DCET 2025: ಪ್ರವೇಶಾತಿಯ ಮುಂದಿನ ಚಟುವಟಿಕೆಗಳ ಕುರಿತು ಮಾಹಿತಿ ಮತ್ತು ವೇಳಾಪಟ್ಟಿ ಪ್ರಕಟ

By Shwetha Chidambar

Published On:

IST

ಫಾಲೋ ಮಾಡಿ

DCET 2025 First Round Option Entry 2025 Schedule
DCET 2025 First Round Option Entry 2025 Schedule Details

ಡಿಸಿಇಟಿ-2025 ಪ್ರವೇಶಾತಿ ಸಂಬಂಧ ಡಿಸಿಇಟಿ ಸಾಲಿನ ಮೊದಲನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆಯ ನಂತರದ ಚಟುವಟಿಕೆಗಳ ಕುರಿತು ಮಾಹಿತಿ ಮತ್ತು ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬಿಡುಗಡೆ ಮಾಡಿದೆ.

ಡಿಪ್ಲೊಮಾ ಪದವೀಧರ ಅಭ್ಯರ್ಥಿಗಳಿಗೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ 2ನೇ ವರ್ಷದ ಅಥವಾ 3ನೇ ಸೆಮಿಸ್ಟರ್‌ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶಕ್ಕೆ ಹಾಗೂ ಮೊದಲನೇ ವರ್ಷದ ಆರ್ಕಿಟೆಕ್ಟರ್ ಕೋರ್ಸು ಪ್ರವೇಶಾತಿ ಸಂಬಂಧ ಮೊದಲನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶದ ನಂತರ ಮುಂದಿನ ಚಟುವಟಿಕೆಗಳ ಕುರಿತು ಮಾಹಿತಿ ಮತ್ತು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೆ ಕೊನೆಯವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

ಡಿಸಿಇಟಿ – 2025 ಪ್ರವೇಶಾತಿ ಸಂಬಂಧ ಅಭ್ಯರ್ಥಿಗಳಿಗೆ CHOICE ಅನ್ನು ಆಯ್ಕೆ ಮಾಡಿಕೊಳ್ಳಲು ಸೂಚನೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಡಿಸಿಇಟಿ-2025 ಪ್ರವೇಶಾತಿಗೆ ಸಂಬಂಧಿಸಿದಂತೆ 2ನೇ ವರ್ಷದ ಅಥವಾ 3ನೇ ಸೆಮಿಸ್ಟರ್‌ನ ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಾತಿಗೆ ಮೊದಲನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಜು.16, 2025 ರಂದು ಪ್ರಕಟಿಸಲಾಗಿತ್ತು, ಮೊದಲನೇ ಸುತ್ತಿನ ಸೀಟು ಹಂಚಿಕೆಯ ನಂತರ, ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಪ್ರಾಧಿಕಾರವು ವಿವಿಧ ನಾಲ್ಕು CHOICE ಗಳನ್ನು ಕೆ ಇ ಎ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ ನಲ್ಲಿ ನೀಡಲಾಗಿದ್ದು. ನೀಡಿರುವ ಪ್ರತಿ CHOICE ಗಳ ವಿವರಣೆಯನ್ನು ಓದಿ ಸರಿಯಾಗಿ ಅರ್ಥೈಸಿಕೊಂಡು, ತಮ್ಮ ಪೋಷಕರೊಡನೆ ತೀರ್ಮಾನಿಸಿ ಅಭ್ಯರ್ಥಿಯು ತನಗೆ ಸೂಕ್ತವೆನಿಸಿದ CHOICE ಅನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದೆ.

ಮೊದಲನೇ ಸುತ್ತಿನ CHOICES ಗಳ ವಿವರಣೆ

ನನಗೆ ಮೊದಲನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟು ಸಂಪೂರ್ಣವಾಗಿ ಇಷ್ಟವಾಗಿದ್ದು ನಾನು ಕಾಲೇಜಿಗೆ ಸೇರುತ್ತೇನೆ. ನನಗೆ ಯಾವುದೇ ಬದಲಾವಣೆ ಅವಶ್ಯಕತೆ ಇರುವುದಿಲ್ಲ. ಮುಂದಿನ ಸುತ್ತುಗಳಲ್ಲಿ ಭಾಗವಹಿಸಲೂ ಸಹ ನನಗೆ ಇಷ್ಟವಿರುವುದಿಲ್ಲ, ಆದ್ದರಿಂದ ನನ್ನನ್ನು ಮುಂದಿನ ಯಾವುದೇ ಸುತ್ತುಗಳಲ್ಲಿ ಸೀಟು ಹಂಚಿಕೆಗೆ ಪರಿಗಣಿಸಬಾರದು. ನಾನು ಮೊದಲನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಶುಲ್ಕವನ್ನು ಪಾವತಿಸಿ, ನಿಗದಿತ ದಿನಾಂಕದೊಳಗೆ ಪ್ರವೇಶ ಪಡೆಯುತ್ತೇನೆ ಎಂದು ಧೃಡೀಕರಿಸುತ್ತೇನೆ.

ಎರಡನೇ ಸುತ್ತಿನ CHOICES ಗಳ ವಿವರಣೆ

ನನಗೆ ಮೊದಲನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟು ಇಷ್ಟವಾಗಿರುತ್ತದೆ, ಆದರೆ ನಾನು ಇನ್ನೂ ಉತ್ತಮವಾದ ಸೀಟನ್ನು ಪಡೆಯಲು ಮುಂದಿನ ಎರಡನೇ ಸುತ್ತಿನಲ್ಲಿ ಭಾಗವಹಿಸುತ್ತೇನೆ. ಮೊದಲನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಪ್ರಾಧಿಕಾರದ ವೆಬ್‌ಸೈಟಿನಿಂದ ಚಲನ್ ಡೌನ್‌ ಲೋಡ್ ಮಾಡಿ ಶುಲ್ಕವನ್ನು ಪಾವತಿಸುತ್ತೇನೆ.

ಮೂರನೇ ಸುತ್ತಿನ CHOICES ಗಳ ವಿವರಣೆ

ಅಭ್ಯರ್ಥಿಯು ತನಗೆ ಮೊದಲ ಸುತ್ತಿನಲ್ಲಿ ದೊರಕಿರುವ ಸೀಟು ತೃಪ್ತಿಕರವಾಗಿಲ್ಲ. ನಾನು ಮೊದಲನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟನ್ನು ರದ್ದುಪಡಿಸಿಕೊಂಡು ಮುಂದಿನ ಎರಡನೇ ಸುತ್ತಿನಲ್ಲಿ ಭಾಗವಹಿಸುತ್ತೇನೆ ಎಂದು ಧೃಡೀಕರಿಸುತ್ತೇನೆ.

ನಾಲ್ಕನೇ ಸುತ್ತಿನ CHOICES ಗಳ ವಿವರಣೆ

ಅಭ್ಯರ್ಥಿಯು ತಮಗೆ ಮೊದಲ ಸುತ್ತಿನಲ್ಲಿ ಹಂಚಿಕೆಯಾಗಿರುವ ಸೀಟು ತೃಪ್ತಿಕರವಾಗಿಲ್ಲ, ನನಗೆ ಸೀಟು ಬೇಡ ಹಾಗೂ ನನಗೆ ಮುಂದಿನ ಸುತ್ತಿನಲ್ಲೂ ಸಹ ಯಾವುದೂ ಸೀಟು ತೆಗೆದುಕೊಳ್ಳಲು ಇಷ್ಟವಿಲ್ಲ.

ವಿಶೇಷ ಸೂಚನೆ:

  • ನಾಲ್ಕು CHOICE ಗಳಲ್ಲಿ ಯಾವುದೇ CHOICE ಅನ್ನು ಆಯ್ಕೆ ಮಾಡದಿರುವ ಅಭ್ಯರ್ಥಿಗಳು ಮುಂದಿನ ಸುತ್ತುಗಳಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆಯುವುದಿಲ್ಲ.
  • ಮೊದಲನೇ ಸುತ್ತಿನಲ್ಲಿ ಯಾವುದೇ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳು ಈಗಾಗಲೇ OPTIONS ಗಳನ್ನು ನಮೂದಿಸಿ ಆದರೆ ಯಾವುದೇ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳು CHOICE ಗಳನ್ನು ನೀಡುವ ಅವಶ್ಯಕತೆ ಇರುವುದಿಲ್ಲ. ಮುಂದಿನ ಸುತ್ತಿನ ಸೀಟು ಹಂಚಿಕೆಗೆ ಭಾಗವಹಿಸಬಹುದು.

DCET-2025 ಪ್ರವೇಶಾತಿ ಚಟುವಟಿಕೆಗಳ ಕುರಿತು ಮಾಹಿತಿ ಮತ್ತು ವೇಳಾಪಟ್ಟಿ ಡೌನ್ಲೋಡ್ ಮಾಡುವ ವಿಧಾನ

  • ಕೆಇಎ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
  • ಇತ್ತೀಚಿನ ಪ್ರಕಟಣೆಗಳು ವಿಭಾಗದಲ್ಲಿ 17-07 DCET-2025 ಮೊದಲ ಸುತ್ತಿನ ಆಯ್ಕೆ ನಮೂದು / ಪ್ರವೇಶ ಆದೇಶ ಡೌನ್‌ಲೋಡ್ 17/07/2025 ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಡಿಸಿಇಟಿ-2025ನೇ ಪ್ರವೇಶಾತಿಯ ಮುಂದಿನ ಚಟುವಟಿಕೆಗಳ ಕುರಿತು ನೀಡಲಾಗಿರುವ ವಿವರವಾದ ಮಾಹಿತಿ ಮತ್ತು ವೇಳಾಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ತಪ್ಪದೇ ಎಚ್ಚರಿಕೆಯಿಂದ ಓದಿ.

Important Direct Links:

DCET 2025 First Round Option Entry 2025 Schedule PDFDownload
Official WebsiteKea.Kar.Nic.In
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment