ಚಾಮರಾಜನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಜಿಲ್ಲಾ ಕಾರ್ಯಕ್ರಮ ನಿರ್ವಹಣ ಘಟಕದ ವತಿಯಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲೆಯ ಸಂಚಾರಿ ಆರೋಗ್ಯ ಘಟಕಗಳಲ್ಲಿ ಎಂ.ಬಿ.ಬಿ.ಎಸ್ ವೈದ್ಯರು (04), ಶುಶ್ರೂಷಕ (04) ಹಾಗೂ ಪ್ರಯೋಗಾಲಯ ತಂತ್ರಜ್ಞರು /ವ್ಯವಸ್ಥಾಪಕರು (0-4) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆ.16 ರಂದು ನಡೆಸಲಾಗುವ ನೇರ ಸಂದರ್ಶನದಲ್ಲಿ ಭಾಗವಹಿಸಿ ಎಂದು ಸದಸ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
✓ ಎಂ.ಬಿ.ಬಿ.ಎಸ್ ವೈದ್ಯ ಹುದ್ದೆಗೆ – ಅಭ್ಯರ್ಥಿಗಳು ಎಂ.ಬಿ.ಬಿ.ಎಸ್ ಉತ್ತೀರ್ಣರಾಗಿರಬೇಕು ಹಾಗೂ Internship ಪೂರೈಸಿರಬೇಕು, ಕಡ್ಡಾಯವಾಗಿ ಕೆ.ಎಂ.ಸಿ ನೊಂದಣಿಯಾಗಿರಬೇಕು ಹಾಗೂ ಸಂಬಂಧಪಟ್ಟ ವಿಶ್ವವಿದ್ಯಾಲಯದಿಂದ Convocation/Degree Certificate ಹೊಂದಿರಬೇಕು.
✓ ಶುಶ್ರೂಷಕ ಹುದ್ದೆಗೆ – ಜಿ.ಎನ್.ಎಂ ನರ್ಸಿಂಗ್/ಬಿ.ಎಸ್ಸಿ ನರ್ಸಿಂಗ್ ಕಡ್ಡಾಯವಾಗಿ ನರ್ಸಿಂಗ್ ಕೌನ್ಸಿಲ್ನಲ್ಲಿ ನೊಂದಣಿಯಾಗಿರಬೇಕು.
✓ ಪ್ರಯೋಗಾಲಯ ತಂತ್ರಜ್ಞರು /ವ್ಯವಸ್ಥಾಪಕರು ಹುದ್ದೆಗೆ – ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯು ನಡೆಸುವ ಪ್ರಯೋಗ ಶಾಲಾ ತಂತ್ರತೆಯಲ್ಲಿ ಮೂರು ವರ್ಷದ ಡಿಪ್ಲೋಮಾ ಹೊಂದಿರಬೇಕು.
ಅಥವಾ
ದ್ವಿತೀಯ ಪಿ.ಯು.ಸಿ.ಯಲ್ಲಿ ವಿಜ್ಞಾನ ವಿಷಯದಲ್ಲಿ ಉತ್ತೀರ್ಣ ಮತ್ತು ಕರ್ನಾಟಕ ರಾಜ್ಯ ಆರೆ ವೈದ್ಯಕೀಯ ಮಂಡಳಿಯು ನಡೆಸುವ ಪ್ರಯೋಗ ಶಾಲಾ ತಂತ್ರಜ್ಞತೆಯಲ್ಲಿ ಎರಡು ವರ್ಷದ ಡಿಪ್ಲೊಮಾ ಹೊಂದಿರಬೇಕು. ಜೊತೆಗೆ ಪ್ರಯೋಗ ಶಾಲಾ ತಂತ್ರಜ್ಞರು ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯ ನೋಂದಣಿ ಹೊಂದಿರಬೇಕು.
ಅಭ್ಯರ್ಥಿಗಳ ಗಮನಕ್ಕೆ: ಮೇಲ್ಕಂಡ ಎಲ್ಲಾ ಹುದ್ದೆಗಳಿಗೂ ಕನಿಷ್ಠ 2 ವರ್ಷಗಳ ಸೇವೆ ಸಲ್ಲಿಸಿರುವ ಅನುಭವವನ್ನು ಹೊಂದಿರಬೇಕು ಹಾಗೂ ಎಲ್ಲಾ ಹುದ್ದೆಗಳಿಗೆ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಕಂಪ್ಯೂಟರ್ ಸರ್ಟಿಫಿಕೇಟ್ ಕಡ್ಡಾಯವಾಗಿ ಲಗತ್ತಿಸಬೇಕು.
ವಯೋಮಿತಿ:
ಎಂ.ಬಿ.ಬಿ.ಎಸ್ ವೈದ್ಯ ಹುದ್ದೆಗೆ – ಗರಿಷ್ಠ ಮಿತಿ 65 ವರ್ಷಗಳು
ಶುಶ್ರೂಷಕ ಹುದ್ದೆಗೆ – ಗರಿಷ್ಠ ಮಿತಿ 45 ವರ್ಷಗಳು
ಪ್ರಯೋಗಾಲಯ ತಂತ್ರಜ್ಞರು /ವ್ಯವಸ್ಥಾಪಕರು ಹುದ್ದೆಗೆ – ಗರಿಷ್ಠ ಮಿತಿ 45 ವರ್ಷಗಳು
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾರ್ಮಿಕ ಇಲಾಖೆಯು ನಿಗಧಿಪಡಿಸಿರುವ ವಲಯವಾರು ಕನಿಷ್ಠ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಅಭ್ಯರ್ಥಿಗಳು ಎಸ್.ಬಿ.ಐ ಬ್ಯಾಂಕ್ನಿಂದ ಡಿಡಿಯನ್ನು ಪಡೆದು Karnataka State Health & HWF Unit RCH, SBI MADHAVANAGAR, Bangalore ಹೆಸರಲ್ಲಿ 50ರೂ.ಗಳ Registration Fee ಡಿಡಿಯನ್ನು ಸಲ್ಲಿಸಿ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ನೇರ ಸಂದರ್ಶನಕ್ಕೆ ಕೊಂಡೊಯ್ಯಬೇಕಾದ ಅಗತ್ಯ ದಾಖಲೆಗಳು
ವಿದ್ಯಾರ್ಹತೆಯ ಪ್ರಮಾಣ ಪತ್ರ
ಎಲ್ಲಾ ವರ್ಷಗಳ ಸೆಮಿಸ್ಟರ್ ಅಂಕಪಟ್ಟಿ
ರಾಜ್ಯ ಬೋರ್ಡ್ ನಿಂದ ಪಡೆದಿರುವ ನೋಂದಣೆ ಪ್ರಮಾಣ ಪತ್ರ
ಎಸ್ಎಸ್ಎಲ್ ಸಿ ಅಂಕಪಟ್ಟಿ,
ಗುರುತಿನ ಚೀಟಿ (ಚುನಾವಣೆ ಗುರುತಿನ ಚೀಟಿ / ಆಧಾರ್ ಕಾರ್ಡ್)
ಚಾಲ್ತಿ ಯಲ್ಲಿರುವ ಜಾತಿ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.
ಹುದ್ದೆಗೆ ಸಂಬಂಧಿಸಿದ ಎಲ್ಲಾ ಪೂರಕ ಚಾಲ್ತಿಯಲ್ಲಿರುವ ದಾಖಲೆಗಳು
ಅಭ್ಯರ್ಥಿಗಳು ಸಂದರ್ಶನದ ಸಮಯದಲ್ಲಿ ಮೇಲಿನ ಎಲ್ಲ ಮೂಲ ದಾಖಲಾತಿಗಳು ಹಾಗೂ ಅವುಗಳ ಪೆರಾಕ್ಸ್ ಪ್ರತಿಗಳನ್ನು ಸ್ವಯಂ ದೃಢೀಕರಿಸಿ ಸಂದರ್ಶನ ಸಮಯದಲ್ಲಿ ಕಡ್ಡಾಯವಾಗಿ ಹಾಜರುಪಡಿಸಬೇಕು.
ನೇರ ಸಂದರ್ಶನ ನಡೆಯುವ ಸ್ಥಳ ಹಾಗೂ ದಿನಾಂಕ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 16 ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಈ ಕೆಳಗಿನ ವಿಳಾಸದಲ್ಲಿ ನಡೆಸಲಾಗುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. (ಅರ್ಜಿಗಳನ್ನು ಬೆಳಗ್ಗೆ 10-00 ಗಂಟೆಯಿಂದ ಮಧ್ಯಾಹ್ನ 1-00 ಗಂಟೆಯವರೆಗೆ ಮಾತ್ರ ನೀಡಲಾಗುವುದು, ನಂತರ ಬಂದ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ನೀಡಲಾಗುವುದಿಲ್ಲ)
ವಿಳಾಸ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಜಿಲ್ಲಾ ಕಾರ್ಯಕ್ರಮ ನಿರ್ವಹಣ ಘಟಕ ಚಾಮರಾಜನಗರ ಜಿಲ್ಲೆ, ಚಾಮರಾಜನಗರ 308, ಮೂರನೇ ಮಹಡಿ, ಜಿಲ್ಲಾಡಳಿತ ಭವನ, ಶ್ರೀ ಬಿ.ರಾಚಯ್ಯ ಜೋಡಿ ರಸ್ತೆ, ಚಾಮರಾಜನಗರ ಜಿಲ್ಲೆ.