್ಷದ ಅನುಭವ ಹೊಂದಿರುವವರಿಗೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಕೆಲಸದ ಅನುಭವದೊಂದಿಗೆ ಬೇಸಿಕ್ ಕಂಪ್ಯೂಟರ್ ಸರ್ಟಿಫಿಕೇಟ್ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
✓ ಫಿಜಿಷಿಯನ್ (02) ಹುದ್ದೆಗಳಿಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಬಿ.ಬಿ.ಎಸ್ ಪೂರ್ಣಗೊಳಿಸಿರಬೇಕು ಅಥವಾ ಮೆಡಿಸಿನ್/ ಅನಸ್ತೇಷಿಯಾ/ರೇಡಿಯೋಥೆರಪಿಯಲ್ಲಿ (ಡಿಪ್ಲೋಮಾ /ಸ್ನಾತಕೋತ್ತರ ಪದವಿಯೊಂದಿಗೆ ಆಸ್ಪತ್ರೆಯಲ್ಲಿ ಕನಿಷ್ಠ 01 ವರ್ಷ ಕೆಲಸ ಮಾಡಿದ ಅನುಭವವನ್ನು ಹೊಂದಿರಬೇಕು.
ವಯೋಮಿತಿ:
ಕನ್ಸಲ್ಟೆಂಟ್ ಮೆಡಿಸಿನ್ ಹುದ್ದೆಗೆ ಗರಿಷ್ಠ ವಯಸ್ಸಿನ ಮಿತಿ – 50 ವರ್ಷಗಳು ಉಳಿದ ಎಲ್ಲಾ ಹುದ್ದೆಗಳಿಗೂ ಗರಿಷ್ಠ ವಯಸ್ಸಿನ ಮಿತಿ – 40 ವರ್ಷಗಳು
ಆಯ್ಕೆ ವಿಧಾನ:
ರೋಸ್ಟರ್ ಪದ್ಧತಿ ದಾಖಲೆ ಪರಿಶೀಲನೆ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ ಸರ್ಕಾರದ ನಿಯಮಗಳ ಪ್ರಕಾರ ಮಾಹೆಯಾನ ವೇತನವನ್ನು ನೀಡಲಾಗುತ್ತದೆ
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
• ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಜಿಲ್ಲಾ ಸರ್ವೇಕ್ಷಣಾ ಘಟಕ ಕಚೇರಿಯಲ್ಲಿ ಪಡೆದು.
• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಲಗತ್ತಿಸಿ.
• ಅರ್ಜಿಯನ್ನು ನವೆಂಬರ್ 03ರ ಸಂಜೆ 5.30 ರೊಳಗೆ ಜಿಲ್ಲಾ ಸರ್ವೇಕ್ಷಣಾ ಘಟಕದ ಕಚೇರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ: ಕಚೇರಿಯ ಇಮೇಲ್- ncdchikmagalore@gmail.com / ದೂರವಾಣಿ ಸಂಖ್ಯೆ – 08262-298202 ಅನ್ನು ಸಂಪರ್ಕಿಸಬಹುದು.
Electrician ko job hai ky