NPCILನಲ್ಲಿ ಕಾರ್ಯನಿರ್ವಾಹಕ ತರಬೇತಿದಾರರ ಭರ್ತಿ

ಸಿಬಿಟಿ ಪರೀಕ್ಷೆಯ ಮೂಲಕ ಆಯ್ಕೆ

Published on:

ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿರುವ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(NPCIL)ನ ಕೈಗಾರಿಕಾ ಮತ್ತು ಅಗ್ನಿ ಸುರಕ್ಷತೆ(I&FS) ಹಾಗೂ ಭೌತಶಾಸ್ತ್ರ ವಿಭಾಗಗಳಿಗೆ ಕಾರ್ಯನಿರ್ವಾಹಕ ತರಬೇತಿದಾರರ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಗೊಂಡಿದೆ.

ಬಿಇ/ಬಿ.ಟೆಕ್‌/ಬಿಎಸ್ಸಿ/ಎಂ.ಟೆಕ್‌/ಎಂಇ/ಎಂಎಸ್ಸಿ ಪದವೀಧರರು ಅರ್ಜಿ ಸಲ್ಲಿಸಬಹುದು. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅರ್ಜಿದಾರರು ಎನ್‌ಪಿಸಿಐಎಲ್‌ನ ಅಧಿಕೃತ ಜಾಲತಾಣ https://www.npcilcareers.co.in/MainSiten/DefaultInfo.aspxಕ್ಕೆ ಭೇಟಿ ನೀಡಿ. ಮಾ.04 ರೊಳಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಫೆಬ್ರವರಿ 11, 2026
  • ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ – ಮಾರ್ಚ್ 04, 2026

ಶೈಕ್ಷಣಿಕ ಅರ್ಹತೆ:

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ಅಧಿಕೃತ ಅಧಿಸೂಚನೆಯ ಪ್ರಕಾರ,

ಕಾರ್ಯನಿರ್ವಾಹಕ ತರಬೇತಿದಾರ(ಕೈಗಾರಿಕಾ ಮತ್ತು ಅಗ್ನಿ ಸುರಕ್ಷತೆ) ಹುದ್ದೆಗೆ – ಬಿಇ/ಬಿ.ಟೆಕ್‌/ಬಿಎಸ್ಸಿ(ಇಂಜಿನಿಯರಿಂಗ್‌) ಅಥವಾ ಎಂ.ಟೆಕ್‌/ಎಂಇ ಅರ್ಹತೆ.
ಕಾರ್ಯನಿರ್ವಾಹಕ ತರಬೇತಿದಾರ (ಭೌತಶಾಸ್ತ್ರ ವಿಭಾಗ)ಹುದ್ದೆಗೆ – ಭೌತಶಾಸ್ತ್ರ ವಿಷಯದಲ್ಲಿ ಎಂಎಸ್ಸಿ ತೇರ್ಗಡೆ.

ವಯಸ್ಸಿನ ಮಿತಿ:

04-03-2026 ರಂತೆ;

ಗರಿಷ್ಠ ವಯಸ್ಸಿನ ಮಿತಿ – 26 ವರ್ಷಗಳು

ಆಯ್ಕೆ ಪ್ರಕ್ರಿಯೆ:

ಹಂತ I – ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
ಹಂತ II – ವೈಯಕ್ತಿಕ ಸಂದರ್ಶನ

ಸ್ಟೈಪೆಂಡ್‌:

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹74,000ರವರೆಗೆ ಸ್ಟೈಪೆಂಡ್‌ ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಸಾಮಾನ್ಯ/ಇಡಬ್ಲ್ಯೂಎಸ್‌/ಒಬಿಸಿ ಪುರುಷ ಅಭ್ಯರ್ಥಿಗಳಿಗೆ -₹500
ಎಸ್ಸಿ/ಎಸ್ಟಿ/ಮಹಿಳೆ/ಮಾಜಿ ಸೈನಿಕ/DODPKIA ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ ಹೇಗೆ.?

• NPCIL ಅಧಿಕೃತ ಜಾಲತಾಣ https://www.npcilcareers.co.in/MainSiten/DefaultInfo.aspx ಕ್ಕೆ ಭೇಟಿ ನೀಡಿ.

• ನಂತರ “Recruitment of Executive trainee 2026- I&FS and Physics disciplines” ಮುಂದೆ “Apply Online / View Details” ಶೀರ್ಷಿಕೆಯಡಿ ನೀಡಲಾದ “Click here to view details & Apply Online” ಮೇಲೆ ಒತ್ತಿ, ಮುಂದೆ ನೋಂದಣಿ ಅಥವಾ ಲಾಗಿನ್‌ ಮಾಡಿಕೊಂಡು ಅರ್ಜಿ ನಮೂನೆ ತೆರೆಯಿರಿ.

Npcil Et (I&Amp;Fs And Physics Disciplines) 2026 Application Form
Npcil Et (I&Amp;Fs And Physics Disciplines) 2026 Online Application

• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.

• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.

Important Direct Links:

Official Notification PDFDownload
Official Short Notice PDFDownload
Online Application Form LinkApply Now
Official Websitehttp://www.npcil.nic.in/
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment