CTET July 2024 Registration: ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (CTET) ಜುಲೈ 2024ರ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಏಪ್ರಿಲ್ 5 ರವರೆಗೆ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ವತಿಯಿಂದ ಕೇಂದ್ರೀಯ ಸರ್ಕಾರಿ ಶಾಲೆಗಳಲ್ಲಿನ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಈ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ನೋಂದಾಯಿಸಿಕೊಳ್ಳಲು ಮರೆತಿದ್ದರೆ ಏಪ್ರಿಲ್ 5 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.ಇದೀಗ ಇಲಾಖೆಯು ಫಾರ್ಮ್ ತಿದ್ದುಪಡಿ ಮಾಡಲು ವಿಂಡೋ ತೆರೆದಿದೆ ಅಭ್ಯರ್ಥಿಗಳು ನಾವು ಈ ಲೇಖನದ ಕೊನೆಯಲ್ಲಿ ನೀಡಿರುವ ಲಿಂಕ್ ಮೂಲಕ ಫ್ರಮ್ ಎಡಿಟ್ ಮಾಡಿ.
ಸರ್ಕಾರಿ ಶಾಲೆಗಳಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಶಿಕ್ಷಕರಿಗೆ ಮಾರ್ಚ್ 7 ರಂದು ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು ಅಭ್ಯರ್ಥಿಗಳಿಗೆ ಮೂರುವಾರಗಳ ಕಾಲಾವಕಾಶ ನೀಡಲಾಗಿತ್ತು. ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಜುಲೈ ತಿಂಗಳಿನಲ್ಲಿ ಪರೀಕ್ಷೆಯನ್ನು ನೀಡಲಾಗುತ್ತದೆ.
CTET ಪರೀಕ್ಷೆಯು 2 ಹಂತದ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ.
ಪತ್ರಿಕೆ 1: 1 ರಿಂದ ಐದನೇ ತರಗತಿಗೆ ಬೋಧನೆ ಮಾಡಲು ಇಚ್ಚಿಸುವ ಅಭ್ಯರ್ಥಿಗಳು ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣ ಶಾಸ್ತ್ರ , ತಮ್ಮ ಆಯ್ಕೆ ಮೊದಲನೆಯ ಭಾಷೆಯಾದ (ಹಿಂದಿ ಇಂಗ್ಲಿಷ್ ಸಂಸ್ಕೃತ ಅಥವಾ ಇತರ ಭಾಷೆಯನ್ನು) ಒಳಗೊಂಡಿರುತ್ತದೆ. ಹಾಗೂ ಎರಡನೇ ಭಾಷೆಯಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಆಯ್ಕೆ ಮಾಡಿಕೊಂಡ ಭಾಷೆಯ ಬಗ್ಗೆ ಪ್ರಶ್ನೆಗಳು ಇರುತ್ತವೆ. ಇದರ ಜೊತೆಗೆ ಗಣಿತ ಮತ್ತು ಪರಿಸರ ಅಧ್ಯಾಯನ ವಿಷಯಗಳನ್ನು ಪ್ರಮುಖವಾಗಿ ಕೇಳಲಾಗುತ್ತದೆ
ಪತ್ರಿಕೆ 2 : 6 ರಿಂದ 8 ನೇ ತರಗತಿಗಳಿಗೆ (ದ್ವಿತೀಯ ಹಂತ) ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಇಚ್ಚಿಸುವ ಅಭ್ಯರ್ಥಿಗಳಿಗೆ ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣಶಾಸ್ತ್ರ, ಭಾಷೆ I (ಹಿಂದಿ, ಇಂಗ್ಲಿಷ್, ಸಂಸ್ಕೃತ, ಅಥವಾ ಇತರ ಭಾಷೆಗಳಿಂದ ಆರಿಸಲ್ಪಟ್ಟಿದೆ), ಗಣಿತ, ಮತ್ತು ವಿಜ್ಞಾನ, ಸಮಾಜ ವಿಜ್ಞಾನ (ಇತಿಹಾಸ, ಭೂಗೋಳ, ರಾಜ್ಯಶಾಸ್ತ್ರ ಸೇರಿದಂತೆ, ಸೇರಿದಂತೆ ಪಟ್ಟಿಯಿಂದ ಆಯ್ಕೆಯಾದ ಎರಡು ವಿಷಯಗಳು) ಮತ್ತು ಅರ್ಥಶಾಸ್ತ್ರ), ಮತ್ತು ಐಚ್ಛಿಕ ಭಾಷೆಗಳು ಒಳಗೊಂಡ ಪ್ರಶ್ನೆ ಪತ್ರಿಕೆಯನ್ನು ನೀಡಲಾಗುತ್ತದೆ.
ಮುಂದೆ ಬರುವ ದಿನಗಳಲ್ಲಿ CBSE CTET 2024ರ ಪರೀಕ್ಷೆಗೆ ಸಂಬಂಧಪಟ್ಟಂತೆ ಅಧಿಕೃತ ವೆಬ್ ಸೈಟ್ ನಲ್ಲಿ ಅಡ್ಮಿಟ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಲು ದಿನಾಂಕವನ್ನು ಪ್ರಕಟಿಸಲಾಗುತ್ತದೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಬಳಸಿಕೊಂಡು ಅಡ್ಮಿಟ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದಾಗಿದೆ.
How to Apply CTET July 2024 Notification
CTET ಗೆ ಅರ್ಜಿ ಸಲ್ಲಿಸುವುದು ಹೇಗೆ ….?
CTET ಅಧಿಕೃತ ವೆಬ್‌ಸೈಟ್ ಆದ, https://ctet.nic.in/ ಲಿಂಕ್ ಮೂಲಕ ಭೇಟಿ ನೀಡಿ ಆನ್ಲೈನ್ ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
ಮೊದಲಿಗೆ ಹೊಸ ಖಾತೆಯನ್ನು ರಚಿಸಿ, ತದನಂತರ ವೈಯಕ್ತಿಕ ಫಾರಂ ತುಂಬಿ, ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಇದರ ಜೊತೆಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕು.