ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2024-25ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ವರ್ಷದ ಡಿಪಿಇಡಿ(Diploma in Physical Education) ಪರೀಕ್ಷೆಗೆ ಅರ್ಜಿ ಆಹ್ವಾನಿಸಿದ್ದು, ನೋಟಿಫಿಕೇಶನ್ ಬಿಡುಗಡೆ ಮಾಡಿದೆ.
2025 ಮತ್ತು 2026 ರ ಮೇ ಮತ್ತು ಜೂನ್ ತಿಂಗಳಲ್ಲಿ ನಡೆಯಲಿರುವ ಪ್ರಥಮ ಮತ್ತು ದ್ವಿತೀಯ ವರ್ಷದ ಡಿಪಿಇಡಿ ಪರೀಕ್ಷೆ ಸಂಬಂಧ ಎರಡು ವರ್ಷದ ಪರೀಕ್ಷೆಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಾಜ್ಯದ ಸರ್ಕಾರಿ ಡಿ.ಪಿ.ಇಡಿ ಸಂಸ್ಥೆಗಳು ಹಾಗೂ ಎನ್.ಸಿ.ಟಿ.ಇ ಯಿಂದ ಮಾನ್ಯತೆ ಪಡೆದು ಕಾರ್ಯ ನಿರ್ವಹಿಸುತ್ತಿರುವ ಡಿ.ಪಿ.ಇಡಿ ಕಾಲೇಜುಗಳಿಂದ ಪರೀಕ್ಷಾ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
2024-25ನೇ ಸಾಲಿನ ಶೈಕ್ಷಣಿಕ ಅವಧಿಯ ಪ್ರಥಮ ಮತ್ತು ದ್ವಿತೀಯ ವರ್ಷದ ಡಿ.ಪಿ.ಇಡಿ ಪರೀಕ್ಷೆಯನ್ನು ರಾಜ್ಯ ಸರ್ಕಾರಿ ಡಿಪಿಇಡಿ ಸಂಸ್ಥೆಗಳು ಮತ್ತು ಎನ್‌ಸಿಟಿಇ ಇಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದು ಓದುತ್ತಿರುವ ವಿದ್ಯಾರ್ಥಿಗಳು ಹಾಗೂ ಪುನರಾವರ್ತಿತ ಅಭ್ಯರ್ಥಿಗಳು ತೆಗೆದುಕೊಳ್ಳಬಹುದು. ಇದಕ್ಕೆ ಕಾಲೇಜಿನ ಶಾಲಾ ಮುಖ್ಯಸ್ಥರ ಕಡೆಯಿಂದ ಅರ್ಜಿ ಸಲ್ಲಿಸಲು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:
ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ದಿನಾಂಕ:16 -04-2024
ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಕೊನೆ ದಿನಾಂಕ: 24-04-2024
ಡಯಟ್‌ನಿಂದ ಅರ್ಜಿಗಳನ್ನು ಅನುಮೋದಿಸುವ ದಿನಾಂಕ: 25.04.2025 ರಿಂದ 28.04.2025
ಆನ್‌ಲೈನ್ ಮೂಲಕ ಪರೀಕ್ಷಾ ಶುಲ್ಕ ಪಾವತಿಸುವ ದಿನಾಂಕ: 25.04.2025 ರಿಂದ 29.04.2025
ನಾಮಿನಲ್ ರೋಲ್, ಶುಲ್ಕ ಪಾವತಿಸಿರುವ ಆನ್‌ಲೈನ್ ರಶೀದಿಯ (Transaction Status) ಪ್ರತಿ ಹಾಗೂ ಸಂಬಂಧಿಸಿದ ಇತರೆ ದಾಖಲೆಗಳನ್ನು ಡಯಟ್‌ಗೆ, ಸಂಸ್ಥೆಗಳು ಸಲ್ಲಿಸಲು ಕೊನೆಯ ದಿನಾಂಕ: 02-05-2025
ಪರೀಕ್ಷಾ ಶುಲ್ಕದ ವಿವರ:
ಡಿ.ಪಿ.ಇಡಿ. ಪ್ರಥಮ ವರ್ಷದ ಕೋರ್ಸ್ ಪರೀಕ್ಷೆಯನ್ನು ಮೊದಲ ಬಾರಿಗೆ ತೆಗೆದು ಕೊಳ್ಳುವ ಅಭ್ಯರ್ಥಿಗಳಿಗೆ – 1160 ರೂ.
ಡಿ.ಪಿ.ಇಡಿ. ಪ್ರಥಮ ವರ್ಷದ ಕೋರ್ಸ್‌ನ ಎಲ್ಲಾ 1,2,3 ಭಾಗಗಳ ಪರೀಕ್ಷೆಯನ್ನು ತೆಗೆದುಕೊಳ್ಳುವ ಪುನರಾವರ್ತಿತ ಅಭ್ಯರ್ಥಿಗಳಿಗೆ – 1215 ರೂ.
ಡಿ.ಪಿ.ಇಡಿ. ದ್ವಿತೀಯ ವರ್ಷದ ಕೋರ್ಸ್ ಪರೀಕ್ಷೆಯನ್ನು ಮೊದಲ ಬಾರಿಗೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ – 1200 ರೂ.
ಡಿ.ಪಿ.ಇಡಿ. ದ್ವಿತೀಯ ವರ್ಷದ ಕೋರ್ಸ್‌ನ ಎಲ್ಲಾ 1,2,3 ಭಾಗಗಳ ಪರೀಕ್ಷೆಯನ್ನು ತೆಗೆದುಕೊಳ್ಳುವ ಪುನರಾವರ್ತಿತ ಅಭ್ಯರ್ಥಿಗಳಿಗೆ – 1255 ರೂ.
ಭಾಗ-1ರ ತಾತ್ವಿಕ ಪರೀಕ್ಷೆಯನ್ನು ಮಾತ್ರ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ (ತಲಾ ಒಂದು ವಿಷಯಕ್ಕೆ) – 300 ರೂ.
ಭಾಗ-1ರ ಆಂತರಿಕ ಪರೀಕ್ಷೆಯನ್ನು ಮಾತ್ರ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ – 300 ರೂ.
ಭಾಗ-2ರ ಸ್ಕಿಲ್ಸ್ ಪರೀಕ್ಷೆಯನ್ನು ಮಾತ್ರ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ – 300 ರೂ.
ಭಾಗ-3ರ ಟೀಚಿಂಗ್ ಮತ್ತು ಅಫಿಶಿಯೇಟಿಂಗ್ ಪರೀಕ್ಷೆಯನ್ನು ಮಾತ್ರ ತೆಗೆದುಕೊಳ್ಳಲಿರುವ ಅಭ್ಯರ್ಥಿಗಳಿಗೆ – 300 ರೂ.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಭ್ಯರ್ಥಿಗಳು ಸಹ ಪರೀಕ್ಷಾಶುಲ್ಕ, ಪಾವತಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಮರುಪಾವತಿ ಪಡೆಯುವುದು.
*ಶುಲ್ಕ ಪಾವತಿಸುವ ವಿಧಾನ ಆನ್ ಲೈನ್ ಮೂಲಕ ಮಾತ್ರ ಇರುತ್ತದೆ.
How to Apply for D.P.Ed Examination 2025
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವೆಬ್‌ಸೈಟ್ https://kseab.karnataka.gov.in ಗೆ ಭೇಟಿ ನೀಡಿ .
ಮುಖಪುಟದಲ್ಲಿ Other Exams portal → D.P.Ed Examination→ Institute Login→ ಯೂಸರ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ನೋಂದಾಯಿಸಿ.
ನಂತರ ವಿದ್ಯಾರ್ಥಿಗಳ ಮಾಹಿತಿ ಅಪ್‌ಲೋಡ್ ಮಾಡಿ.
ಆನ್ಲೈನ್ ಮೂಲಕ ಅರ್ಜಿ ಪಾವತಿ ಮಾಡಿ ಅರ್ಜಿ ಸಲ್ಲಿಸಬೇಕು.
ಸೂಚನೆ:
ಅರ್ಜಿಗಳನ್ನು ಸಲ್ಲಿಸಲು ಸಂಸ್ಥೆಯ ಪ್ರಾಂಶುಪಾಲರು/ ಮುಖ್ಯಸ್ಥರು ಪಾಲಿಸಬೇಕಾದ ಸೂಚನೆಗಳ ವಿವರವಾದ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯ ಪಿಡಿಎಫ್ ಅನ್ನು ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡುವ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ:
ಡಿ.ಪಿ.ಇಡಿ ಶಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ವಾಗ್‌ಮೋರೆ ಹನುಮಂತ ಅವರ ಮೊಬೈಲ್ ಸಂಖ್ಯೆ 8310548093 ಅನ್ನು ಸಂಪರ್ಕಿಸಬಹುದು.