ಡಾ.ಎಪಿಜೆ ಅಬ್ದುಲ್ ಕಲಾಂ ಕ್ಷಿಪಣಿ ಸಂಕೀರ್ಣದ ಪ್ರಮುಖ ಪ್ರಯೋಗಾಲಯವಾದ ಸಂಶೋಧನಾ ಕೇಂದ್ರ ಇಮಾರತ್ (ಆರ್ಸಿಐ)ನಲ್ಲಿ 2025-26ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆಯಡಿ 195 ಅಪ್ರೆಂಟಿಸ್ಗಳ ನೇಮಕಾತಿಗಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಧಿಸೂಚನೆ ಹೊರಡಿಸಿದೆ.
ಒಂದು ವರ್ಷದ ಅವಧಿಗೆ ಪದವೀಧರ, ತಂತ್ರಜ್ಞ ಹಾಗೂ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಯುವ ಮತ್ತು ಪ್ರತಿಭಾನ್ವಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸದರಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಸಲ್ಲಿಸಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು DRDO ಅಧಿಕೃತ ವೆಬ್ ಸೈಟ್ https://www.drdo.gov.in/drdo/ನ ಮೂಲಕ ಅ.28ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಸೆಪ್ಟೆಂಬರ್ 27, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 28, 2025
ಶೈಕ್ಷಣಿಕ ಅರ್ಹತೆ:
✓ ಪದವೀಧರ ಅಪ್ರೆಂಟಿಸ್ ಹುದ್ದೆಗಳಿಗೆ – ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ (ಇಸಿಇ, ಇಇಇ, ಸಿಎಸ್ಇ, ಮೆಕ್ಯಾನಿಕಲ್, ಕೆಮಿಕಲ್) ವಿಷಯಗಳಲ್ಲಿ ಬಿ.ಇ/ಬಿ.ಟೆಕ್ ಪೂರ್ಣಗೊಳಿಸಬೇಕು.
✓ ತಂತ್ರಜ್ಞ ಅಪ್ರೆಂಟಿಸ್ ಹುದ್ದೆಗಳಿಗೆ – ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ (ಇಸಿಇ, ಇಇಇ, ಸಿಎಸ್ಇ, ಮೆಕ್ಯಾನಿಕಲ್, ಕೆಮಿಕಲ್) ವಿಷಯಗಳಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.
✓ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ – ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ (ಫಿಟ್ಟರ್, ವೆಲ್ಡರ್, ಟರ್ನರ್, ಮೆಷಿನಿಸ್ಟ್, ಮೆಕ್ಯಾನಿಕ್-ಡೀಸೆಲ್, ಡ್ರಾಟ್ಸ್ಮನ್ (ಮೆಕ್ಯಾನಿಕಲ್), ಎಲೆಕ್ಟ್ರಾನಿಕ್-ಮೆಕ್ಯಾನಿಕ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಷಿಯನ್, ಲೈಬ್ರರಿ ಅಸಿಸ್ಟೆಂಟ್ ಮತ್ತು ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ (COPA) ವಿಷಯಗಳಲ್ಲಿ ಐಟಿಐ ಉತ್ತೀರ್ಣರಾಗಿರಬೇಕು.
• ಅಭ್ಯರ್ಥಿಗಳು (2021, 2022, 2023 2024 ಮತ್ತು 2025ರಲ್ಲಿ ಪದವಿ, ಡಿಪ್ಲೊಮಾ ಮತ್ತು ಐಟಿಐ ಟ್ರೇಡ್ ಅಪ್ರೆಂಟಿಸ್ಗಳು ಶೇ.70ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದವರು) ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಯೋಮಿತಿ:
01-09-2025 ರಂತೆ;
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಅರ್ಹ ಅಭ್ಯರ್ಥಿಗಳ ಶಾರ್ಟ್ಲಿಸ್ಟ್
ಸಂದರ್ಶನ
ದಾಖಲೆ ಪರಿಶೀಲನೆ
ಸ್ಟೈಫಂಡ್:
ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ನಿಗದಿತ ಸ್ಟೈಫಂಡ್ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ, ಓಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – ಉಲ್ಲೇಖಿಸಲಾಗಿರುವುದಿಲ್ಲ.
ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – ಉಲ್ಲೇಖಿಸಲಾಗಿರುವುದಿಲ್ಲ.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಗಳು https://drdo.gov.inನಲ್ಲಿ ಲಭ್ಯವಿರುವ ವಿವರವಾದ ಜಾಹೀರಾತಿನಲ್ಲಿ ಉಲ್ಲೇಖಿಸಲಾದ ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು.
ಬಿ.ಇ/ಬಿ.ಟೆಕ್/ಡಿಪ್ಲೊಮಾ ಅಭ್ಯರ್ಥಿಗಳು https://nats.education.gov.in ಪೋರ್ಟಲ್ಗೆ ಲಾಗಿನ್ ಆಗಿ ಸಂಶೋಧನಾ ಕೇಂದ್ರ ಇಮಾರತ್ ದಾಖಲಾತಿ ಐಡಿ: STLRAC000010 ಅನ್ನು ಆಯ್ಕೆ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಐಟಿಐ ಟ್ರೇಡ್ ಅಭ್ಯರ್ಥಿಗಳು ‘ಅಪ್ರೆಂಟಿಸ್ಶಿಪ್ ಅವಕಾಶಗಳು’ ಮೇಲೆ ಕ್ಲಿಕ್ ಮಾಡುವ ಮೂಲಕ https://apprenticeshipindia.gov.in ಪೋರ್ಟಲ್ಗೆ ಲಾಗಿನ್ ಆಗಿ ‘ಸಂಶೋಧನಾ ಕೇಂದ್ರ ಇಮಾರತ್’ ಸ್ಥಾಪನಾ ಐಡಿ: E05203600040ಅನ್ನು ಆಯ್ಕೆ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಭವಿಷ್ಯದ ಬಳಕೆಗಾಗಿ ಅಭ್ಯರ್ಥಿಗಳು ತಪ್ಪದೇ ಅರ್ಜಿಯ ಸಹಿ ಮಾಡಿದ ಮುದ್ರಣ ಹಾಗೂ NATS/NAPS ಪ್ರೊಫೈಲ್ ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು.