ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ

ಯಾವುದೇ ಪರೀಕ್ಷೆ ಇಲ್ಲಾ | 10ನೇ ತರಗತಿ ಅರ್ಹತೆ

Published on:

ಭಾರತೀಯ ಅಂಚೆ ಇಲಾಖೆಯು 2026ನೇ ಸಾಲಿನ ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ವೇಳಾಪಟ್ಟಿ-Iರಡಿ ತನ್ನ ವಿವಿಧ ವೃತ್ತಗಳಿಗೆ ಬ್ರಾಂಚ್‌ ಪೋಸ್ಟ್‌ಮಾಸ್ಟರ್‌(BPM),ಅಸಿಸ್ಟಂಟ್‌ ಬ್ರಾಂಚ್‌ ಪೋಸ್ಟ್‌ಮಾಸ್ಟರ್‌(ABPM) ಮತ್ತು ಡಾಕ್‌ ಸೇವಕ್‌ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಗೊಳಿಸಿದೆ.

ಅರ್ಜಿ ಸಲ್ಲಿಸಲು ಫೆ.02ರಿಂದ ಫೆ.16ರವೆರೆಗೆ ಅವಕಾಶವಿದೆ. ಸುಮಾರು 29,000+* ಸ್ಥಾನಗಳಿಗೆ ಭರ್ತಿ ನಡೆಯುತ್ತಿದೆ. ಯಾವುದೇ ನೇಮಕಾತಿ ಪರೀಕ್ಷೆ ಇಲ್ಲದೇ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಪಡೆದಿರುವ ಅಂಕಗಳನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅಂಚೆ ಇಲಾಖೆಯ ಅಧಿಕೃತ ಜಾಲತಾಣದ ಲಿಂಕ್‌(https://app.indiapost.gov.in/gdscandidate) ಮೂಲಕ ಅರ್ಜಿ ಸಲ್ಲಿಸಬಹುದು.

*ಹುದ್ದೆಗಳ ಸಂಖ್ಯೆಯ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ.

ಪ್ರಮುಖ ದಿನಾಂಕಗಳು:

ಆನ್‌ಲೈನ್‌ OTR(ಒಂದು ಬಾರಿ ನೋಂದಣಿ)ಗೆ ಜನವರಿ 31ರಿಂದ ಫೆಬ್ರವರಿ 14ರವೆರೆಗೆ ಅವಕಾಶವಿದೆ.

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – ಫೆಬ್ರವರಿ 02
  • ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನ – ಫೆಬ್ರವರಿ 16
  • ಅರ್ಜಿ ನಮೂನೆ ತಿದ್ದುಪಡಿ ಮಾಡಲು ಫೆಬ್ರವರಿ 18 ರಿಂದ ಫೆಬ್ರವರಿ 19ರವೆರೆಗೆ ಅವಕಾಶವಿದೆ.

ಶೈಕ್ಷಣಿಕ ಅರ್ಹತೆ:

ಮಾನ್ಯತೆ ಪಡೆದಿರುವ ಮಹಾವಿದ್ಯಾಲಯದಿಂದ ಎಸ್ಸೆಸ್ಸೆಲ್ಸಿ ತೇರ್ಗಡೆ ಹೊಂದಿರಬೇಕು.

ವಯೋಮಿತಿ:

16-02-2026ರಂತೆ;

ಕನಿಷ್ಠ- 18 ವರ್ಷಗಳು, ಗರಿಷ್ಠ – 40 ವರ್ಷಗಳು

ನೇಮಕಾತಿ ನಿಯಮಗಳಿಗೆ ಅನುಸಾರ, ಪ.ಜಾತಿ/ಪ.ಪಂಗಡದವರಿಗೆ – 05 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ- 03 ವರ್ಷ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ- 10 ವರ್ಷ (ಒಬಿಸಿ-13, ಎಸ್ಸಿ/ಎಸ್ಟಿ-15 ವರ್ಷ) ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ:

  • ಎಸ್ಸೆಸ್ಸೆಲ್ಸಿಯಲ್ಲಿ ಪಡೆದ ಅಂಕಗಳ ಆಧಾರಿತ ಆಯ್ಕೆ ಪಟ್ಟಿ
  • ದಾಖಲಾತಿ ಪರಿಶೀಲನೆ

ಸಂಬಳ:

ಬ್ರಾಂಚ್‌ ಪೋಸ್ಟ್‌ ಮಾಸ್ಟರ್‌ ಹುದ್ದೆಗೆ – ವೇತನ ಶ್ರೇಣಿ ₹12,000 ರಿಂದ ₹29,380/-
ಅಸಿಸ್ಟಂಟ್‌ ಬ್ರಾಂಚ್‌ ಪೋಸ್ಟ್‌ಮಾಸ್ಟರ್‌(ABPM) ಮತ್ತು ಡಾಕ್‌ ಸೇವಕ್‌ ಹುದ್ದೆಗೆ – ವೇತನ ಶ್ರೇಣಿ ₹10,000 ರಿಂದ ₹24,470/-

ಅರ್ಜಿ ಶುಲ್ಕ:

ಎಸ್ಸಿ/ಎಸ್ಟಿ/ಪಿಡಬ್ಲ್ಯೂಡಿ/ಟ್ರಾನ್ಸ್ ಮಹಿಳಾ ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿಲ್ಲ
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ₹100

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೀಗೆ?

ಹಂತ-1 ಅಧಿಕೃತ ಜಾಲತಾಣ https://indiapost.gov.in/gdsonlineengagementಕ್ಕೆ ಭೇಟಿ

ಹಂತ-2 ಮುಖಪುಟದಲ್ಲಿ ನೀಡಲಾಗಿರುವ “Click Here to Register/Apply” ಲಿಂಕ್‌ ಬಟನ್‌ ಮೇಲೆ ಒತ್ತಿ, ನೋಂದಣಿಯಾಗಬೇಕು.

India Post Gds 2026 Notification
India Post Gds 2026 Online Form

ಹಂತ-3 ಮುಂದೆ ಲಾಗಿನ್‌ ಮಾಡಿಕೊಂಡು ಅರ್ಜಿ ನಮೂನೆ ಭರ್ತಿ ಮಾಡಿ, ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

Important Direct Links:

Official Notification PDFDownload
Online Application Form LinkApply Now
Official Websiteindiapost.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

9 thoughts on “ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ”

Leave a Comment