RRB NTPC(Graduate): CBT-1ರ ವೇಳಾಪಟ್ಟಿ ಪ್ರಕಟ

Published on:

ರೈಲ್ವೆ ನೇಮಕಾತಿ ಮಂಡಳಿಯು ಸಿಇಎನ್ 06/2025ರಡಿ ಅಧಿಸೂಚಿಸಿದ ತಾಂತ್ರಿಕೇತರ ಜನಪ್ರಿಯ ವರ್ಗಗಳ ಪದವಿ ಹಂತದ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿಯನ್ನು ಫೆ.13ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.

ಒಟ್ಟು 5810 ಸ್ಥಾನಗಳ ಭರ್ತಿಗಾಗಿ ಮೊದಲ ಹಂತದ ಸಿಬಿಟಿ ಪರೀಕ್ಷೆಯು ಮಾರ್ಚ್ 16 ರಿಂದ 27ರವರೆಗೆ ಜರುಗಲಿದೆ. ತಾತ್ಕಾಲಿಕ ವೇಳಾಪಟ್ಟಿಯನ್ನು ಆರ್‌ಆರ್‌ಬಿಯ ಆಯಾ ಪ್ರಾದೇಶಿಕ ಜಾಲತಾಣಗಳಲ್ಲಿ(https://indianrailways.gov.in/railwayboard/view_section.jsp?lang=0&id=0,7,1281) ಪರಿಶೀಲಿಸಬಹುದು. ಪರೀಕ್ಷಾ ದಿನಾಂಕಕ್ಕಿಂತ 4 ದಿನಗಳ ಮೊದಲು ಅಭ್ಯರ್ಥಿಗಳು ತಮ್ಮ ನೊಂದಣಿ ಸಂಖ್ಯೆ ಹಾಗೂ ಲಾಗಿನ್ ಐಡಿ ರುಜುವಾತುಗಳನ್ನು ಬಳಸಿ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ವೇಳಾಪಟ್ಟಿ ಡೌನ್ಲೋಡ್ ಮಾಡುವ ವಿಧಾನ:

• ಮೊದಲಿಗೆ ಅಭ್ಯರ್ಥಿಗಳು ಆರ್.ಆರ್.ಬಿ ಅಧಿಕೃತ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281ಕ್ಕೆ ಭೇಟಿ ನೀಡಿ.

• ನಂತರ ನಿಮ್ಮ ಸಂಬಂಧಿತ ಅಥವಾ ನೀವು ಅರ್ಜಿ ಸಲ್ಲಿಸಿದ ಆರ್.ಆರ್.ಬಿ ಅಧಿಕೃತ ಜಾಲತಾಣವನ್ನು ಆಯ್ಕೆ ಮಾಡಿ.

• ಬಳಿಕ ಇತ್ತೀಚಿನ ನವೀಕರಣಗಳು ವಿಭಾಗದಲ್ಲಿ ನೀಡಲಾಗಿರುವ “CEN-06/2025 (NTPC – ಪದವಿ) ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT-I) ತಾತ್ಕಾಲಿಕ ವೇಳಾಪಟ್ಟಿಯ ಕುರಿತು ಸೂಚನೆ.” ಲಿಂಕ್ ಮೇಲೆ ಕ್ಲಿಕ್ ಮಾಡಿ.

• ನಂತರ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಪರೀಕ್ಷಾ ವೇಳಾಪಟ್ಟಿ ಹಾಗೂ ಇತರೆ ಸೂಚನೆಗಳನ್ನು ಪರಿಶೀಲಿಸಬಹುದು.

ಅಭ್ಯರ್ಥಿಗಳ ಗಮನಕ್ಕೆ:

ಅಭ್ಯರ್ಥಿಗಳ ಆಧಾರ್ ಲಿಂಕ್ ಮಾಡಿದ ಬಯೋಮೆಟ್ರಿಕ್ ದೃಢೀಕರಣವನ್ನು ಪರೀಕ್ಷಾ ಹಾಲ್‌ಗೆ ಪ್ರವೇಶಿಸುವ ಮೊದಲು ಪರೀಕ್ಷಾ ಕೇಂದ್ರದಲ್ಲಿ ಮಾಡಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ತಮ್ಮ ಮೂಲ ಆಧಾರ್ ಕಾರ್ಡ್ ಅಥವಾ ಇ-ಪರಿಶೀಲಿಸಿದ ಆಧಾರ್‌ನ ಮುದ್ರಣವನ್ನು ಪರೀಕ್ಷೆ ಕೇಂದ್ರಕ್ಕೆ ತರಬೇಕಾಗುತ್ತದೆ.

Important Direct Links:

Schedule PDFDownload
Official WebsitesRRBs
More UpdatesKarnatakahelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

1 thought on “RRB NTPC(Graduate): CBT-1ರ ವೇಳಾಪಟ್ಟಿ ಪ್ರಕಟ”

Leave a Comment