ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿ, ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ವಿವಿಧ ವೃಂದಗಳಲ್ಲಿ ಖಾಲಿ ಇರುವ (ಅರವಳಿಕೆ ತಜ್ಞರು, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು, ಒಟಿ ಟೆಕ್ನಿಷಿಯನ್, ಪ್ರಯೋಗಶಾಲಾ ತಂತ್ರಜ್ಞರು ಹಾಗೂ ಶುಶ್ರೂಷಕ ಅಧಿಕಾರಿಗಳು) ಸೇರಿದಂತೆ ಇತರೆ ಒಟ್ಟು 67 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಒಪ್ಪಂದದ ಆಧಾರ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅರ್ಜಿದಾರರು ಜನವರಿ 27ರೊಳಗೆ ಮೈಸೂರು ಜಿಲ್ಲಾ ಅಧಿಕೃತ ಜಾಲತಾಣ https://mysore.nic.in/en/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು.
ಅರವಳಿಕೆ ತಜ್ಞರು – 02 ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು – 01 ಮಕ್ಕಳ ತಜ್ಞರು – 02 ಒ.ಟಿ ಟೆಕ್ನಿಷಿಯನ್ – 01 ತಾಲೂಕು ಆಶಾ ಮೆಂಟರ್ – 01 ಪ್ರಯೋಗಶಾಲಾ ತಂತ್ರಜ್ಞರು – 02 ಶುಶೂಷಕ ಅಧಿಕಾರಿಗಳು – 12 ಶುಶೂಷಕ ಅಧಿಕಾರಿಗಳು – 04 ದಂತ ಶಸ್ತ್ರಚಿಕಿತ್ಸಕರು – 06 ಫಿಜಿಷಿಯನ್ – 01 ವೈದ್ಯಾಧಿಕಾರಿಗಳು – 02 ಆಪ್ತ ಸಮಾಲೋಚಕರು – 01 ಶುಶ್ರೂಷಕ ಅಧಿಕಾರಿ – 01 ಶುಶ್ರೂಷಕ ಅಧಿಕಾರಿ – 01 ಬ್ಲಾಕ್ ಎಪಿಡಮಲಾಜಿಸ್ಟ್ – 02 ವೈದ್ಯಾಧಿಕಾರಿಗಳು – 02 ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು – 04 ಆರೋಗ್ಯ ನೀರಿಕ್ಷಣಾಧಿಕಾರಿಗಳು – 02 ಶುಕ್ರೂಷಕ ಅಧಿಕಾರಿ – 04 ವೈದ್ಯಾಧಿಕಾರಿಗಳು – 04 ಆರೋಗ್ಯ ನೀರಿಕ್ಷಣಾಧಿಕಾರಿಗಳು – 04 ಶುಶ್ರೂಷಕ ಅಧಿಕಾರಿ – 05 ಹಿರಿಯ ವೈದ್ಯಾಧಿಕಾರಿಗಳು (ಡಿ.ಆರ್.ಟಿ.ಬಿ ಕೇಂದ್ರ) – 01 ವೈದ್ಯಾಧಿಕಾರಿಗಳು – 01 ಕ್ಷಯ ಆರೋಗ್ಯ ಸಂದರ್ಶಕ (ಟಿ.ಬಿ.ಹೆಚ್.ವಿ) – 01
ಒಟ್ಟು – 67
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ (ವಿಜ್ಞಾನ), ಸಂಬಂಧಿತ ವಿಭಾಗದಲ್ಲಿ ಡಿಪ್ಲೋಮಾ, ಪದವಿ/ಸ್ನಾತಕೋತ್ತರ ಪದವಿ/ಬಿ.ಎಸ್ಸಿ ಇನ್ ನರ್ಸಿಂಗ್, ಡಿ.ಎ/ಡಿ.ಎನ್.ಬಿ/ಎಂ.ಡಿ, ಡಿ.ಜಿ.ಒ/ಡಿ.ಸಿ.ಹೆಚ್, ಎಂ.ಬಿ.ಬಿ.ಎಸ್/ ಬಿ.ಡಿ.ಎಸ್ ಪದವಿಯನ್ನು ಪೂರ್ಣಗೊಳಿಸಬೇಕು.
• ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳು ತಪ್ಪದೆ ಸಂಪೂರ್ಣ ಅಧಿಸೂಚನೆಯನ್ನು ಓದಬೇಕು.
ವಯೋಮಿತಿ:
ಗರಿಷ್ಠ ವಯೋಮಿತಿ – 40-65 ವರ್ಷಗಳು (ಹುದ್ದೆಗಳಿಗೆ ಅನುಗುಣವಾಗಿ)
ಆಯ್ಕೆ ವಿಧಾನ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿಯಮಗಳ ಅನುಸಾರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ (ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ) ಮಾನದಂಡಗಳ ಪ್ರಕಾರ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ
• ಮೈಸೂರು ಜಿಲ್ಲಾ ಅಧಿಕೃತ ಜಾಲತಾಣ https://mysore.nic.in/en/ ಕ್ಕೆ ಭೇಟಿ ನೀಡಿ.
• “NHM ಅಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಬಳಿಕ “ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ” ಆಯ್ಕೆಯ ಮೇಲೆ ಟ್ಯಾಪ್ ಮಾಡಿ.
• ನಂತರ ಅರ್ಜಿಯಲ್ಲಿ ಕೇಳಲಾಗುವ ಅರ್ಜಿದಾರರ ಮೂಲ ಮಾಹಿತಿಗಳು, ವೈಯಕ್ತಿಕ ವಿವರಗಳು ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು.
• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.