WhatsApp Channel Join Now
Telegram Group Join Now

DHEW Yadgir Recruitment 2024: ಜಿಲ್ಲಾ ಸಂಯೋಜಕರು ಹುದ್ದೆಗೆ ಅರ್ಜಿ ಸಲ್ಲಿಕೆ ಪ್ರಾರಂಭ

ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಖಾಲಿಯಿರುವ ಜಿಲ್ಲಾ ಸಂಯೋಜಕರು ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಾದಗಿರಿಯಲ್ಲಿ ಖಾಲಿ ಇರುವ ಈ ಹುದ್ದೆ(DHEW Yadgir Recruitment 2024 )ಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಲೇಖನವನ್ನು ಕೊನೆವರೆಗೆ ಓದಿ.

Shortview of DHEW Yadgir Notification 2024

Organization Name – Women & Child Development
Post Name – PMMVY-District Coordinator
Total Vacancy – 01
Application Process – Offline
Job Location – Yadgir

ಪ್ರಮುಖ ದಿನಾಂಕಗಳು:

ಅರ್ಜಿ ಸಲಿಸಲು ಪ್ರಾರಂಭ ದಿನಾಂಕ –23 ಸೆಪ್ಟೆಂಬರ್ 2024
ಅರ್ಜಿ ಸಲಿಸಲು ಕೊನೆಯ ದಿನಾಂಕ –10 ಅಕ್ಟೋಬರ್ 2024

ವಿದ್ಯಾರ್ಹತೆ:

ಈ ನೇಮಕಾತಿಗಾಗಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ Graduate in Social Sciences/Life Sciences /Nutrition/Medicine /Health Management /Social Work/Rural Management ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ವಯೋಮಿತಿ:

ಜಿಲ್ಲಾ ಸಂಯೋಜಕರು ಹುದ್ದೆಗೆ ಅರ್ಜಿ ಸಲ್ಲಿಸಲು ಸರ್ಕಾರದ ನಿಯಮಗಳ ಪ್ರಕಾರ ನಿಗದಿತ ವಯೋಮಿತಿ ಹೊಂದಿರಬೇಕು.

ಆಯ್ಕೆ ವಿಧಾನ:

  • ವಿದ್ಯಾರ್ಹತೆ
  • ಗಣಕಯಂತ್ರ ಪರೀಕ್ಷೆ
  • ಲಿಖಿತ ಪರೀಕ್ಷೆ
  • ಸಂದರ್ಶನ

ಅರ್ಜಿ ಶುಲ್ಕ:

ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳು:

  • ನಿಗದಿತ ನಮೂನೆಯಲ್ಲಿ ಅರ್ಜಿ
  • ಎಸ್.ಎಸ್.ಎಲ್.ಸಿ ಅಂಕ ಪಟ್ಟಿ
  • ಹುದ್ದೆಗೆ ನಿಗದಿಪಡಿಸಿದ ಹಾಗೂ ವಿದ್ಯಾರ್ಹತೆಯ ಅಂಕಪಟ್ಟಿಗಳು
  • ಈಗಾಗಲೇ ಕೆಲಸ ಮಾಡಿರುವ ಅನುಭವ ಪ್ರಮಾಣ ಪತ್ರಗಳು.
  • ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ(ಕನಿಷ್ಠ 06 ತಿಂಗಳು)

How to Apply DHEW Yadgir District Coordinator Recruitment 2024

ಅರ್ಜಿ ಸಲ್ಲಿಸಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ನಾವು ಕೆಳಗೆ ನೀಡಿರುವ ಲಿಂಕ್ ಮೂಲಕ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು, ಅರ್ಜಿ ಫಾರಂ ಭರ್ತಿ ಮಾಡಿ ನಿಗದಿತ ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮೂಲಕ ಅಥವಾ ಖುದ್ದಾಗಿ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲುಸಬಹುದು.

ಉಪ ನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯಾದಗಿರಿ ಕೋಣೆ ಸಂಖ್ಯೆ : ಸಿ-17, ಒಂದನೇ ಮಹಡಿ, ಜಿಲ್ಲಾ ಆಡಳಿತ ಭವನ ಸಂಕೀರ್ಣ, ಚಿತ್ತಾಪೂರ ರಸ್ತೆ, ಯಾದಗಿರಿ-585202

ಫೋನ್ ಸಂಖ್ಯೆ : 08473-253739

Important Direct Links:

Official Notification & Application Form PDFDownload
Official Websiteyadgir.nic.in
More UpdatesKarnataka Help.in

Leave a Comment