ಕೇಂದ್ರೀಯ ವಿದ್ಯಾಲಯ ಸಂಘಟನೆ ಮತ್ತು ನವೋದಯ ವಿದ್ಯಾಲಯ ಸಮಿತಿಯ ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಜ.10 ಹಾಗೂ 11ರಂದು ನಡೆಸಲಾದ ಶ್ರೇಣಿ-1ರ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
CBSE ಅಧಿಕೃತ ಜಾಲತಾಣದ ಲಿಂಕ್ https://cbseit.in/cbse/2026/kvjnvkey/ನ ಮೂಲಕ ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಕೀ ಉತ್ತರವನ್ನು ಪರಿಶೀಲಿಸಿಕೊಳ್ಳಬಹುದು. ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಫೆಬ್ರವರಿ 04 ರ ರಾತ್ರಿ 11:59 ರೊಳಗೆ, ಪ್ರತಿ ಪ್ರಶ್ನೆಗೆ ₹1000/-ರಂತೆ ಪಾವತಿಸಿ ಆಕ್ಷೇಪಿಸಬಹುದು.
ಕೀ ಉತ್ತರವನ್ನು ನೋಡುವ ವಿಧಾನ
• ಅಭ್ಯರ್ಥಿಗಳು CBSC ಅಧಿಕೃತ ಜಾಲತಾಣ https://cbseit.in/cbse/2026/kvjnvkey/ಕ್ಕೆ ಭೇಟಿ ನೀಡಿ.
• ರೋಲ್ ನಂಬರ್ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ಲಾಗಿನ್ ಆಗಿ.
• ನಂತರ KVS, NVS ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ ಶ್ರೇಣಿ-1 ಪರೀಕ್ಷೆ ಕೀ ಉತ್ತರ ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಬಳಿಕ ಅಭ್ಯರ್ಥಿಗಳು ಶ್ರೇಣಿ-1 ಪರೀಕ್ಷೆಯ ಕೀಲಿ ಉತ್ತರವನ್ನು ಪರಿಶೀಲಿಸಿಕೊಳ್ಳಬಹುದು.
Important Direct Links:
| KVS and NVS Tier 1 Answer Key 2026 Notice PDF | Download |
| Key Answer Link | Check Now |
| Official Website | https://kvsangathan.nic.in/en/ ———————————— https://navodaya.gov.in |
| More Updates | KarnatakaHelp.in |
Karthika56