DCET 3rd and Final Round Document Verification 2025
ಡಿಸಿಇಟಿ-2025ರ ಪ್ರವೇಶಕ್ಕೆ ಸಂಬಂಧಿಸಿದಂತೆ ಮೂರನೇ ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆಗೆ ನಡೆಸಲಾಗುವ ದಾಖಲಾತಿ ಪರಿಶೀಲನೆಯ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಂಗಳವಾರ(ಜು.5) ಬಿಡುಗಡೆ ಮಾಡಿದೆ.
ಡಿಪ್ಲೋಮಾ ಪದವೀಧರ ಅಭ್ಯರ್ಥಿಗಳಿಗೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ 2ನೇ ವರ್ಷದ ಅಥವಾ 3ನೇ ಸೆಮಿಸ್ಟರ್ ಇಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಾತಿಗಾಗಿ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆಯ ದಿನಾಂಕವನ್ನು ಕೆಇಎ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ ನಲ್ಲಿ ಬಿಡುಗಡೆ ಮಾಡಿದೆ.
ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೆ ಕೊನೆಯವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಡಿಸಿಇಟಿ-2025ರ ಪ್ರವೇಶಕ್ಕೆ ಸಂಬಂಧ ಮೂರನೇ ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಇದುವರೆಗೂ ದಾಖಲೆಗಳನ್ನು ಪರಿಶೀಲಿಸಿಕೊಳ್ಳದಿರುವ ಅಭ್ಯರ್ಥಿಗಳಿಗೆ ತಮ್ಮ ಮೂಲ ದಾಖಲಾತಿ ಹಾಗೂ ಒಂದು ಸೆಟ್ ಮೂಲ ದಾಖಲೆಗಳ ಫೋಟೋ (ಜೆರಾಕ್ಸ್) ಪ್ರತಿಗಳೊಂದಿಗೆ ಆಗಸ್ಟ್ 12 ರಂದು ಬೆಳಗ್ಗೆ 10.30 ರಿಂದ ಸಂಜೆ 4 ಗಂಟೆಯವರೆಗೆ ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ನಡೆಸಲಾಗುವ ದಾಖಲಾತಿ ಪರಿಶೀಲನೆಗೆ ಹಾಜರಾಗಲು ಸೂಚಿಸಿದ್ದು, ಇದುವರೆಗೂ ದಾಖಲೆಗಳನ್ನು ಪರಿಶೀಲಿಸಿಕೊಳ್ಳದ ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಯಲ್ಲಿ ಭಾಗವಹಿಸಬಹುದು.
ದಾಖಲೆಗಳ ಪರಿಶೀಲನೆಯ ಬಳಿಕ ಇಚ್ಛೆಗಳನ್ನು ನಮೂದಿಸಲು ಅವಕಾಶ
ಡಿಪ್ಲೋಮಾ ಪದವೀಧರ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಪ್ರಕ್ರಿಯೆಯ ನಂತರ ಅರ್ಹರಾಗುವಂತಹ ವಿದ್ಯಾರ್ಥಿಗಳಿಗೆ ಮಾತ್ರ, ಲಭ್ಯವಿರುವ ಸೀಟುಗಳಿಗೆ ತಮ್ಮ ಇಚ್ಛೆಗಳನ್ನು ನಮೂದಿಸುವುದಕ್ಕಾಗಿ ಪರಿಗಣಿಸಲಾಗುತ್ತದೆ. ದಾಖಲಾತಿ ಪರಿಶೀಲನೆಗೆ ಸಲ್ಲಿಸಬೇಕಾದ (ಮೂಲ ದಾಖಲೆಗಳ ವಿವರಗಳನ್ನು ಡಿಸಿಇಟಿ – 2025ರ ಇ-ಟ್ರೋಚರ್ನಲ್ಲಿ) ಪ್ರಕಟಿಸಲಾಗಿದೆ.
ವಿಶೇಷ ಸೂಚನೆ:
ವಿದ್ಯಾರ್ಥಿಗಳು ದಾಖಲೆ ಪರಿಶೀಲನೆಯ ದಿನದಂದು ಯಾವುದೇ ದಾಖಲೆ/ಪ್ರಮಾಣಪತ್ರ/ಅಂಕಪಟ್ಟಿಯನ್ನು ಹಾಜರುಪಡಿಸಲು ವಿಫಲವಾದ ಪಕ್ಷದಲ್ಲಿ, ಅಂತಹ ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲನೆ ಮಾಡುವುದಿಲ್ಲ ಮತ್ತು ಅವರ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಿಲ್ಲ. ನಂತರ ಅವರು ತಮ್ಮ ಇಚ್ಛೆ (Option) ಯನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಅವರನ್ನು ಪರಿಗಣಿಸುವುದಿಲ್ಲ.
Important Direct Links:
DCET 3rd and Final Round Document Verification 2025 Notice PDF