ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ(NMDC)ದಲ್ಲಿ ವಿವಿಧ ಉದ್ಯೋಗಾವಕಾಶ

ನೇರ ಸಂದರ್ಶನದ ಮೂಲಕ ಆಯ್ಕೆ

Published on:

ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆ.17 ಕೊನೆಯ ದಿನವಾಗಿದೆ.

ಶಿಫ್ಟ್ ಮ್ಯಾನೇಜರ್, ವೆಲ್ಫೇರ್ ಆಫೀಸರ್, ಅಸಿಸ್ಟೆಂಟ್ ಶಿಫ್ಟ್ ಇಂಚಾರ್ಜ್, ಅಸಿಸ್ಟೆಂಟ್ ಕೊಲಿಯರಿ ಎಂಜಿನಿಯರ್, ಅಸಿಸ್ಟೆಂಟ್ ಸೇಫ್ಟಿ ಆಫೀಸರ್ ಹಾಗೂ ಓವರ್‌ಮನ್ ಸೇರಿದಂತೆ ಒಟ್ಟು 22 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಅರ್ಹ ಮತ್ತು ಆಸಕ್ತ ಅರ್ಜಿದಾರರು ಎನ್‌ಎಂಡಿಸಿಯ ಅಧಿಕೃತ ವೆಬ್ಸೈಟ್ ಲಿಂಕ್‌ https://jobapply.in/NMDC2025Tokisud/ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಫೆಬ್ರವರಿ 03, 2026
  • ಅರ್ಜಿ ಸಲ್ಲಿಸಲು‌ ಕೊನೆಯ ದಿನಾಂಕ – ಫೆಬ್ರವರಿ 17, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಫೆಬ್ರವರಿ 17, 2026

ಹುದ್ದೆಗಳ ವಿವರ:

ಶಿಫ್ಟ್ ಮ್ಯಾನೇಜರ್ – 02 ಹುದ್ದೆಗಳು
ವೆಲ್ಫೇರ್ ಆಫೀಸರ್ – 01 ಹುದ್ದೆ
ಅಸಿಸ್ಟೆಂಟ್ ಶಿಫ್ಟ್ ಇಂಚಾರ್ಜ್ – 03 ಹುದ್ದೆಗಳು
ಅಸಿಸ್ಟೆಂಟ್ ಕೊಲಿಯರಿ ಎಂಜಿನಿಯರ್ – 02 ಹುದ್ದೆಗಳು
ಅಸಿಸ್ಟೆಂಟ್ ಸೇಫ್ಟಿ ಆಫೀಸರ್ – 01 ಹುದ್ದೆ
ಓವರ್‌ಮನ್ – 13 ಹುದ್ದೆಗಳು

ಒಟ್ಟು 22 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

NMDC ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ/ಎಂಜಿನಿಯರಿಂಗ್‌ ಪದವಿ/ಎಂಬಿಎ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:

ಗರಿಷ್ಠ ವಯಸ್ಸಿನ ಮಿತಿ – 50 ವರ್ಷಗಳು

ವಯೋಮಿತಿ ಸಡಿಲಿಕೆ; ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಮಾಜಿ ಸೈನಿಕ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – ಸರ್ಕಾರಿ ಮಾರ್ಗಸೂಚಿಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಆಯ್ಕೆ ವಿಧಾನ:

  • ನೇರ ಸಂದರ್ಶನ
  • ದಾಖಲೆ ಪರಿಶೀಲನೆ

ಸಂಬಳ:

ಶಿಫ್ಟ್ ಮ್ಯಾನೇಜರ್ ಹುದ್ದೆಗೆ- ₹1,00,000
ವೆಲ್ಫೇರ್ ಆಫೀಸರ್, ಅಸಿಸ್ಟೆಂಟ್ ಶಿಫ್ಟ್ ಇಂಚಾರ್ಜ್, ಅಸಿಸ್ಟೆಂಟ್ ಕೊಲಿಯರಿ ಎಂಜಿನಿಯರ್ ಹಾಗೂ ಅಸಿಸ್ಟೆಂಟ್ ಸೇಫ್ಟಿ ಆಫೀಸರ್ ಹುದ್ದೆಗಳಿಗೆ- ₹80,000
ಓವರ್‌ಮನ್ – ₹60,000

ಅರ್ಜಿ ಶುಲ್ಕ:

ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – ₹500
ಎಸ್ ಸಿ, ಎಸ್ ಟಿ, ಪಿಡಬ್ಲ್ಯೂಬಿಡಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ‌ ಸಲ್ಲಿಸುವ ವಿಧಾನ

• ಅಭ್ಯರ್ಥಿಗಳು NMDC ಅಧಿಕೃತ ವೆಬ್ಸೈಟ್ https://jobapply.in/NMDC2025Tokisud/ ಗೆ ಭೇಟಿ ನೀಡಿ.

• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಲಾಗಿನ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

Nmdc Limited Various Posts Notification 2026
Nmdc Online Form

• ಬಳಿಕ ನೀವು ಅರ್ಜಿ ಸಲ್ಲಿಸಬಯಸುವ ಹುದ್ದೆಯನ್ನು ಆಯ್ಕೆ ಮಾಡಿ, ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.

• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಭವಿಷ್ಯದ ಉಲ್ಲೇಖಕ್ಕಾಗಿ ಡೌನ್ಲೋಡ್ ಮಾಡಿ ಮುದ್ರಿಸಿ.

Important Direct Links:

Official Notification PDFDownload
Online Application PDFApply Now
Official Websitewww.nmdc.co.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

6 thoughts on “ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ(NMDC)ದಲ್ಲಿ ವಿವಿಧ ಉದ್ಯೋಗಾವಕಾಶ”

Leave a Comment