ಬ್ಯಾಂಕ್ ಆಫ್ ಬರೋಡ(BOB)ದಲ್ಲಿ ಕ್ರೀಡಾಕೋಟಾದಡಿ ಕ್ಲರ್ಕ್‌ಗಳ ಭರ್ತಿ

Published on:

ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನಲ್ಲಿ ಕ್ರೀಡಾ ಕೋಟಾದಡಿ 30 ಗ್ರಾಹಕ ಸೇವಾ ಸಹಾಯಕ(ಕ್ಲಿರಿಕಲ್ ಕೇಡರ್‌) ಹುದ್ದೆಗಳ ನೇಮಕಾತಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ಕ್ರಿಕೆಟ್(09), ಕಬಡ್ಡಿ(11), ಟೇಬಲ್ ಟೆನ್ನಿಸ್(02) ಹಾಗೂ ಫುಟ್ಬಾಲ್(08) ಕ್ರೀಡಾ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದ್ದು, ಅರ್ಜಿ ಸಲ್ಲಿಸಲು ಮೇ 12ರವರೆಗೆ ಕಾಲಾವಕಾಶ ನೀಡಲಾಗಿದೆ. ಬ್ಯಾಂಕಿಂಗ್ ವಲಯದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗಾಗಿ ಬಿಒಬಿ ಅಧಿಕೃತ ವೆಬ್‌ಸೈಟ್ ಲಿಂಕ್‌https://bankappsweb.bankofbaroda.bank.in/BOBRECRUITMENT_APR_CSA2609538/ ಗೆ ಭೇಟಿ ನೀಡಿ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಏಪ್ರಿಲ್ 22, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮೇ 12, 2026
  • ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ – ಮೇ 12, 2026

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ/ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು ಹಾಗೂ ಸಂಬಂಧಿತ ಕ್ರೀಡಾಕೂಟ ಸ್ಪರ್ಧೆಯಲ್ಲಿ ಪದಕ ವಿಜೇತರಾಗಿರಬೇಕು/ಪ್ರತಿನಿಧಿಸಿರಬೇಕು. (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ಕ್ರೀಡಾ ಅರ್ಹತೆಯನ್ನು ಹೊಂದಿರಬೇಕು)

ವಯೋಮಿತಿ:

01-04-2026 ರಂತೆ;

ಕನಿಷ್ಠ ವಯಸ್ಸಿನ ಮಿತಿ 20 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ 28 ವರ್ಷಗಳು

ಸಾಮಾನ್ಯ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ 05 ವರ್ಷಗಳು, ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ 10 ವರ್ಷಗಳು, ಇತರೆ ಹಿಂದುಳಿದ ವರ್ಗಗಳ(ಎನ್.ಸಿ.ಎಲ್) ಅಭ್ಯರ್ಥಿಗಳಿಗೆ 08 ವರ್ಷಗಳವೆರೆಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ವಿಧಾನ:

  • ಶಾರ್ಟ್‌ಲಿಸ್ಟ್
  • ಸ್ಕ್ರೀನಿಂಗ್
  • ಫೀಲ್ಡ್ ಟ್ರಯಲ್ಸ್

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹33,020 ರಿಂದ ₹64,480ವರೆಗೆ ವೇತನ ಹಾಗೂ ಬ್ಯಾಂಕಿನ ನಿಯಮಗಳ ಅನುಸಾರ ಭತ್ಯೆಗಳು ಮತ್ತು ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ.

ಅರ್ಜಿ ಶುಲ್ಕ:

ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ₹850
ಪ.ಜಾತಿ, ಪ.ಪಂಗಡ, ಮಾಜಿ ಸೈನಿಕ, ಡಿಇಎಸ್‌ಎಂ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ₹175

ಅರ್ಜಿ ಸಲ್ಲಿಸುವ ವಿಧಾನ

• ಅಭ್ಯರ್ಥಿಗಳು BOB ಅಧಿಕೃತ ವೆಬ್ ಸೈಟ್https://bankappsweb.bankofbaroda.bank.in/BOBRECRUITMENT_APR_CSA2609538/ ಗೆ ಭೇಟಿ ನೀಡಿ.

• ಬಳಿಕ ಅರ್ಜಿ ಸಲ್ಲಿಸಲು ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಅರ್ಜಿದಾರರಾಗಿದ್ದಲ್ಲಿ ನೋಂದಾಯಿಸಿ.

• ಮುಂದಿನ ಹಂತದಲ್ಲಿ ಅರ್ಜಿಯಲ್ಲಿ ಕೇಳಲಾಗುವ ಮೂಲ ಮಾಹಿತಿ, ಶೈಕ್ಷಣಿಕ ವಿವರ, ಭಾವಚಿತ್ರ, ಸಹಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.

• ಕೊನೆದಾಗಿ ಅರ್ಜಿಯನ್ನು ಮತ್ತೊಮ್ಮೆ ಪರೀಶೀಲನೆ ಮಾಡಿ ಸಲ್ಲಿಸಿ.

• ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.

Important Direct Links:

Official Notification PDFDownload
Online Application Form LinkApply Now
Official Websitebankofbaroda.bank.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment