ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2025-26ನೇ ಸಾಲಿಗೆ ಪರಿಶಿಷ್ಟ ಜಾತಿಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಅಪ್ರೆಂಟಿಸ್‌ಶಿಪ್ ತರಬೇತಿ ನೀಡಲಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ರಾಜ್ಯದ ಎಲ್ಲಾ ಜಿಲ್ಲಾ ಕಚೇರಿಗಳಲ್ಲಿ ಮತ್ತು ಹುಬ್ಬಳ್ಳಿಯ ರಾಜ್ಯ ಸಮಾಚಾರ ಕೇಂದ್ರದಲ್ಲಿ ಕ್ಷೇತ್ರ ಪ್ರಚಾರ ಹಾಗೂ ಮಾಧ್ಯಮ ಕ್ಷೇತ್ರದ ಬಗ್ಗೆ ಒಂದು ವರ್ಷ ಅವಧಿಯವರೆಗೆ ತರಬೇತಿ ನೀಡಲಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಒಟ್ಟು 68 ಪದವೀಧರ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಸದರಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು ಆಯಾ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 26, 2025 (ಆಯಾ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಗಳು ಬದಲಾಗಬಹುದು)
- ಅಪ್ರೆಂಟಿಸ್ ತರಬೇತಿ ಪ್ರಾರಂಭದ ದಿನಾಂಕ – ಜನವರಿ 01, 2026
ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ವಿವರ:
ಬೆಂಗಳೂರು ನಗರ – 03 ಹುದ್ದೆಗಳು
ಬೆಂಗಳೂರು (ಗ್ರಾ) – 02 ಹುದ್ದೆಗಳು
ಚಿಕ್ಕಬಳ್ಳಾಪುರ – 02 ಹುದ್ದೆಗಳು
ಚಿತ್ರದುರ್ಗ – 02 ಹುದ್ದೆಗಳು
ದಾವಣಗೆರೆ – 02 ಹುದ್ದೆಗಳು
ಕೋಲಾರ – 02 ಹುದ್ದೆಗಳು
ರಾಮನಗರ – 02 ಹುದ್ದೆಗಳು
ಶಿವಮೊಗ್ಗ – 02 ಹುದ್ದೆಗಳು
ತುಮಕೂರು – 02 ಹುದ್ದೆಗಳು
ಮೈಸೂರು – 03 ಹುದ್ದೆಗಳು
ಚಾಮರಾಜನಗರ – 02 ಹುದ್ದೆಗಳು
ಚಿಕ್ಕಮಗಳೂರು – 02 ಹುದ್ದೆಗಳು
ಕೊಡಗು – 02 ಹುದ್ದೆಗಳು
ದಕ್ಷಿಣಕನ್ನಡ – 02 ಹುದ್ದೆಗಳು
ಹಾಸನ – 02 ಹುದ್ದೆಗಳು
ಮಂಡ್ಯ – 02 ಹುದ್ದೆಗಳು
ಉಡುಪಿ – 02 ಹುದ್ದೆಗಳು
ಕಲಬುರಗಿ – 03 ಹುದ್ದೆಗಳು
ಬಳ್ಳಾರಿ – 02 ಹುದ್ದೆಗಳು
ವಿಜಯನಗರ – 02 ಹುದ್ದೆಗಳು
ಬೀದರ್ – 02 ಹುದ್ದೆಗಳು
ಕೊಪ್ಪಳ – 02 ಹುದ್ದೆಗಳು
ರಾಯಚೂರು – 02 ಹುದ್ದೆಗಳು
ಯಾದಗಿರಿ – 02 ಹುದ್ದೆಗಳು
ಬೆಳಗಾವಿ – 03 ಹುದ್ದೆಗಳು
ಬಿಜಾಪುರ – 02 ಹುದ್ದೆಗಳು
ಬಾಗಲಕೋಟೆ – 02 ಹುದ್ದೆಗಳು
ಧಾರವಾಡ – 02 ಹುದ್ದೆಗಳು
ಹುಬ್ಬಳ್ಳಿ – 02 ಹುದ್ದೆಗಳು
ಗದಗ – 02 ಹುದ್ದೆಗಳು
ಹಾವೇರಿ – 02 ಹುದ್ದೆಗಳು
ಉತ್ತರ ಕನ್ನಡ – 02 ಹುದ್ದೆಗಳು
ಒಟ್ಟು 68 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ, ಕನ್ನಡ ಭಾಷೆ ಬಳಕೆ ಬಗ್ಗೆ ಪ್ರಬುದ್ಧತೆ ಇರಬೇಕು ಹಾಗೂ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ವಯೋಮಿತಿ:
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು 35 ವರ್ಷ ಮೀರಿರಬಾರದು.
ಆಯ್ಕೆ ಪ್ರಕ್ರಿಯೆ:
ಮೆರಿಟ್ ಪಟ್ಟಿ
ಸಂದರ್ಶನ
ದಾಖಲೆ ಪರಿಶೀಲನೆ
ಶಿಷ್ಯವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹15,000 ತರಬೇತಿ ಭತ್ಯೆ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
• ಸದರಿ ಅಪ್ರೆಂಟಿಸ್ ಹುದ್ದೆಗಳ ಅರ್ಹತಾಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅರ್ಜಿದಾರರು ನಿಮ್ಮ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಭೇಟಿ ನೀಡಿ.
• ಅಪ್ರೆಂಟಿಸ್ ತರಬೇತಿಯ ಅರ್ಜಿ ನಮೂನೆಯನ್ನು ಕೇಳಿ ಪಡೆದು.
• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ನಮೂದಿಸಿ. ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
• ಮಾನ್ಯವಾದ ಇ-ಮೇಲ್ ಐಡಿ, ಮೊಬೈಲ್ ಸಂಖ್ಯೆ ಹಾಗೂ ನಿಮ್ಮ ವಿಳಾಸವನ್ನು ನಮೂದಿಸಿ ಅರ್ಜಿ ಸಲ್ಲಿಸಬಹುದು.
• ಅಭ್ಯರ್ಥಿಗಳ ಆಯ್ಕೆಗಾಗಿ ನಡೆಸಲಾಗುವ ಸಂದರ್ಶನದ ದಿನಾಂಕ ಹಾಗೂ ಸಮಯವನ್ನು ಮುಂದಿನ ದಿನಗಳಲ್ಲಿ ಇಲಾಖೆಯು ವಿದ್ಯಾರ್ಥಿಗಳಿಗೆ ತಿಳಿಸುತ್ತದೆ.
Important Direct Links:
| Official Website | dipr.karnataka.gov.in |
| More Updates | KarnatakaHelp.in |